ಈ 10 ಲಕ್ಷಣಗಳು ಕಂಡು ಬರುತ್ತಿದ್ದರೆ ನೀವು ಅತಿಯಾಗಿ ಸಕ್ಕರೆ ತಿನ್ನುತ್ತಿದ್ದೀರಿ ಎಂದರ್ಥ

ಕೆಲವೊಮ್ಮೆ ಅತಿಯಾಗಿ ಸಕ್ಕರೆ ಸೇವನೆ ಮಾಡುತ್ತಿದ್ದೀರಿ ಎಂಬುದು ಕೂಡ ಅರಿವಿಗೆ ಬರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಮಿತಿ ಮೀರಿದ ಸಿಹಿ ಅಂಶ ನಿಮ್ಮ ದೇಹವನ್ನು ಸೇರುತ್ತದೆ. ಬಳಿಕ ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ನಿಮ್ಮ ದೇಹ ಕೆಲವು ಎಚ್ಚರಿಕೆ ಸೂಚನೆಗಳನ್ನು ನೀಡುವ ಮೂಲಕ ನೀವು ಅತಿಯಾದ ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡುತ್ತಿದ್ದೀರಿ ಎನ್ನುವುದನ್ನು ಹೇಳುತ್ತದೆ. ಆದರೆ ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮುನ್ನೆಚ್ಚರಿಕೆ ವಹಿಸುವುದು ನಮ್ಮ ಕರ್ತವ್ಯವಾಗಿದೆ. ಹಾಗಾದರೆ ಅತಿಯಾಗಿ ಸಕ್ಕರೆ ತಿನ್ನುತ್ತಿದ್ದೀರಿ ಎನ್ನುವುದು ಹೇಗೆ ತಿಳಿಯುತ್ತದೆ? ಲಕ್ಷಣಗಳೇನು? ನಿಯಂತ್ರಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಈ 10 ಲಕ್ಷಣಗಳು ಕಂಡು ಬರುತ್ತಿದ್ದರೆ ನೀವು ಅತಿಯಾಗಿ ಸಕ್ಕರೆ ತಿನ್ನುತ್ತಿದ್ದೀರಿ ಎಂದರ್ಥ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 21, 2024 | 3:59 PM

ಆರೋಗ್ಯ ಹಾಳಾಗಲು ಮುಖ್ಯ ಕಾರಣ ಅತಿಯಾದ ಸಕ್ಕರೆ ಸೇವನೆ. ತಜ್ಞರು ಕೂಡ ಇದನ್ನೇ ಹೇಳುತ್ತಾರೆ. ಆದರೆ ಹಲವರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ಬದಲಾಗಿ ಸಕ್ಕರೆ ಸೇರಿಸಿದ ವಿವಿಧ ರೀತಿಯ ಆಹಾರಗಳನ್ನು ಪ್ರತಿನಿತ್ಯ ಸೇವನೆ ಮಾಡುತ್ತಾರೆ. ನೀವು ಅತಿಯಾಗಿ ಸಕ್ಕರೆ ಸೇವನೆ ಮಾಡುತ್ತಿದ್ದೀರಿ ಎಂಬುದು ಕೂಡ ನಿಮ್ಮ ಅರಿವಿಗೆ ಬರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಮಿತಿ ಮೀದರಿ ಸಿಹಿ ಅಂಶ ನಿಮ್ಮ ದೇಹವನ್ನು ಸೇರುತ್ತದೆ. ಬಳಿಕ ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ನಿಮ್ಮ ದೇಹ ಕೆಲವು ಎಚ್ಚರಿಕೆ ಸೂಚನೆಗಳನ್ನು ನೀಡುವ ಮೂಲಕ ನೀವು ಅತಿಯಾದ ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡುತ್ತಿದ್ದೀರಿ ಎನ್ನುವುದನ್ನು ಹೇಳುತ್ತದೆ. ಆದರೆ ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮುನ್ನೆಚ್ಚರಿಕೆ ವಹಿಸುವುದು ನಮ್ಮ ಕರ್ತವ್ಯವಾಗಿದೆ. ಹಾಗಾದರೆ ಅತಿಯಾಗಿ ಸಕ್ಕರೆ ತಿನ್ನುತ್ತಿದ್ದೀರಿ ಎನ್ನುವುದು ಹೇಗೆ ತಿಳಿಯುತ್ತದೆ? ಲಕ್ಷಣಗಳೇನು? ನಿಯಂತ್ರಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ವಿಷಯವಾಗಿ ಕೆಲವು ಮಾಹಿತಿಗಳನ್ನು ಪಿ ಕಾರ್ತಿಕ್ ಎಂಬುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ (nutritionistkarthik) ಹಂಚಿಕೊಂಡಿದ್ದು ಇದನ್ನು ಅರ್ಥ ಮಾಡಿಕೊಂಡರೆ ನೀವು ಹೆಚ್ಚು ಸಕ್ಕರೆ ಸೇವನೆ ಮಾಡುತ್ತಿದ್ದೀರೋ, ಇಲ್ಲವೋ ಎಂಬುದನ್ನು ತಿಳಿಯಬಹುದಾಗಿದ್ದು, ಈ ರೀತಿಯ ಮಾಹಿತಿ ಆರೋಗ್ಯಕರ ಜೀವನ ನಡೆಸಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬ್ರೈನ್ ಸ್ಟ್ರೋಕ್​​ಗೂ ಮೊದಲು ದೇಹದಲ್ಲಿ ಈ 5 ಲಕ್ಷಣಗಳು ಕಂಡುಬರುತ್ತವೆ

ನೀವು ಅತಿಯಾಗಿ ಸಕ್ಕರೆ ತಿನ್ನುತ್ತಿದ್ದಾಗ ಕಂಡು ಬರುವ ಲಕ್ಷಣಗಳಿವು;

1. ಯಾವಾಗಲೂ ಹಸಿವಾಗುವುದು: ಸಾಕಷ್ಟು ಸಕ್ಕರೆ ತಿನ್ನುವುದರಿಂದ ನಿಮಗೆ ಆಗಾಗ ಹಸಿವಾಗುತ್ತದೆ ಏಕೆಂದರೆ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಅಷ್ಟೇ ಬೇಗನೆ ಇಳಿಯುತ್ತದೆ. ಹಾಗಾಗಿ ಹಸಿವು ಜಾಸ್ತಿಯಾಗುತ್ತದೆ.

2. ತುಂಬಾ ಆಯಾಸ: ಸಕ್ಕರೆ ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ, ಆದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿದಾಗ ನಿಮಗೆ ನಿಜವಾಗಿಯೂ ಆಯಾಸವಾಗುತ್ತದೆ.

3. ತೂಕ ಹೆಚ್ಚಾಗುವುದು: ಹೆಚ್ಚುವರಿ ಸಕ್ಕರೆ ಕೊಬ್ಬಾಗಿ ಬದಲಾಗುತ್ತದೆ, ವಿಶೇಷವಾಗಿ ನಿಮ್ಮ ಹೊಟ್ಟೆಯ ಸುತ್ತಲೂ ಬೊಜ್ಜು ಬರುತ್ತದೆ. ಏಕೆಂದರೆ ನಿಮ್ಮ ದೇಹವು ಹೆಚ್ಚುವರಿ ಕ್ಯಾಲೊರಿಗಳನ್ನು ಕೊಬ್ಬಾಗಿ ಸಂಗ್ರಹಿಸುತ್ತದೆ.

4. ಚರ್ಮದ ಸಮಸ್ಯೆಗಳು: ಅತಿಯಾದ ಸಕ್ಕರೆಯು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವುದರಿಂದ ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು, ಇದು ಉರಿಯೂತಕ್ಕೂ ಕಾರಣವಾಗುತ್ತದೆ.

5. ಕುಳಿಗಳು: ಸಕ್ಕರೆ ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ, ಇದು ಹೆಚ್ಚಿನ ಕುಳಿಗಳು ಮತ್ತು ದಂತಕ್ಷಯಕ್ಕೆ ಕಾರಣವಾಗುತ್ತದೆ.

6. ಅಧಿಕ ರಕ್ತದೊತ್ತಡ: ಅತಿಯಾದ ಸಕ್ಕರೆ ಸೇವನೆಯು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

7. ಮನಸ್ಥಿತಿಯ ಬದಲಾವಣೆಗಳು: ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಳಿತ ನಿಮ್ಮ ಮನಃಸ್ಥಿತಿಯನ್ನು ಹದಗೆಡಿಸುತ್ತದೆ, ಆತಂಕ ಅಥವಾ ಕಿರಿಕಿರಿಯನ್ನುಂಟು ಮಾಡುತ್ತದೆ.

8. ಸಿಹಿ ತಿನ್ನುವ ಬಯಕೆ: ಸಕ್ಕರೆ ಹೆಚ್ಚಾಗಿ ತಿನ್ನುವುದರಿಂದ ನಿಮಗೆ ಇನ್ನೂ ಹೆಚ್ಚಿನ ಸಿಹಿ ಅಂಶ ಬೇಕು ಎನಿಸುತ್ತದೆ.

9. ಕೀಲು ನೋವು: ಸಕ್ಕರೆ ನಿಮ್ಮ ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ, ಇದು ಕೀಲು ನೋವು ಮತ್ತು ಇತರ ಉರಿಯೂತದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

10. ಕೆಟ್ಟ ನಿದ್ರೆ: ಸಕ್ಕರೆ ನಿಮ್ಮ ನಿದ್ರೆಗೆ ಗೊಂದಲ ತರುತ್ತದೆ. ಇದರಿಂದ ನಿದ್ರೆ ಮಾಡುವುದಕ್ಕೆ ಕಷ್ಟವಾಗುತ್ತದೆ.

ಈ ರೀತಿಯ ಲಕ್ಷಣಗಳು ನಿಮಗೆ ಕಾಣಿಸುತ್ತಿದ್ದರೆ ತಡಮಾಡದೆಯೇ ವೈದ್ಯರನ್ನು ಸಂಪರ್ಕಿಸಿ. ಸಿಹಿ ಅಂಶದ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಸಿಹಿ ತಿನ್ನಬೇಕು ಎನಿಸಿದಾಗ ಸ್ವಲ್ಪ ಕಷ್ಟ ಪಟ್ಟು ಅದಕ್ಕೆ ಪರ್ಯಾಯವಾಗಿ ಬೇರೆ ಪದಾರ್ಥಗಳನ್ನು ಸೇವನೆ ಮಾಡಿ. ಹೆಚ್ಚಿನ ಮಾಹಿತಿಗೆ ನಿಮ್ಮ ತಜ್ಞರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ