ಸಕ್ಕರೆ ಕಾಯಿಲೆ ಇರುವವರು ಖರ್ಜೂರ ತಿನ್ನಬಹುದೇ? ತಿಂದರೆ ಏನಾಗುತ್ತದೆ?

ಖರ್ಜೂರದ ವಿಶೇಷತೆಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು. ಪ್ರತಿದಿನ ಇದನ್ನು ಸೇವನೆ ಮಾಡುವುದಕ್ಕೆ ಅನೇಕ ಜನರು ಇಷ್ಟಪಡುತ್ತಾರೆ. ಆದರೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರು ಇದನ್ನು ಸೇವನೆ ಮಾಡಬಹುದೇ? ಅಥವಾ ತಿನ್ನುವುದರಿಂದ ಅಪಾಯವಿದೆಯೇ ಎಂಬಿತ್ಯಾದಿ ಸಂದೇಹಗಳಿದ್ದರೆ, ತಜ್ಞರು ಇದನ್ನು ಮಿತವಾಗಿ ತಿನ್ನಲು ಸಲಹೆ ನೀಡುತ್ತಾರೆ. ಖರ್ಜೂರದಲ್ಲಿ ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ವಿಟಮಿನ್ ಎ, ಕೆ ಮತ್ತು ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ಸಮೃದ್ಧವಾಗಿವೆ. ಅಲ್ಲದೆ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಕೂಡ ಹೇರಳವಾಗಿದೆ, ಜೊತೆಗೆ ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಕ್ಕರೆ ಕಾಯಿಲೆ ಇರುವವರು ಖರ್ಜೂರ ತಿನ್ನಬಹುದೇ? ತಿಂದರೆ ಏನಾಗುತ್ತದೆ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 20, 2024 | 5:15 PM

ಇತ್ತೀಚಿನ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ, ಮಧುಮೇಹ ರೋಗವು ಅನೇಕ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಇದು ವಯಸ್ಸನ್ನು ಲೆಕ್ಕಿಸದೆ ಚಿಕ್ಕ ಮಕ್ಕಳಿಂದ ವಯಸ್ಕರ ವರೆಗೆ ಎಲ್ಲರನ್ನೂ ಕಾಡುತ್ತಿದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಅದನ್ನು ನಿಯಂತ್ರಣದಲ್ಲಿಡಲು ಅನೇಕ ಮಾರ್ಗಗಳಿವೆ. ಇದನ್ನು ಸಮಯೋಚಿತವಾಗಿ ಗುರುತಿಸಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಅದು ಇತರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಕ್ಕರೆ ಕಾಯಿಲೆ ಇರುವವರು ತಾವು ಸೇವನೆ ಮಾಡುವ ಆಹಾರದ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ. ಅದರಲ್ಲಿಯೂ ಹೆಚ್ಚು ಹೆಚ್ಚು ಸಿಹಿತಿಂಡಿಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಆದರೆ ಮಧುಮೇಹ ಇದ್ದವರು ಖರ್ಜೂರವನ್ನು ತಿನ್ನಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಹಲವರಿಗೆ ಅನುಮಾನವಿದೆ. ಈ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ.

ಖರ್ಜೂರದ ವಿಶೇಷತೆಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು. ಪ್ರತಿದಿನ ಇದನ್ನು ಸೇವನೆ ಮಾಡುವುದಕ್ಕೆ ಅನೇಕ ಜನರು ಇಷ್ಟಪಡುತ್ತಾರೆ. ಆದರೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರು ಇದನ್ನು ಸೇವನೆ ಮಾಡಬಹುದೇ? ಅಥವಾ ತಿನ್ನುವುದರಿಂದ ಅಪಾಯವಿದೆಯೇ ಎಂಬಿತ್ಯಾದಿ ಸಂದೇಹಗಳಿದ್ದರೆ, ತಜ್ಞರು ಇದನ್ನು ಮಿತವಾಗಿ ತಿನ್ನಲು ಸಲಹೆ ನೀಡುತ್ತಾರೆ. ಖರ್ಜೂರದಲ್ಲಿ ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ವಿಟಮಿನ್ ಎ, ಕೆ ಮತ್ತು ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ಸಮೃದ್ಧವಾಗಿವೆ. ಅಲ್ಲದೆ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಕೂಡ ಹೇರಳವಾಗಿದೆ, ಜೊತೆಗೆ ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಎಷ್ಟು ಖರ್ಜೂರ ಸೇವನೆ ಮಾಡಬಹುದು?

ಮಧುಮೇಹದಿಂದ ಬಳಲುತ್ತಿರುವವರು ಪ್ರತಿದಿನ 2 ಅಥವಾ 3 ಖರ್ಜೂರಗಳನ್ನು ಸೇವಿಸಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಖರ್ಜೂರದಲ್ಲಿರುವ ಫೈಬರ್ ಅಂಶವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯವನ್ನು ಆರೋಗ್ಯವಾಗಿಡುತ್ತದೆ. ಖರ್ಜೂರವು ಸಿಹಿಯಾಗಿದ್ದರೂ ಕೊಲೆಸ್ಟ್ರಾಲ್ ಇಲ್ಲದೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. ಆದ್ದರಿಂದ ಖರ್ಜೂರವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಹಾಗಾಗಿ ಇದು ಸಿಹಿಯಾಗಿದ್ದರೂ, ಸಕ್ಕರೆ ಕಾಯಿಲೆ ಇರುವವರು ಇದನ್ನು ತಿನ್ನಬಹುದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಖರ್ಜೂರದಲ್ಲಿನ ಗ್ಲೈಸೆಮಿಕ್ ಸೂಚ್ಯಂಕವು ಶೇಕಡಾ 43 ರಿಂದ 55 ರವರೆಗೆ ಇರುತ್ತದೆ. ಆದ್ದರಿಂದ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ತ್ವರಿತವಾಗಿ ಏರುವುದಿಲ್ಲ. ಅದಕ್ಕಾಗಿಯೇ ನೀವು ಅವುಗಳನ್ನು ತಿನ್ನಬಹುದು.

ಇದನ್ನೂ ಓದಿ: ರಾತ್ರಿಯಲ್ಲಿ ಬಟ್ಟೆಯಿಲ್ಲದೆ ಮಲಗಿದರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡಿ

ಖರ್ಜೂರದಲ್ಲಿರುವ ಫೈಬರ್ ಅಂಶವು ನಿಧಾನವಾಗಿ ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗದಂತೆ ತಡೆಯುತ್ತದೆ. ತೂಕ ಹೆಚ್ಚಾಗುವ ಅಪಾಯವೂ ಇರುವುದಿಲ್ಲ. ಖರ್ಜೂರದಲ್ಲಿರುವ ಕ್ಯಾಲ್ಸಿಯಂ ಜೊತೆಗೆ, ಹೆಚ್ಚಿನ ಖನಿಜಾಂಶಗಳು ಮೂಳೆಯನ್ನು ಬಲಗೊಳಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ಎ, ಇ ಮತ್ತು ಇತರ ಜೀವಸತ್ವಗಳಿದ್ದು, ಇದು ಕಣ್ಣಿಗೆ, ರಕ್ತಕ್ಕೆ ಒಳ್ಳೆಯದು. ಅಲ್ಲದೆ ಖರ್ಜೂರವು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ನೀವು ಪ್ರತಿದಿನ ತಿನ್ನಬಹುದು ಎಂದು ತಜ್ಞರು ಹೇಳುತ್ತಾರೆ. ನೀವು ಅತಿಯಾಗಿ ಸೇವಿಸಿದರೆ, ಖರ್ಜೂರದಲ್ಲಿನ ಕಾರ್ಬೋಹೈಡ್ರೇಟ್ಗಳಿಂದಾಗಿ ಅಡ್ಡಪರಿಣಾಮಗಳ ಸಾಧ್ಯತೆಯಿದೆ. ಅದಕ್ಕಾಗಿಯೇ ಮಧುಮೇಹ ಇರುವವರು ದಿನಕ್ಕೆ 2 ಖರ್ಜೂರಗಳನ್ನು ಸೇವನೆ ಮಾಡುವುದು ಉತ್ತಮ. ಆದರೆ ಅವುಗಳನ್ನು ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಅವರ ಸಲಹೆಯ ಪ್ರಕಾರ ಈ ಖರ್ಜೂರಗಳನ್ನು ತಿನ್ನುವುದು ಸೂಕ್ತ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ