
ಈ ರಕ್ತದೊತ್ತಡ (Blood Pressure) ಒಂದು ರೀತಿಯ ಸೈಲೆಂಟ್ ಕ್ಲಿಲರ್, ಅದು ಹೇಗೆ ಮನುಷ್ಯನ ದೇಹವನ್ನು ಕೊಲ್ಲುತ್ತದೆ ಎಂಬುದು ಗೊತ್ತಾಗಲ್ಲ. ಅದಕ್ಕೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕೆಲವೊಂದು ಕ್ರಮಗಳನ್ನು ಪಾಲಿಸಬೇಕು. ಕೇವಲ 60 ಸೆಕೆಂಡ್ಗಳಲ್ಲಿ ಅಧಿಕ ರಕ್ತದೊತ್ತಡವನ್ನು ಹೇಗೆ ಕಡಿಮೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಈ ಸಮಸ್ಯೆ ಹೃದಯ ಮತ್ತು ಮೂತ್ರಪಿಂಡಗಳ (Lower High BP) ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ನೀವು ಕೂಡ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಅದನ್ನು ಕಡಿಮೆ ಮಾಡುವ 3 ತಂತ್ರಗಳು ಇಲ್ಲಿದೆ ನೋಡಿ. ಈ ತಂತ್ರವು ಕೇವಲ 60 ಸೆಕೆಂಡುಗಳಲ್ಲಿ ರಕ್ತದೊತ್ತಡವನ್ನು ನಿಯಂತ್ರಣ ಮಾಡಬಹುದು. ಜತೆಗೆ ಇದನ್ನು ನಿಯಂತ್ರಣದಲ್ಲಿಡುವ 5 ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು.
ಯೋಗೇಂದ್ರ ಪ್ರಾಣಾಯಾಮ : ಯೋಗೇಂದ್ರ ಪ್ರಾಣಾಯಾಮ ಮಾಡುವುದರಿಂದ ಹೃದಯ ಬಡಿತವನ್ನು ನಿಯಂತ್ರಿಸುವ, ಒತ್ತಡವನ್ನು ಕಡಿಮೆ ಮಾಡುವ, ಮನಸ್ಸಿಗೆ ಶಾಂತಿಯನ್ನು ತರುವ ಮತ್ತು ರಕ್ತದೊತ್ತಡವನ್ನು ಸಾಮಾನ್ಯಗೊಳಿಸಿ, ನರಮಂಡಲವನ್ನು ಸಮತೋಲನಗೊಳಿಸುತ್ತದೆ.
ಮಾಡುವುದು ವಿಧಾನ: ನಿಧಾನವಾಗಿ ಉಸಿರನ್ನು ಒಳಗೆಳೆದುಕೊಳ್ಳಿ, ಸ್ವಲ್ಪ ಹೊತ್ತು ಹಾಗೆಯೇ ಹಿಡಿದುಕೊಳ್ಳಿ, ಈ ಸಮಯದಲ್ಲಿ ಮನಸ್ಸಿನಲ್ಲಿ 1ರಿಂದ 4 ವರೆಗೆ ಎಣಿಸಿಕೊಳ್ಳಿ ಉಸಿರನ್ನು ಬಿಡಿ. ಇದನ್ನು ಒಂದು ನಿಮಿಷ ಮಾಡಿ.
ಮುಖವನ್ನು ತಣ್ಣೀರಿನಿಂದ ತೊಳೆಯಿರಿ: ಮುಖದ ಮೇಲೆ ತಣ್ಣೀರು ಸಿಂಪಡಿಸುವುದರಿಂದ ಸಸ್ತನಿಗಳ ಡೈವ್ ರಿಫ್ಲೆಕ್ಸ್ ಸಕ್ರಿಯಗೊಳ್ಳುತ್ತದೆ, ಇದು ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ. ಇದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಮಾಡುವುದು ವಿಧಾನ: ಮುಖದ ಮೇಲೆ, ವಿಶೇಷವಾಗಿ ಹಣೆ, ಕಣ್ಣುಗಳು ಮತ್ತು ಕೆನ್ನೆಗಳ ಮೇಲೆ ತಣ್ಣೀರು ಸಿಂಪಡಿಸಬೇಕು. ಅಥವಾ ತಣ್ಣೀರಿನಲ್ಲಿ ಬಟ್ಟೆಯನ್ನು ಅದ್ದಿ ನಿಮ್ಮ ಮುಖದ ಮೇಲೆ ಇಡಬಹುದು.
ಸ್ನಾಯು ವಿಶ್ರಾಂತಿ : ನಿಮ್ಮ ದೇಹದ ವಿವಿಧ ಭಾಗಗಳ ಸ್ನಾಯುಗಳನ್ನು 5 ಸೆಕೆಂಡುಗಳ ಕಾಲ ಬಿಗಿಗೊಳಿಸಬೇಕು. ನಂತರ 30 ಸೆಕೆಂಡುಗಳ ನಂತರ ಸಡಿಲ ಮಾಡಿ.
1.ಮುಷ್ಟಿಯನ್ನು 5 ಸೆಕೆಂಡುಗಳ ಕಾಲ ಬಿಗಿಗೊಳಿಸಿ ನಂತರ ಅವುಗಳನ್ನು ಸಡಿಲಗೊಳಿಸಿ
2.ಭುಜಗಳನ್ನು ಮೇಲಕ್ಕೆ ಎತ್ತಿ, ನಂತರ ನಿಧಾನವಾಗಿ ಕೆಳಗೆ ಇಳಿಸಿ
3.ಕಾಲ್ಬೆರಳುಗಳನ್ನು ಬಿಗಿ ಮಾಡಿ, ನಂತರ ನಿಧಾನವಾಗಿ ಬಿಡಿ
ಇದನ್ನೂಓದಿ: ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಹಾರ್ವರ್ಡ್ ವೈದ್ಯರು ತಿಳಿಸಿರುವ 5 ಆಹಾರಗಳು
ಸಮತೋಲಿತ ಉಪ್ಪು ಸೇವನೆ
ನಿಯಮಿತ ವ್ಯಾಯಾಮ
ಧ್ಯಾನ ಮತ್ತು ಯೋಗ
ಒಳ್ಳೆಯ ನಿದ್ರೆ
ರಕ್ತದೊತ್ತಡ ಪರೀಕ್ಷೆ
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ