ಕ್ಯಾಲೋರಿ ಕಡಿಮೆ ಇರುವ ಆಹಾರಗಳನ್ನು ಸೇವಿಸಿದರೆ ಮಾತ್ರ ನಿಮ್ಮ ತೂಕ ಕಡಿಮೆ ಆಗುತ್ತದೆ. ಇದು ನಿಮ್ಮ ತೂಕ ಕಳೆದುಕೊಳ್ಳುವ ಪ್ರಮಾಣದ ಮೇಲೆ ಪರಿಣಾಮವನ್ನು ಉಂಟು ಮಾಡಬಹುದು. ಇದರಿಂದ ಆಹಾರ, ಜೀವನಶೈಲಿ, ಊಟದ ಸಮಯ, ಭಾಗದ ಗಾತ್ರ, ಚಯಾಪಚಯ, ಇತರ ವಿಚಾರಗಳು ಬದಲಾಗಬಹುದು. ದ್ರವ ಕ್ಯಾಲೋರಿಗಳ ಪ್ರಮಾಣವನ್ನು ಅನೇಕರು ನಿರ್ಲಕ್ಷಿಸುತ್ತಾರೆ. ಇದು ಅರಿವಿಲ್ಲದೆ ತೂಕ ನಷ್ಟ ಫಲಿತಾಂಶಗಳನ್ನು ಅಡ್ಡಿಪಡಿಸಬಹುದು. ಇನ್ನು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ನೀವು ಈ ಪಾನೀಯಗಳನ್ನು ಸೇವನೆ ಮಾಡಬಾರದು.
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ಹಣ್ಣಿನ ರಸಗಳು ಅತ್ಯುತ್ತಮ ಆಯ್ಕೆ ಅಲ್ಲ. ಹಣ್ಣಿನ ರಸಗಳು ಫೈಬರ್‌ಗಳನ್ನು ಹೊಂದಿಲ್ಲ. ಕ್ಯಾಲೊರಿಗಳು ಮತ್ತು ಸಕ್ಕರೆ ಅಂಶದಿಂದ ತುಂಬಿರುತ್ತವೆ. ಆದ್ದರಿಂದ, ಹಣ್ಣನ್ನು ಹಾಗೆಯೇ ತಿನ್ನುವುದು ಉತ್ತಮ.
ಕಾರ್ಬೊನೇಟೆಡ್ ಪಾನೀಯಗಳು ಪೌಷ್ಟಿಕಾಂಶದಿಂದ ಇರುವುದಿಲ್ಲ. ಇದು ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಜತೆಗೆ ಇದರಲ್ಲಿ ಸೋಡಾ ಅಂಶಗಳು ಹೆಚ್ಚಿರುವ ಕಾರಣ ಇದು ಆರೋಗ್ಯದ ಮೇಲೆಯೂ ಪರಿಣಾಮವನ್ನು ಉಂಟು ಮಾಡಬಹುದು.
ಇದನ್ನೂ ಓದಿ: ಅಮೆರಿಕದಲ್ಲಿ ಹೊಸ ವೈರಸ್ ಪತ್ತೆ, ನೊರೊವೈರಸ್ ಹೇಗೆ ಹರಡುತ್ತದೆ?
ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ಸಾಮಾನ್ಯವಾಗಿ ‘ಖಾಲಿ’ ಕ್ಯಾಲೋರಿಗಳು ಎಂದು ಕರೆಯಲಾಗುತ್ತದೆ. ಇದರರ್ಥ ಈ ಪಾನೀಯಗಳು ಯಾವುದೇ ಅಥವಾ ಕನಿಷ್ಠ ಪೋಷಣೆಯೊಂದಿಗೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದರ ಜತೆಗೆ ಸೇವನೆ ಮಾಡುವ ಚಿಪ್ಸ್ ಇನ್ನಿತರ ಖಾರದ ತಿಂಡಿಗಳು ಒಟ್ಟಾರೆ ಕ್ಯಾಲೋರಿ ಸಂಖ್ಯೆಯನ್ನು ಹೆಚ್ಚಿಸುತ್ತವೆ.
ವ್ಯಾಯಾಮದ ನಂತರ ನೀವು ಆರೋಗ್ಯಯುತವಾದ ಪಾನೀಯ ಸೇವನೆ ಮಾಡಿದ್ರೆ ನೀವು ತೂಕ ಇಳಿಸಿಕೊಳ್ಳಲು ಉಪಯುಕ್ತ. ಆದರೆ ಹೆಚ್ಚಿನ ಪ್ರಮಾಣದ ಕೆಫೀನ್ ಮತ್ತು ಇತರ ಉತ್ತೇಜಕ ಪದಾರ್ಥಗಳು ಹೃದಯ ಬಡಿತ ಮತ್ತು ರಕ್ತದೊತ್ತಡಕ್ಕೆ ಕಾರಣವಾಗಬಹುದು. ಹೆಚ್ಚಿನ ಶಕ್ತಿ ಪಾನೀಯಗಳು ಸಕ್ಕರೆ ಮತ್ತು ಅನಗತ್ಯ ಕ್ಯಾಲೊರಿಗಳಿಂದ ಕೂಡಿರುತ್ತವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ