
ಗರ್ಭಾವಸ್ಥೆ (Pregnancy) ಯಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳಾಗುವುದು ಬಹಳ ಸಾಮಾನ್ಯ. ಆದರೆ ಅವುಗಳ ಬಗ್ಗೆ ಆಕೆಯ ಮನೆಯವರು, ಅದರಲ್ಲಿಯೂ ಮುಖ್ಯವಾಗಿ ಅವಳ ಗಂಡ (Husband) ತಿಳಿದುಕೊಂಡಿರಬೇಕಾಗುತ್ತದೆ. ಆಗ ಮಾತ್ರ ಆಕೆಯ ಆರೋಗ್ಯದ ಬಗ್ಗೆ ಆತ ಸರಿಯಾಗಿ ಗಮನ ಹರಿಸಲು ಸಹಾಯವಾಗುತ್ತದೆ. ತನ್ನ ಹೆಂಡತಿ (Wife) ಬಸುರಿ (Pregnant woman) ಎಂದು ತಿಳಿದ ತಕ್ಷಣ ಪ್ರತಿಯೊಬ್ಬ ಗಂಡನು ಕೂಡ ತನ್ನ ಹೆಂಡತಿಗಾಗಿ ಆಕೆಯ ದೇಹದಲ್ಲಾಗುವ ಬದಲಾವಣೆಯ ಬಗ್ಗೆ ವಿವರವಾಗಿ ತಿಳಿಯಬೇಕಾಗುತ್ತದೆ. ಹಾಗಾದರೆ ಗಂಡನಾದವನು ಹೆಂಡತಿ ಗರ್ಭ ಧರಿಸಿದ ಸಮಯದಲ್ಲಿ ಯಾವ ರೀತಿಯ ಸಲಹೆಯನ್ನು ಅನುಸರಿಸಬೇಕು? ಆಕೆಯನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ವಿಷಯದ ಕುರಿತಾಗಿ ಡಾ. ಐಶ್ವರ್ಯಾ ಪ್ರಭಾಕರ್ ಎನ್ನುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಅವರು ತಿಳಿಸಿರುವ ಮಾಹಿತಿ ಪ್ರಕಾರ, ಗಂಡಸರು ತಮ್ಮ ಹೆಂಡತಿ ಗರ್ಭಧರಿಸಿರುವಾಗ, ಆಕೆ ಒತ್ತಡ ತೆಗೆದುಕೊಂಡು ಯಾವುದೇ ರೀತಿಯ ಕೆಲಸ ಮಾಡದಂತೆ ಜೊತೆಗೆ ಯಾವುದೇ ವಿಷಯದ ಬಗ್ಗೆ ಹೆಚ್ಚು ಯೋಚನೆ ಮಾಡದಂತೆ ನೋಡಿಕೊಳ್ಳಬೇಕು. ಏಕೆಂದರೆ ಯೋಚನೆ ಮಾಡಿದಷ್ಟು ಅಥವಾ ಸಣ್ಣ ಪುಟ್ಟ ಕಾರಣಗಳಿಗೆ ಚಿಂತೆ ಮಾಡಿದಷ್ಟು ಅದು ಗರ್ಭಿಣಿಯರ ಇಮ್ಮ್ಯೂನಿಟಿಯನ್ನು ಕಡಿಮೆ ಮಾಡುತ್ತದೆ. ಅದಲ್ಲದೆ ಒತ್ತಡ ಹೆಚ್ಚಾದಾಗ ಹಾರ್ಮೋನ್ ಬದಲಾವಣೆ ಆಗುತ್ತದೆ ಆಗ ಪ್ರೆಗ್ನೆನ್ಸಿ ಯಲ್ಲಿ ತೊಂದರೆ ಆಗಬಹುದು. ಹಾಗಾಗಿ ಅವರನ್ನು ಬಹಳ ಎಚ್ಚರಿಕೆಯಿಂದ ಮತ್ತು ಸಾಧ್ಯವಾದಷ್ಟು ಪ್ರೀತಿಯಿಂದ ನೋಡಿಕೊಳ್ಳಬೇಕು.
ಇದನ್ನೂ ಓದಿ: ಬೇರೆಯವರು ಬಳಸಿದ ಲೋಟದಿಂದ ನೀರು ಕುಡಿಯುವ ಅಭ್ಯಾಸ ಇದ್ದರೆ ಇವತ್ತೇ ಬಿಟ್ಟು ಬಿಡಿ
ಗರ್ಭಾವಸ್ಥೆಯಲ್ಲಿರುವಾಗ ಕೆಲವು ಸಮಯದಲ್ಲಿ ಅವರಿಗೆ ಇಷ್ಟವಾಗದ ವಿಷಯಗಳು ನಡೆಯುತ್ತವೆ. ಅಥವಾ ಯಾವುದಾದರೂ ಕಹಿ ಘಟನೆಗಳು ಅವರ ಮನಸ್ಸಿನಲ್ಲಿಯೇ ಬಲವಾಗಿ ಉಳಿದುಕೊಳ್ಳುತ್ತದೆ ಹಾಗಾಗಿ ಇಂತಹ ಸಂದರ್ಭಗಳಲ್ಲಿ ಆಗುವಂತಹ ಚಿಂತೆ, ಒತ್ತಡ ಮಗುವಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಗರ್ಭಿಣಿಯರು ಆದಷ್ಟು ಶಾಂತವಾಗಿ ಮತ್ತು ಸಂತೋಷವಾಗಿ ಇರಲು ಅವರಿಗೆ ಅನುಕೂಲ ಮಾಡಿಕೊಡಿ. ಯೋಚನೆ ಮಾಡುವುದನ್ನು ಬಿಡಲು ಹೇಳಿ. ಅದರ ಜೊತೆಗೆ ನಿಮ್ಮ ಬೆಂಬಲವೂ ಇರಲಿ. ಏಕೆಂದರೆ ಪ್ರತಿ ಹೆಣ್ಣು ಕೂಡ ತಾನು ತಾಯಿಯಾಗುತ್ತಿರುವ ಸಂತಸವನ್ನು ಮನಸಾರೆ ಅನುಭವಿಸಬೇಕು, ಆ ಸಮಯದಲ್ಲಿ ಒಳ್ಳೆಯ ಪುರಾಣ ಕಥೆಗಳನ್ನು ಕೇಳಬೇಕು, ಸಂಗೀತ ಆಲಿಸುತ್ತಾ ಸಂತೋಷದಿಂದ ಕಾಲ ಕಳೆಯಬೇಕು. ಈ ರೀತಿಯ ಅಭ್ಯಾಸ ನಿಮ್ಮ ಹೆಂಡತಿ ಮತ್ತು ನಿಮ್ಮ ಮಗುವಿಗೂ ಒಳ್ಳೆಯದು ಏಕೆಂದರೆ ಆ ಕ್ಷಣ ಮತ್ತೆ ಸಿಗುವುದಿಲ್ಲ. ಹಾಗಾಗಿ ಅವರು ಒಂಬತ್ತು ಮಾಸದ ಪ್ರತಿ ಕ್ಷಣವನ್ನು ಆನಂದಿಸಲು ಅನುವು ಮಾಡಿಕೊಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ