ನಾಲ್ಕರಿಂದ ಐದು ನಿಮಿಷಗಳ ವ್ಯಾಯಾಮವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ: ಅಧ್ಯಯನ
ಸಂಶೋಧನೆಯ ಪ್ರಕಾರ, ದೈನಂದಿನ ದಿನಚರಿಯಲ್ಲಿ ಕೇವಲ 4-5 ನಿಮಿಷಗಳ ಮಾಡುವ ಶಕ್ತಿಯುತ ಚಲನೆಯು ಅಥವಾ ವ್ಯಾಯಾಮವು ವಿವಿಧ ಕ್ಯಾನ್ಸರ್‌ಗಳ ಅಪಾಯವನ್ನು ಶೇಕಡಾ 32 ರಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯದ ಸಿಡ್ನಿ ವಿಶ್ವವಿದ್ಯಾನಿಲಯದ ಸಂಶೋಧಕರು ಸುಮಾರು ಏಳು ವರ್ಷಗಳ ಕಾಲ ನಡೆಸಿದ ಸಂಶೋಧನೆಯ ಪ್ರಕಾರ ನಾಲ್ಕರಿಂದ ಐದು ನಿಮಿಷಗಳ ಮಾಡುವ ಶಕ್ತಿಯುತ ಚಲನೆಯು ಅಥವಾ ವ್ಯಾಯಾಮವು ವಿವಿಧ ಕ್ಯಾನ್ಸರ್‌ಗಳ ಅಪಾಯವನ್ನು ಶೇಕಡಾ 32 ರಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ವ್ಯಾಯಾಮ ಸುಮಾರು ಒಂದು ನಿಮಿಷದವರೆಗೆ, ಶ್ರಮದಾಯಕ ಕೆಲಸಗಳನ್ನು ಒಳಗೊಂಡಿರಬಹುದು ಅಂದರೆ ನಿಮ್ಮ ದೈನಂದಿನ ಕೆಲಸ ಕಾರ್ಯಗಳಾದ, ದಿನಸಿಗಳನ್ನು ಸಾಗಿಸುವುದು, ವಾಕಿಂಗ್ ಮಧ್ಯಂತರಗಳು ಅಥವಾ ಮಕ್ಕಳೊಂದಿಗೆ ಆಟಗಳನ್ನು ಆಡುವುದು, ಮನೆಗೆಲಸ ಕೂಡ ಒಳಗೊಂಡಿದೆ.
ವ್ಯಾಯಾಮ ಮಾಡದ ವಯಸ್ಕರಲ್ಲಿ ಸ್ತನ, ಎಂಡೊಮೆಟ್ರಿಯಲ್ ಅಥವಾ ಕೊಲೊನ್‌ನಂತಹ ನಿರ್ದಿಷ್ಟ ಕ್ಯಾನ್ಸರ್‌ಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಹೆಚ್ಚಿನ ಮಧ್ಯವಯಸ್ಕ ವ್ಯಾಯಾಮ ಮಾಡುವುದಿಲ್ಲ, ಇದು ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದಿದ್ದಾರೆ.
ಇದನ್ನೂ ಓದಿ: Diabetes new symptoms: ಮಧುಮೇಹದ ಹೊಸ ರೋಗಲಕ್ಷಣ ಮುನ್ನೆಲೆಗೆ ಬಂದಿದೆ, ತಕ್ಷಣ ಅದನ್ನು ಪರೀಕ್ಷಿಸಿ
ದಿನಕ್ಕೆ ಕೇವಲ ನಾಲ್ಕೈದು ನಿಮಿಷಗಳ ಕಾಲ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ಒಟ್ಟಾರೆ ಕ್ಯಾನ್ಸರ್ ಅಪಾಯವನ್ನು ಶೇಕಡಾ 18 ರಷ್ಟು ಮತ್ತು ಅದಕ್ಕಿಂತ ಕಡಿಮೆಗೊಳಿಸುವುದರೊಂದಿಗೆ ಸಂಬಂಧಿಸಿದೆ. 6 ವರ್ಷಗಳ ಸರಾಸರಿ ಅನುಸರಣೆಯಲ್ಲಿ, ಸಂಶೋಧಕರು ತಮ್ಮ ಬಿಡುವಿನ ವೇಳೆಯಲ್ಲಿ ವ್ಯಾಯಾಮ ಮಾಡದ 62 ವರ್ಷ ವಯಸ್ಸಿನ 22,398 ವ್ಯಕ್ತಿಗಳ ಅಧ್ಯಯನದ ಮಾದರಿಯಲ್ಲಿ 2,356 ಹೊಸ ಕ್ಯಾನ್ಸರ್ ಸಂಭವಗಳನ್ನು (ದೈಹಿಕ ಚಟುವಟಿಕೆಗೆ ಸಂಬಂಧಿಸಿದ ಕ್ಯಾನ್ಸರ್ನಲ್ಲಿ 1,084) ಕಂಡುಹಿಡಿದಿದ್ದಾರೆ. ಇದಲ್ಲದೇ ದೈನಂದಿನ ವ್ಯಾಯಾಮ ಅಥವಾ ಕೆಲ ಹೊತ್ತಿನ ವರೆಗೆ ಧಾನ್ಯದಲ್ಲಿ ತೊಡಗಿಸಿಕೊಳ್ಳುವುದು ಕೂಡ ಮುಖ್ಯ. ಯಾಕೆಂದರೆ ಇದು ದೈಹಿಕ ಆರೋಗ್ಯದ ಜೊತೆಗೆ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: