ಅತಿಯಾದರೆ ಅಮೃತವು ವಿಷ ಎಂಬ ಮಾತಿದೆ. ಹಾಗೆ ಯಾವುದಾದರೂ ಅತಿಯಾದರೆ ಅದು ನಿಮಗೆ ಹಾನಿಕಾರಕವಾಗಬಹುದು. ಆದ್ದರಿಂದ ಹೆಚ್ಚುವರಿ ಕಾಫಿ ಮತ್ತು ಚಹಾವನ್ನು ಸೇವಿಸುವುದನ್ನು ಹೇಗೆ ನಿಯಂತ್ರಿಸುವುದು ಎಂಬುದು ಇಲ್ಲಿದೆ. ಒಂದು ಕಪ್ ಕಾಫಿ ಅಥವಾ ಟೀ ಇಲ್ಲದೆ ಬೆಳಗಿನ ಸಮಯವು ಸಂಪೂರ್ಣವಾಗಿ ಅಪೂರ್ಣವಾಗಿರುತ್ತದೆ. ಅದರಲ್ಲೂ ಈ ಚಳಿಗಾಲದಲ್ಲಿ ಅದರ ಸೇವನೆ ತುಸು ಹೆಚ್ಚೇ ಇರುತ್ತದೆ. ಇದರಲ್ಲಿ ಕೆಫೀನ್ ಅಂಶ ಇರುವುದರಿಂದ ಅತಿಯಾಗಿ ಸೇವಿಸುವುದು ಹಾನಿಕಾಕರವಾಗಬಹುದು. ಹೆಚ್ಚಿನ ಕೆಫೀನ್ ಸೇವನೆಯು ಒತ್ತಡ ಅಥವಾ ನಿದ್ರಾಹೀನತೆಗೂ ಕಾರಣವಾಗಬಹುದು. ಆದ್ದರಿಂದ ಕಾಫಿ ಮತ್ತು ಟೀ ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು. ನಿಮ್ಮ ಚಹಾ ಅಥವಾ ಕಾಫಿಯ ಕಡುಬಯಕೆ (ಕ್ರೇವಿಂಗ್ಸ್)ಗಳನ್ನು ಹೇಗೆ ನಿಯಂತ್ರಿಸುವುದು ಎಂಬುವುದು ಇಲ್ಲಿದೆ.
ಗಿಡಮೂಲಿಕೆ ಚಹಾ, ಅರಶಿನ ಅಥವಾ ಏಲಕ್ಕಿ ಹಾಲಿನಂತಹ ಪರ್ಯಾಯಗಳೊಂದಿಗೆ ನಿಮ್ಮ ಸಾಮಾನ್ಯ ಚಹಾವನ್ನು ಬದಲಿಸಿ. ಇದು ನಿಮ್ಮ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಕಾಫಿ ಪ್ರಿಯರಿಗೆ ಕೆಫೀನ್ ವ್ಯಸನವನ್ನು ತಡೆಗಟ್ಟಲು ಡಿ-ಕೆಫೀನ್ ಮಾಡಿದ ಕಾಫಿಯು ಉತ್ತಮ ಪರ್ಯಾಯವಾಗಿದೆ.
ನಿಮ್ಮ ನಿದ್ರೆಯ ವೇಳಾಪಟ್ಟಿಯು ಹೆಚ್ಚು ಮುಖ್ಯವಾಗಿದೆ. ನೀವು ಉತ್ತಮ ನಿದ್ರೆ ಪಡೆಯುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳುವುದು ಕಾಫಿ, ಟೀ ಚಟವನ್ನು ಎದುರಿಸಲು ಮತ್ತೊಂದು ಮಾರ್ಗವಾಗಿದೆ. ಸರಿಯಾದ ನಿದ್ದೆಯನ್ನು ಪಡೆಯುವುದರಿಂದ ಅದು ನಿಮ್ಮನ್ನು ದಿನವಿಡೀ ಚುರುಕಾಗಿ ಇರಲು ಸಹಾಯ ಮಾಡುತ್ತದೆ. ಚಹಾ, ಕಾಫಿಯ ಕಡುಬಯಕೆಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
ಇದನ್ನೂ ಓದಿ: ಚೀನಾದ ಪುರ್ಹ್ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇದು ಭಾರತದಲ್ಲಿ ಲಭ್ಯವಿದೆಯೇ?
ನಿಮ್ಮ ಕಾಫಿ ಅಥವಾ ಚಹಾ ಕುಡಿಯುವ ಕಡುಬಯಕೆಯಾದಾಗ, ನಿಮ್ಮ ದಿನಚರಿಯನ್ನು ಬ್ರೇಕ್ ಮಾಡುವುದು ಉತ್ತಮ. ಸಣ್ಣ ಕಾಫಿ, ಚಹಾ ವಿರಾಮವನ್ನು ತೆಗೆದುಕೊಳ್ಳುವ ಬದಲು ವಾಕಿಂಗ್ ವಿರಾಮಗಳನ್ನು ತೆಗೆದುಕೊಳ್ಳಿ ಇದು ನಿಮ್ಮ ಕಡುಬಯಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನೀವು ಬೆಳಗ್ಗೆ ಎದ್ದ ಬಳಿಕ ಉಗುರು ಬೆಚ್ಚಗಿನ ನಿಂಬೆ ನೀರನ್ನು ಕುಡಿಯುತ್ತಾ ದಿನವನ್ನು ಪ್ರಾರಂಭಿಸುವುದು ಉತ್ತಮ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ನಿಮ್ಮ ಊಟದಲ್ಲಿ ಅಗತ್ಯವಾದ ಪೋಷಕಾಂಶಗಳನ್ನು ಸೇರಿಸುವುದು ಅತ್ಯಗತ್ಯ. ಏಕೆಂದರೆ ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಹಾ, ಕಾಫಿಯನ್ನು ತ್ಯಜಿಸಲು ನಿಮಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಕರಿದ ಆಹಾರ ತಿನ್ನುವ ಆಸೆಯೇ? ಆದರೆ ಹೈ ಕೊಲೆಸ್ಟ್ರಾಲ್ ಇದೆ, ಹೀಗೆ ಮಾಡಿ
ಈ ಪರ್ಯಾಯಗಳು ಮತ್ತು ಹ್ಯಾಕ್‌ಗಳು ಕಡುಬಯಕೆಯನ್ನು ನಿಭಾಯಿಸಲು ಸಹಾಯಕವಾಗಿದ್ದರೂ, ಅದು ಒಂದು ಹಂತವನ್ನು ಮೀರಿದ್ದರೆ, ಅದರ ಮೂಲ ಕಾರಣವನ್ನು ತಿಳಿದುಕೊಳ್ಳುವುದು ಅವಶ್ಯಕ. ಕೆಲವೊಮ್ಮೆ ಇದಕ್ಕೆ ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು. ಆದ್ದರಿಂದ ಕಡುಬಯಕೆಗಳನ್ನು ಮನೆಮದ್ದುಗಳಿಂದ ಗುಣಪಡಿಸಲು ಸಾಧ್ಯವಾಗದಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: