Puerh Tea: ಚೀನಾದ ಪುರ್ಹ್ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇದು ಭಾರತದಲ್ಲಿ ಲಭ್ಯವಿದೆಯೇ?

ಚೀನಾದಲ್ಲಿ 1,000 ವರ್ಷಗಳಿಂದ ಪುರ್ಹ್ ಟೀ ಕುಡಿಯಲಾಗುತ್ತದೆ ಮತ್ತು ಇಂದಿಗೂ ಬಹಳ ಜನಪ್ರಿಯವಾಗಿದೆ. ಚೀನಾದ ಪುರ್ಹ್ ಟೀ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. 

Puerh Tea: ಚೀನಾದ ಪುರ್ಹ್ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇದು ಭಾರತದಲ್ಲಿ ಲಭ್ಯವಿದೆಯೇ?
ಚೀನಾದ ಜನಪ್ರಿಯ ಪುರ್ಹ್ ಟೀ Image Credit source: iStock
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Dec 31, 2022 | 7:30 AM

ಚೀನಾ(China) ದ ಯುನ್ನಾನ್ ಜಿಲ್ಲೆಗೆ ಸ್ಥಳೀಯವಾಗಿ, ಪುರ್ಹ್ ನ್ನು ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದಿಂದ ಬೆಳೆಸಲಾಗುತ್ತದೆ. ಇದರ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಇವುಗಳನ್ನು ಸಾಕಷ್ಟು ವರ್ಷಗಳ ವರೆಗೆ ಹುದುಗಿಸಲಾಗುತ್ತದೆ. ಇದನ್ನು ಮಾರಾಟ ಮಾಡುವ ಮೊದಲು ಹಲವು ವರ್ಷಗಳವರೆಗೆ ನಿಯಂತ್ರಿತ ಪರಿಸ್ಥಿತಿಗಳಲ್ಲಿ ಸಂಗ್ರಹಿಸಲಾಗುತ್ತದೆ. ಚೀನಾದಲ್ಲಿ 1,000 ವರ್ಷಗಳಿಂದ ಪುಯೆರ್ಹ್ ಚಹಾವನ್ನು ಕುಡಿಯಲಾಗುತ್ತದೆ ಮತ್ತು ಇಂದಿಗೂ ಬಹಳ ಜನಪ್ರಿಯವಾಗಿದೆ. ಚೀನಾದ ಪುರ್ಹ್ ಟೀ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ.

ಪುರ್ಹ್ ಚಹಾ ಭಾರತದಲ್ಲಿ ಲಭ್ಯವಿದೆಯೇ?

ಪುರ್ಹ್​ ಚಹಾದ ಪುಡಿಗಳು ಭಾರತದಲ್ಲಿ ಲಭ್ಯವಿದೆ. ನೀವು ಇದನ್ನು ಆನ್ಲೈನ್ ಮೂಲಕ ಖರೀದಿಸಬಹುದು. ಆದರೆ ಸಾಕಷ್ಟು ದುಬಾರಿಯಾಗಿದೆ.

ಪುರ್ಹ್ ಚಹಾದ ಆರೋಗ್ಯ ಪ್ರಯೋಜನಗಳು:

1. ಜೀರ್ಣಕ್ರಿಯೆಗೆ ಸಹಾಯಕ:

ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ. ಯಾವುದೇ ರೀತಿಯ ಹೊಟ್ಟೆಗೆ ಸಂಬಂಧ ಪಟ್ಟ ಕಾಯಿಲೆಯನ್ನು ಈ ಚಹಾ ಶಮನ ಮಾಡುತ್ತದೆ.

2. ಒತ್ತಡವನ್ನು ಕಡಿಮೆ ಮಾಡಲು ಸಹಾಯಕ:

ಪುರ್ಹ್ ಚಹಾದಲ್ಲಿ ಫೈಟೊಕೆಮಿಕಲ್ಸ್ ಮತ್ತು ಥೈನೈನ್ ಅಂಶ ಇರುವುದರಿಂದ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮೆದುಳಿನಲ್ಲಿ ನೈಸರ್ಗಿಕ ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಉತ್ತಮ ನಿದ್ರೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ.

3. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ:

ಪುರ್ಹ್ ಚಹಾವು ನಿಮ್ಮ ದೇಹವನ್ನು ಹೆಚ್ಚು ಕೊಬ್ಬನ್ನು ಉತ್ಪಾದಿಸುವುದನ್ನು ತಡೆಯುತ್ತದೆ. ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯೊಂದಿಗೆ ಈ ಚಹಾವನ್ನು ಕುಡಿದರೆ ನಿಮ್ಮ ದೇಹದ ತೂಕವನ್ನು ಸರಿದೂಗಿಸಲು ಸಹಾಯಮಾಡುತ್ತದೆ ಎಂದು ಹೇಳಲಾಗುತ್ತದೆ.

4. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಪುರ್ಹ್ ಚಹಾದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಮತ್ತು ಯಾವುದೇ ಕಾಯಿಲೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.

5. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ:

ಪ್ಯೂರ್ಹ್ ಚಹಾದ ಎಲೆಗಳನ್ನು ಹಲವಾರು ವರ್ಷಗಳ ಕಾಲ ಹುದುಗಿಸಿ ಇಡುವುದರಿಂದ ಅದರಲ್ಲಿ ಲೋವಾಸ್ಟಾಟಿನ್ ಎಂಬ ಉತ್ಪಾದನೆಗೆ ಕಾರಣವಾಗುತ್ತದೆ. ಇದು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಸಹಾಯಮಾಡುತ್ತದೆ.

ಇದನ್ನೂ ಓದಿ: ಬೆಂಗಳೂರು ಸಿಟಿಯಲ್ಲಿ ನೀವು ಒಂಟಿಯಾಗಿ ವಾಸಿಸುತ್ತಿದ್ದೀರಾ? ಈ ಸ್ಥಳಗಳು ಸುರಕ್ಷಿತ

6. ರಕ್ತ ಶುದ್ಧೀಕರಣ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿ:

ನೀವು ಸೇವಿಸುವ ಸಾಕಷ್ಟು ಆಹಾರಗಳು ರುಚಿಯನ್ನು ಹೊಂದಿದ್ದರೂ ಕೂಡ ಅದು ರಾಸಾಯನಿಕ ಕಲಬೆರಕೆಯನ್ನು ಹೊಂದಿರುತ್ತದೆ. ಇದು ಕಾಲಾನಂತರದಲ್ಲಿ ದೇಹವನ್ನು ವಿಷಪೂರಿತಗೊಳಿಸುತ್ತದೆ. ಆದ್ದರಿಂದ ಪುರ್ಹ್ ಚಹಾ ಕುಡಿಯುವುದರಿಂದ ದೇಹ ಮತ್ತು ರಕ್ತವನ್ನು ವಿಷದಿಂದ ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರ ಹುದುಗುವಿಕೆಯ ಪ್ರಕ್ರಿಯೆಯಿಂದ ಉತ್ಪತ್ತಿಯಾಗುವ ಸೂಕ್ಷ್ಮಾಣು ಜೀವಿಗಳು ಮತ್ತು ಸರಳವಾದ ಸಕ್ಕರೆಗಳು ರಕ್ತದಲ್ಲಿನ ಜೀವಾಣುಗಳ ಮೇಲೆ ದಾಳಿ ಮಾಡುತ್ತವೆ ಮತ್ತು ನಿಮ್ಮ ಆರೋಗ್ಯಕರವಾಗಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ