AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

No Interruptions Day 2022: ವರ್ಷದ ಕೊನೆಯ ದಿನ ಯಾವುದೇ ಅಡಚಣೆ ಇಲ್ಲದೇ ಕೆಲಸ ಮಾಡಿ

ಗ್ಲೋರಿಯಾ ಮಾರ್ಕ್ ನಡೆಸಿದ ಸಂಶೋಧನಾ ಅಧ್ಯಯನದಲ್ಲಿ, ಉದ್ಯೋಗಿ, ಒಮ್ಮೆ ವಿಚಲಿತರಾದಾಗ, ಅಡ್ಡಿಪಡಿಸಿದ ಕೆಲಸವನ್ನು ಪುನರಾರಂಭಿಸಲು ಸಾಮಾನ್ಯವಾಗಿ 30 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ ಎಂದು ತಿಳಿದುಬಂದಿದೆ.

No Interruptions Day 2022: ವರ್ಷದ ಕೊನೆಯ ದಿನ ಯಾವುದೇ ಅಡಚಣೆ ಇಲ್ಲದೇ ಕೆಲಸ ಮಾಡಿ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷತಾ ವರ್ಕಾಡಿ|

Updated on:Dec 31, 2022 | 11:07 AM

Share

ವರ್ಷ ಪೂರ್ತಿ ನಿಮ್ಮ ಕೆಲಸದ ಸ್ಥಳದಲ್ಲಿ ಸಾಕಷ್ಟು ಅಡಚಣೆಗಳನ್ನು ಅನುಭವಿಸಿ, ವರ್ಷದ ಕೊನೆ (Year end)ಯ ದಿನದಂದು ಯಾವುದೇ ಅಡಚಣೆ ಇಲ್ಲದೇ ಕಾರ್ಯ ನಿರ್ವಹಿಸಲು ಪ್ರತಿ ವರ್ಷ ಡಿಸೆಂಬರ್ 31 ರಂದು ಯಾವುದೇ ಅಡಚಣೆ ಇಲ್ಲದ ದಿನ (No Interruptions Day) ಎಂದು ಆಚರಿಸಲಾಗುತ್ತದೆ. 1920 ರ ದಶಕದ ಆರಂಭದಲ್ಲಿ, ರಷ್ಯಾದ ಮನಶ್ಶಾಸ್ತ್ರಜ್ಞ ಬ್ಲೂಮಾ ಝೈಗಾರ್ನಿಕ್ ಕೆಲಸದಲ್ಲಿನ ಅಡಚಣೆಗಳ ಮಾನಸಿಕ ಪರಿಣಾಮಗಳ ಕುರಿತು ಸಿದ್ಧಾಂತವನ್ನು ಪ್ರಸ್ತಾಪಿಸಿದರು. ಸಿದ್ಧಾಂತದ ಪ್ರಕಾರ, ಜನರು ಪೂರ್ಣಗೊಂಡ ಕಾರ್ಯಗಳಿಗಿಂತ ಅಪೂರ್ಣ ಅಥವಾ ಅಡ್ಡಿಪಡಿಸಿದ ಕಾರ್ಯಗಳ ಯೋಚನೆಯಲ್ಲಿ ಹೆಚ್ಚಾಗಿ ಮುಳುಗಿ ಹೋಗಿರುತ್ತಾರೆ. ಇದು ಅವರ ಮಾನಸಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಹಾಗೆಯೇ ಮಾರಿಯಾ ಓವ್ಸಿಯಾಂಕಿನಾ ಎಂಬ ಇನ್ನೊಬ್ಬ ಸಂಶೋಧಕರು ದಿ ಓವ್ಸಿಯಾಂಕಿನಾ ಪರಿಣಾಮವನ್ನು ಪ್ರಸ್ತಾಪಿಸಿದರು, ಇದರ ಪ್ರಕಾರ ಯಾವುದೇ ಒಂದು ಕೆಲಸ  ಪೂರ್ಣಗೊಳ್ಳಲು ಅಡ್ಡಿಯಾಗಿದ್ದರೆ, ಅದು ಪೂರ್ಣಗೊಳ್ಳುವವರೆಗೆ ನೆಮ್ಮದಿ ಇರುವುದಿಲ್ಲ ಎಂದು ಹೇಳಿದ್ದಾರೆ. 1990 ರ ದಶಕದಿಂದಲೂ, ಆಫೀಸ್​ ಉದ್ಯೋಗಿಗಳಿಗೆ ಅಡಚಣೆಗಳ ಕೆಲವು ಮುಖ್ಯ ಕಾರಣಗಳೆಂದರೆ ಅದು ಇಮೇಲ್‌ಗಳು ಮತ್ತು ಫೋನ್ ಕರೆಗಳು. ಕೆಲಸದ ಸ್ಥಳದಲ್ಲಿ ತಂತ್ರಜ್ಞಾನಗಳ ವ್ಯತಿರಿಕ್ತ ಪರಿಣಾಮದ ಕುರಿತು ಗ್ಲೋರಿಯಾ ಮಾರ್ಕ್ ನಡೆಸಿದ ಸಂಶೋಧನಾ ಅಧ್ಯಯನದಲ್ಲಿ, ಉದ್ಯೋಗಿ, ಒಮ್ಮೆ ವಿಚಲಿತರಾದಾಗ, ಅಡ್ಡಿಪಡಿಸಿದ ಕೆಲಸವನ್ನು ಪುನರಾರಂಭಿಸಲು ಸಾಮಾನ್ಯವಾಗಿ 30 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಈ ಹೊಸವರ್ಷಕ್ಕೆ ನಿಮ್ಮವರಿಗೆ ಗಿಫ್ಟ್ ಕೊಡಲು ಐಡಿಯಾಗಳು ಇಲ್ಲಿವೆ

ಅಡೆತಡೆಗಳಿಲ್ಲದ ದಿನವನ್ನು ಆಚರಿಸುವುದು ಹೇಗೆ ?

ಅಡಚಣೆಗಳಿಲ್ಲದ ದಿನವನ್ನು ಆಚರಿಸಲು, ನಿಮ್ಮ ಕೆಲಸದ ಜಾಗದಲ್ಲಿ ಯಾವುದೇ ಅಡಚಣೆಯಾಗದಿರಲು ಫೋನ್​ನ್ನು ಡೋಂಟ್ ಡಿಸ್ಟರ್ಬ್‌ ಮೂಡ್​ನಲ್ಲಿ ಇರಿಸಿ. ಅನಗತ್ಯ ಮೆಸೇಜ್​ ಮತ್ತು ಆನ್‌ಲೈನ್ ಬ್ರೌಸಿಂಗ್ ತಪ್ಪಿಸಿ. ಕೆಲಸದಲ್ಲಿ ನಿಮ್ಮನ್ನು ವಿಚಲಿತಗೊಳಿಸುವಂತಹ ವಿಷಯಗಳಿಂದ ದೂರವಿರಲು ಪ್ರಯತ್ನಿಸಿ.

ನಿಮ್ಮ ಇಮೇಲ್‌ಗಳನ್ನು ಕ್ಲೀಲ್ ಆಗಿ ಇಡಲು ಈ ದಿನವನ್ನು ಬಳಸಿ. ಅಂದರೆ ನಿಮ್ಮ ಇನ್‌ಬಾಕ್ಸ್‌ನಲ್ಲಿರುವ ಹಳೆಯ ಮತ್ತು ಅನಗತ್ಯ ಇಮೇಲ್‌ಗಳನ್ನು ಅಳಿಸಿ. ಜೊತೆಗೆ ಹಳೆಯ ಪೆನ್ನುಗಳು, ಮಾರ್ಕರ್‌ಗಳು ಅಥವಾ ನೀವು ಇನ್ನು ಮುಂದೆ ಬಳಸದ ಇರುವ ಸ್ಟೇಷನರಿಗಳನ್ನು ಎಸೆಯಿರಿ. ಇದು ನಿಮ್ಮ ಕಚೇರಿಯನ್ನು ಸ್ವಚ್ಛ ಮಾಡುವ ಜೊತೆಗೆ ನಿಮ್ಮ ಮನಸ್ಸನ್ನು ಕೂಡ ಸ್ವಚ್ಛ ಮಾಡಿದಂತಾಗುತ್ತದೆ.

ಇದನ್ನೂ ಓದಿ: ಜೀವನದ ಪ್ರತಿ ಹಂತದಲ್ಲೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ

ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ತಮ್ಮ ಸಮಯ ನಿರ್ವಹಣೆ ಕೌಶಲ್ಯಗಳನ್ನು ನವೀಕರಿಸಲು ಉಚಿತ ಆನ್‌ಲೈನ್ ತರಬೇತಿಯನ್ನು ನೀಡುತ್ತವೆ. ತರಬೇತಿಯನ್ನು ಸಾಮಾನ್ಯವಾಗಿ ಮೊದಲೇ ರೆಕಾರ್ಡ್ ಮಾಡಿದ ವೀಡಿಯೊಗಳ ಮೂಲಕ ನೀಡಲಾಗುತ್ತದೆ. ಈ ಯಾವುದೇ ಅಡೆತಡೆಗಳಿಲ್ಲದ ದಿನದಂದು ಸಮಯದ ಕಾರಣದಿಂದಾಗಿ ನೀವು ಬಿಟ್ಟಿರುವ ಎಲ್ಲಾ ತರಬೇತಿ ಅವಧಿಗಳನ್ನು ತಿಳಿದುಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:06 am, Sat, 31 December 22

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು