ದೇಹದಿಂದ ಬಂದಿರುವ ಎಲ್ಲಾ ವಿಷಕಾರಿ ಅಂಶಗಳು ಮೂತ್ರ ಪಿಂಡ(Kidney)ಗಳ ಸಹಾಯದಿಂದ ಹೊರಬರುತ್ತದೆ, ಹಾಗೆಯೇ ನಮ್ಮ ಆರೋಗ್ಯ(Health)ವನ್ನು ಕಾಪಾಡಿಕೊಳ್ಳಲು ಕೂಡ ನೆರವಾಗುತ್ತದೆ. ವೈದ್ಯರ ಪ್ರಕಾರ, ಮಹಿಳೆಯರು ಹೆಚ್ಚು ದೀರ್ಘಕಾಲದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ದೇಹದಿಂದ ಹಾನಿಕಾರಕ ಅಂಶಗಳನ್ನು ಹೊರಹಾಕುವುದು ಕಿಡ್ನಿ ಕೆಲಸವಾಗಿರುತ್ತದೆ. ಒಂದು ರೀತಿಯಲ್ಲಿ ಇದು ದೇಹದ ಕಸವನ್ನು ಹೊಂದಿದೆ, ಅಲ್ಲಿಂದ ಎಲ್ಲಾ ಹಾನಿಕಾರಕ ಅಂಶಗಳು ಹೊರ ಬರುತ್ತವೆ. ಹಾಗೆಯೇ ಮೂತ್ರಪಿಂಡ ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ, ವಿಷಕಾರಿ ವಸ್ತುಗಳು ದೇಹದಲ್ಲಿ ಉಳಿಯುತ್ತವೆ ಮತ್ತು ನಮ್ಮ ರಕ್ತದಲ್ಲಿ ಸೇರಿ ದೇಹಕ್ಕೆ ತೊಂದರೆ ಉಂಟುಮಾಡುತ್ತದೆ. ಇದು ಮೊದಲು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿದ್ರಾಹೀನತೆಯ ಸಮಸ್ಯೆಯನ್ನು ಎಂದಿಗೂ ನಿರ್ಲಕ್ಷಿಸಬೇಡಿ.
ತಲೆನೋವು, ತಲೆ ಸುತ್ತು
ದೇಹದಲ್ಲಿರುವ ಕೆಂಪು ರಕ್ತ ಕಣಗಳು ದೇಹಕ್ಕೆ ಆಮ್ಲಜನಕವನ್ನು ಪೂರೈಸುತ್ತವೆ. ಆದರೆ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆ ಇದ್ದರೆ ದೇಹದಲ್ಲಿ ಆಮ್ಲಜನಕವೂ ಕಡಿಮೆಯಾಗಿ ದುರ್ಬಲ, ತಲೆಸುತ್ತು ಮತ್ತು ತಲೆನೋವಿನಿಂದ ಬಳಲುತ್ತಾರೆ.
ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಇಪಿಒ ಎಂಬ ಹಾರ್ಮೋನ್ ಬಹಳ ಮುಖ್ಯ. ಈ ಹಾರ್ಮೋನ್ ಮೂತ್ರಪಿಂಡಗಳಲ್ಲಿ ಮಾತ್ರ ರೂಪುಗೊಳ್ಳುತ್ತದೆ. ಈ ಸಂದರ್ಭದಲ್ಲಿ, ತಲೆನೋವು, ದೌರ್ಬಲ್ಯಗಳು ಮತ್ತು ತಲೆತಿರುಗುವಿಕೆ ಸಮಸ್ಯೆಯನ್ನು ಹೊಂದಿದ್ದರೆ, ಒಮ್ಮೆ ಕಿಡ್ನಿ ವೈದ್ಯರನ್ನು ಭೇಟಿಮಾಡಬೇಕು.
ಕಿಡ್ನಿ ಸಮಸ್ಯೆಗೆ ಕಾರಣವೇನು?
ಮೂತ್ರ ತಡೆಹಿಡಿಯುವುದು : ಮೂತ್ರ ವಿಸರ್ಜಿಸಬೇಕು ಅನಿಸಿದರೂ ತಡೆಹಿಡಿಯುವ ಅಭ್ಯಾಸ ಇದ್ದರೆ ಅದನ್ನು ಕೂಡಲೇ ಬಿಡಿ. ಇದರಿಂದ ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗಬಹುದು ಹಾಗೂ ಕಿಡ್ನಿ ವೈಫಲ್ಯಕ್ಕೂ ಕಾರಣವಾಗಬಹುದು.
ಕಡಿಮೆ ನೀರು ಕುಡಿಯುವುದು : ಸಾಮಾನ್ಯವಾಗಿ ನೀರನ್ನು ಕಡಿಮೆ ಕುಡಿಯುವುದರಿಂದ ಮಲಬದ್ಧತೆ ಸೇರಿದಂತೆ ಹಲವು ರೋಗಗಳಿಗೆ ದಾರಿಯಾಗಬಹುದು. ಈ ಅಭ್ಯಾಸದಿಂದ ಕಿಡ್ನಿಗಳು ಸಕ್ರಿಯವಾಗಿರಲು ತೊಂದರೆಯಾಗುತ್ತದೆ. ಅಲ್ಲದೆ, ದೇಹದಲ್ಲಿನ ಕೆಟ್ಟ ಅಂಶಗಳು ಸಂಪೂರ್ಣವಾಗಿ ಹೊರಹೋಗಲು ತೊಂದರೆಯಾಗುತ್ತದೆ. ಹಾಗಾಗಿ ದಿನಕ್ಕು 3 ರಿಂದ 5 ಲೀಟರ್ ನೀರನ್ನು ಕುಡಿಯಲು ಪ್ರಯತ್ನಿಸಿ.
ಹೆಚ್ಚು ಸಕ್ಕರೆ ಸೇವನೆ : ಸಿಹಿ ತಿಂಡಿಗಳನ್ನು ಹೆಚ್ಚಾಗಿ ಸೇವನೆ ಮಾಡಬೇಡಿ,ಇತ್ತೀಚಿನ ಸಂಶೋಧನೆಗಳ ಪ್ರಕಾರ ದಿನಕ್ಕೆ 2 ಸೋಡಾ ಕುಡಿಯುವವರು ಹೆಚ್ಚು ಕಿಡ್ನಿ ಸಮಸ್ಯೆ ಎದುರಿಸುತ್ತಾರೆ ಎನ್ನಲಾಗಿದೆ.
ಮದ್ಯಪಾನ : ಮದ್ಯಪಾನ ಮಾಡುವುದರಿಂದ ಅದು ಕಿಡ್ನಿಗಳಿಗೆ ಹಾನಿ ಉಂಟುಮಾಡುತ್ತದೆ ಅಲ್ಲದೆ, ವ್ಯತಿರಿಕ್ತ ಪರಿಣಾಮ ಬೀರಿ, ಕಿಡ್ನಿ ನಿಷ್ಕ್ರಿಯಗೊಳ್ಳುವ ಸಂಭವವೇ ಹೆಚ್ಚು. ಈ ಅಭ್ಯಾಸವಿದ್ದರೆ ಈಗಲೇ ಬಿಟ್ಟುಬಿಡಿ.
ಹೆಚ್ಚು ಮಾಂಸಾಹಾರ ಸೇವನೆ : ಕುರಿ, ಮೇಕೆ, ದನ ಮೊದಲಾದ ಪ್ರಾಣಿಗಳ ಮಾಂಸ ಸೇವನೆ ಕಡಿಮೆ ಮಾಡಿ. ಹಾಗಾಗಿ ಕೆಂಪು ಮಾಂಸ ಸೇವನೆಯಿಂದ ದೂರವಿರಿ.
ಅತಿ ಹೆಚ್ಚು ಉಪ್ಪು ಸೇವನೆ : ಅತಿ ಹೆಚ್ಚು ಉಪ್ಪು ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗಿ ಕಿಡ್ನಿ ವೈಫಲ್ಯಕ್ಕೂ ಕಾರಣವಾಗಬಹುದು.
ನೋವು ನಿವಾರಕ ಮಾತ್ರೆಗಳ ಸೇವನೆ : ತಲೆ ನೋವು, ಮೈಕೋ ನೋವು, ಹಲ್ಲು ನೋವು ಕಾಣಿಸಿಕೊಂಡರೂ ತಕ್ಷಣ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವವರೇ ಹೆಚ್ಚು, ಏಕೆಂದರೆ, ಅದರಲ್ಲಿರುವ ರಾಸಾಯನಿಕಗಳು ಮತ್ತು ಅದರಿಂದಾಗುವ ಸೈಡ್ ಅಡ್ಡಪರಿಣಾಮದಿಂದಾಗಿ ಲಿವರ್ ಮತ್ತು ಕಿಡ್ನಿಗಳು ಸಂಪೂರ್ಣ ಹಾನಿಗೊಳಗಾಗುತ್ತವೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ