ಮೂತ್ರಪಿಂಡದ ಕಾಯಿಲೆ ಇರುವ ವ್ಯಕ್ತಿ ನೆಫ್ರಾಲಜಿಸ್ಟ್ ಬಳಿಗೆ ಹೋಗಬೇಕೇ ಅಥವಾ ಯುರಾಲಜಿಸ್ಟ್ ಬಳಿಗೆ ಹೋಗಬೇಕೇ? ತಜ್ಞರ ಉತ್ತರ ಇಲ್ಲಿದೆ

ನೆನಪಿಡಬೇಕಾದ ಅಂಶವೆಂದರೆ ಯಾವುದೇ ಮೂತ್ರಪಿಂಡದ ಸಮಸ್ಯೆ ಇದ್ದಲ್ಲಿ, ಮೊದಲು ಸಂಪರ್ಕಿಸಬೇಕಾದದ್ದು ನೆಫ್ರಾಲಜಿಸ್ಟ್​ನ್ನು. ರೋಗಲಕ್ಷಣಗಳ ಪ್ರಕಾರ, ಅವರು ಪರೀಕ್ಷೆಗಳನ್ನು ಸೂಚಿಸುತ್ತಾರೆ.

ಮೂತ್ರಪಿಂಡದ ಕಾಯಿಲೆ ಇರುವ ವ್ಯಕ್ತಿ ನೆಫ್ರಾಲಜಿಸ್ಟ್ ಬಳಿಗೆ ಹೋಗಬೇಕೇ ಅಥವಾ ಯುರಾಲಜಿಸ್ಟ್ ಬಳಿಗೆ ಹೋಗಬೇಕೇ? ತಜ್ಞರ ಉತ್ತರ ಇಲ್ಲಿದೆ
ಕಿಡ್ನಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 12, 2022 | 10:23 PM

ಸಂಪಾದಕರ ಟಿಪ್ಪಣಿ: ನಿಮ್ಮ ರೋಗದ ಸರಿಯಾದ ರೋಗನಿರ್ಣಯವು ಸರಿಯಾದ ಚಿಕಿತ್ಸೆಯನ್ನು ಖಾತ್ರಿಪಡಿಸುವುದಕ್ಕೆ ಅಗತ್ಯ. ಸರಿಯಾದ ವೈದ್ಯರಿಂದ ರೋಗನಿರ್ಣಯ ಮಾಡುವುದು ರೋಗಿಯು ತನ್ನ ರೋಗದ ವಿರುದ್ಧದ ಅರ್ಧ ಯುದ್ಧವನ್ನು ಗೆದ್ದಂತೆ ಎಂದು ತಜ್ಞರು ಹೇಳುತ್ತಾರೆ. ವೈದ್ಯಕೀಯ ವಿಭಾಗಗಳು ವಿಲೀನಗೊಳ್ಳುವುದರೊಂದಿಗೆ, ಸಾಮಾನ್ಯ ಜನರು ತಮ್ಮ ಕಾಯಿಲೆಗೆ ಸಮಾಲೋಚಿಸಲು ಸರಿಯಾದ ತಜ್ಞರು ಯಾರು ಎಂದು ಗುರುತಿಸುವುದು ಕಷ್ಟ. ಯಾರನ್ನು ಮತ್ತು ಯಾವಾಗ ಸಮಾಲೋಚಿಸಬೇಕು ಎಂಬುದನ್ನು ತಿಳಿಸಿಕೊಡುವ ಲೇಖನ ಇದಾಗಿದೆ.

ಈ ಆತಂಕಕಾರಿ ಅಂಕಿಅಂಶಗಳಿಂದ ಮೂತ್ರಪಿಂಡದ ಕಾಯಿಲೆ(kidney disease) ಹೊರೆಯನ್ನು ಅಳೆಯಬಹುದು. ಭಾರತದಲ್ಲಿ, ಮಧುಮೇಹ (diabetes) ಮತ್ತು ಅಧಿಕ ರಕ್ತದೊತ್ತಡವು 40-60 ಪ್ರತಿಶತದಷ್ಟು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಪ್ರಕರಣಗಳಿಗೆ ಕಾರಣವಾಗಿದೆ ಎಂದು ಕ್ಲಿನಿಕಲ್ ನೆಫ್ರಾಲಜಿ ಮತ್ತು ರೆನಲ್ ಕೇರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಹೇಳಿದೆ. ಜನರು ಎಲ್ಲಿಗೆ ಹೋಗಬೇಕೆಂದು ತಿಳಿಯದಿರುವುದು ಸಮಸ್ಯೆಗಳ ಹೊರೆಯನ್ನು ಹೆಚ್ಚಿಸುತ್ತದೆ. ಈ ಬಗ್ಗೆ ಗುರುಗ್ರಾಮದ ಮಣಿಪಾಲ್ ಆಸ್ಪತ್ರೆಯ ಸಮಾಲೋಚಕ-ನೆಫ್ರಾಲಜಿಸ್ಟ್ ಡಾ ಸುಮೀತ್ ಮಂಡಲ್ ಅವರು ನ್ಯೂಸ್ 9 ನೊಂದಿಗೆ ಮಾತನಾಡಿದ್ದಾರೆ.

ಒಬ್ಬ ವ್ಯಕ್ತಿಗೆ ಮೂತ್ರಪಿಂಡದ (ಕಿಡ್ನಿ) ಸಮಸ್ಯೆ ಇದ್ದರೆ ಯಾವ ತಜ್ಞರನ್ನು ಸಂಪರ್ಕಿಸಬೇಕು? ಅಂಥವರು ಖಂಡಿತವಾಗಿಯೂ ಮೂತ್ರಪಿಂಡಶಾಸ್ತ್ರಜ್ಞರ ಬಳಿಗೆ ಹೋಗಬೇಕು. ಆದಾಗ್ಯೂ, ಮೂತ್ರಶಾಸ್ತ್ರಜ್ಞರ ಬಳಿಗೆ ಹೋಗಬಹುದಾದ ಕೆಲವು ಸಂದರ್ಭಗಳಿವೆ. ಮೂತ್ರಪಿಂಡದ ಕಲ್ಲುಗಳನ್ನು ಹೊಂದಿದ್ದರೆ, ಮೂತ್ರನಾಳದ ಅಡಚಣೆಗಳಿಂದ ಮೂತ್ರಪಿಂಡಕ್ಕೆ ತೊಂದರೆಯಾಗುತ್ತಿದ್ದರೆ, ಮೂತ್ರಪಿಂಡದ ಗೆಡ್ಡೆಗಳು ಮತ್ತು ಮೂತ್ರಪಿಂಡದಲ್ಲಿ ಬಾವುಗಳಿದ್ದರೆ ಅಂತಹ ಸಂದರ್ಭಗಳಲ್ಲಿ ಮೂತ್ರಶಾಸ್ತ್ರಜ್ಞರನ್ನು (Urologist ) ಸಂಪರ್ಕಿಸಬೇಕು. ಮೂತ್ರಪಿಂಡ ವೈಫಲ್ಯ, ಹೆಚ್ಚಿನ ಯೂರಿಯಾ-ಕ್ರಿಯೇಟಿನೈನ್ ಮತ್ತು ಮೂತ್ರದಲ್ಲಿ ರಕ್ತದ ಉಪಸ್ಥಿತಿಯಂತಹ ಎಲ್ಲಾ ಇತರ ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳಿಗೆ, ಮೂತ್ರಪಿಂಡಶಾಸ್ತ್ರಜ್ಞರನ್ನು (Nephrologist) ಸಂಪರ್ಕಿಸಬೇಕು.

ಕಾಯಿಲೆ ಏನೆಂಬುದು ಜನರಿಗೆ ತಿಳಿದಿರುವುದಿಲ್ಲ. ಹಾಗಾದರೆ ಏನು ಮಾಡಬೇಕು? ನೆನಪಿಡಬೇಕಾದ ಅಂಶವೆಂದರೆ ಯಾವುದೇ ಮೂತ್ರಪಿಂಡದ ಸಮಸ್ಯೆ ಇದ್ದಲ್ಲಿ, ಮೊದಲು ಸಂಪರ್ಕಿಸಬೇಕಾದದ್ದು ನೆಫ್ರಾಲಜಿಸ್ಟ್​ನ್ನು. ರೋಗಲಕ್ಷಣಗಳ ಪ್ರಕಾರ, ಅವರು ಪರೀಕ್ಷೆಗಳನ್ನು ಸೂಚಿಸುತ್ತಾರೆ ಮತ್ತು ಫಲಿತಾಂಶಗಳ ಆಧಾರದ ಮೇಲೆ, ಯುರಾಲಜಿಸ್ಟ್ ನ್ನು ಸಂಪರ್ಕಿಸುವ ಅಗತ್ಯವಿದೆಯೇ ಎಂದು ಅವರು ನಿರ್ಧರಿಸುತ್ತಾರೆ.

ಯುರಾಲಜಿಸ್ಟ್ ಮತ್ತು ನೆಫ್ರಾಲಜಿಸ್ಟ್ ನಡುವಿನ ಗಡಿರೇಖೆಯು ರೋಗಿಗೆ ವ್ಯತ್ಯಾಸವನ್ನುಂಟುಮಾಡುತ್ತದೆಯೇ? ಯುರಾಲಜಿಸ್ಟ್ ಸರ್ಜನ್ ಆಗಿರುತ್ತಾರೆ, ಹೆಚ್ಚಿನ ಮೂತ್ರಪಿಂಡದ ಕಾಯಿಲೆಗಳಲ್ಲಿ, ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ. ಆದ್ದರಿಂದ, ಒಬ್ಬ ವ್ಯಕ್ತಿಯು ಮೊದಲು ಯುರಾಲಜಿಸ್ಟ್ ನ್ನು ಸಂಪರ್ಕಿಸುವ ಅಗತ್ಯವಿಲ್ಲ. ಕಿಡ್ನಿಯಲ್ಲಿ ಸ್ಟೆಂಟ್ ಹಾಕಬೇಕು ಅಥವಾ ಕಿಡ್ನಿ ಕಲ್ಲುಗಳು ಅಥವಾ ಟ್ಯೂಮರ್ ತೆಗೆಯಬೇಕಾದರೆ ಸ್ಪೆಷಲೈಸ್ಡ್ ವೈದ್ಯರ ಅಗತ್ಯವಿರುತ್ತದೆ . ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನೆಫ್ರಾಲಜಿಸ್ಟ್ ನಿರ್ಣಯಿಸುತ್ತಾರೆ.

ಕೊವಿಡ್ ಮೂತ್ರಪಿಂಡ ರೋಗಿಗಳ ಮೇಲೆ ಹೇಗೆ ಪರಿಣಾಮ ಬೀರಿತು? ಮೂತ್ರಪಿಂಡದ ಕಾಯಿಲೆ ಇರುವ ಜನರಲ್ಲಿ ಕೊವಿಡ್‌ನ ತೀವ್ರತೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ವೈರಲ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳಲ್ಲಿ ಯೂರಿಯಾ-ಕ್ರಿಯೇಟಿನೈನ್ ಹೆಚ್ಚಾಗುವುದನ್ನು ನಾವು ನೋಡಿದ್ದೇವೆ. ನಮ್ಮ ಕೆಲವು ರೋಗಿಗಳು ಗಂಭೀರ ಅಲ್ಲದಿದ್ದರೂ ವೈರಲ್ಸ್ ನಿಂದಾಗಿ ಡಯಾಲಿಸಿಸ್ ಬೇಕಾಗಿ ಬಂತು. ಮೇಲಿನ ಎಲ್ಲಾ ಪರಿಸ್ಥಿತಿಗಳಲ್ಲಿ, ನೆಫ್ರಾಲಜಿಸ್ಟ್ ಚಿಕಿತ್ಸೆಯನ್ನು ಒದಗಿಸುತ್ತಾರೆ ಅಥವಾ ಯುರಾಲಜಿಸ್ಟ್ ನ್ನು ಭೇಟಿ ಮಾಡಲು ಶಿಫಾರಸು ಮಾಡುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: ಜೂನ್ ತಿಂಗಳಲ್ಲಿ ಕೊರೊನಾ 4ನೇ ಅಲೆ ಸಾಧ್ಯತೆ; ಮತ್ತೆ ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟಿಂಗ್ ನಡೆಸಲು ನಿರ್ಧರಿಸಿದ ಆರೋಗ್ಯ ಇಲಾಖೆ

Published On - 9:40 pm, Tue, 12 April 22

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?