ನಾವು ದಿನನಿತ್ಯ ಆಹಾರದಲ್ಲಿ ಬಳಸುವ ಅನೇಕ ಮಸಾಲೆಗಳನ್ನು ಆಯುರ್ವೇದ ಔಷಧದಲ್ಲಿಯೂ ಬಳಸಲಾಗುತ್ತದೆ ಎಂಬುದು ತಿಳಿದಿರುವ ವಿಚಾರ. ಅದೇ ರೀತಿ ಗರಂ ಮಸಾಲಾ ಮಾಡುವಾಗ ಬಳಸುವ ಬಿರಿಯಾನಿ ಎಲೆ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಬಿರಿಯಾನಿ, ಪಲಾವ್ ಹೀಗೆ ನಾನಾ ರೀತಿಯ ಅಡುಗೆಗೆ ಮತ್ತಷ್ಟು ಪರಿಮಳ ಹೆಚ್ಚಿಸಲು ಜೊತೆಗೆ ಆರೋಗ್ಯಕ್ಕೆ ಉಪಯೋಗವಾಗಲು ಈ ಎಲೆಯನ್ನು ಬಳಸಲಾಗುತ್ತದೆ. ಈ ಎಲೆ ಒಣಗಿದ ನಂತರ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ ಆದರೆ ಇದು ಹಸಿ ಇರುವಾಗ ಇದರಿಂದ ಕಡುಬಿನ ರೀತಿಯಲ್ಲಿ ಒಂದು ಖಾದ್ಯವನ್ನು ತಯಾರಿಸಲಾಗುತ್ತದೆ. ಇದನ್ನು ಉತ್ತರಕನ್ನಡದ ಕೆಲವು ಭಾಗಗಳಲ್ಲಿ ಗೆಣಸೆಲೆ ಎಂದು ಕರೆಯಲಾಗುತ್ತದೆ. ಇದು ಕೂಡ ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಹೀಗೆ ಇದನ್ನು ದಿನಬಳಕೆಯಲ್ಲಿ ಹಲವಾರು ರೀತಿಯಲ್ಲಿ ಬಳಸಲಾಗುತ್ತದೆ. ಹಾಗಾದರೆ ಇದರ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ಬಿರಿಯಾನಿ ಎಲೆಗಳು ನಿಮ್ಮ ದೀರ್ಘಕಾಲದ ಮಧುಮೇಹವನ್ನು ನಿಯಂತ್ರಿಸುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದರ ರುಚಿಯ ಜೊತೆಗೆ ಪರಿಮಳವೂ ಅದ್ಭುತವಾಗಿದೆ. ಈ ಎಲೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅಷ್ಟೇ ಅಲ್ಲ, ಇದು ಅನೇಕ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಅಲ್ಲದೆ ಈ ಬಿರಿಯಾನಿ ಎಲೆಗಳು ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸೆಲೆನಿಯಂ, ಕಬ್ಬಿಣ ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತವೆ. ಹಾಗಾಗಿ ಇದರ ನಿಯಮಿತ ಬಳಕೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
ಇದನ್ನೂ ಓದಿ: ಗಣೇಶನಿಗೆ ಪ್ರಿಯವಾದ ಗರಿಕೆ ಹುಲ್ಲಿನಲ್ಲಿದೆ ಆರೋಗ್ಯ ಪ್ರಯೋಜನ
ಬಿರಿಯಾನಿ ಎಲೆಯಲ್ಲಿರುವ ಶಕ್ತಿಯು ನಿಮ್ಮ ಹಳೆಯ ನೋವನ್ನು, ಮಲಬದ್ಧತೆ, ಆಮ್ಲೀಯತೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಿರಿಯಾನಿ ಎಲೆಯ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಮಲಬದ್ಧತೆ ಮತ್ತು ತಲೆನೋವು ಕಡಿಮೆಯಾಗುವುದು ಮಾತ್ರವಲ್ಲದೆ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುವ ಶಕ್ತಿಯನ್ನು ಹೊಂದಿದೆ. ನೀವು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದು ಯಾವ ಔಷಧಗಳಿಂದಲೂ ಈ ಸಮಸ್ಯೆ ನಿವಾರಣೆಯಾಗದಿದ್ದರೆ ಕೆಲವು ಹನಿ ಬಿರಿಯಾನಿ ಎಲೆಯ ಎಣ್ಣೆಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಸೇವಿಸುವುದರಿಂದ ನಿದ್ರಾಹೀನತೆಯ ಸಮಸ್ಯೆ ಜೊತೆಗೆ ಮೂತ್ರಪಿಂಡದಲ್ಲಿರುವ ಕಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ, ಬಿರಿಯಾನಿ ಎಲೆಯ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೀಲು ನೋವು ಕೂಡ ಕಡಿಮೆಯಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ