AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಹಾಗಲಕಾಯಿ ಕಹಿ ಆದರೂ, ಆರೋಗ್ಯ ಪ್ರಯೋಜನಗಳು ಸಾಕಷ್ಟಿವೆ

ಹಾಗಲಕಾಯಿಯಲ್ಲಿ ಮೆಗ್ನೀಸಿಯಮ್, ಫೋಲೇಟ್, ರಂಜಕ, ಸತು ಮತ್ತು ಮ್ಯಾಂಗನೀಸ್ ಸಮೃದ್ಧವಾಗಿದೆ. ಹಾಗಲಕಾಯಿ ಹೊಟ್ಟೆಯಿಂದ ಹಿಡಿದು ಮೆದುಳಿನವರೆಗೆ ದೇಹದ ಪ್ರತಿಯೊಂದು ಅಂಗವನ್ನು ಆರೋಗ್ಯವಾಗಿಡುವಲ್ಲಿ ಸಹಾಯಕವಾಗಿದೆ.

Health Tips: ಹಾಗಲಕಾಯಿ ಕಹಿ ಆದರೂ, ಆರೋಗ್ಯ ಪ್ರಯೋಜನಗಳು ಸಾಕಷ್ಟಿವೆ
Follow us
ಅಕ್ಷತಾ ವರ್ಕಾಡಿ
|

Updated on: Aug 30, 2024 | 7:44 PM

ದೇಹದಲ್ಲಿರುವ ವಿವಿಧ ರೀತಿಯ ಕಾಯಿಲೆಗಳನ್ನು ಹೋಗಲಾಡಿಸುವಲ್ಲಿ ಹಾಗಲಕಾಯಿ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ಹಾಗಲಕಾಯಿ ವಿಟಮಿನ್ ಬಿ1, ಬಿ2, ಬಿ3 ಮತ್ತು ಸಿ ಯ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಕೂಡ ಇದೆ. ನಾರಿನಂಶದಿಂದ ಸಮೃದ್ಧವಾಗಿರುವ ಹಾಗಲಕಾಯಿಯಲ್ಲಿ ಮೆಗ್ನೀಸಿಯಮ್, ಫೋಲೇಟ್, ರಂಜಕ, ಸತು ಮತ್ತು ಮ್ಯಾಂಗನೀಸ್ ಕೂಡ ಇದೆ. ಹಾಗಲಕಾಯಿ ಹೊಟ್ಟೆಯಿಂದ ಹಿಡಿದು ಮೆದುಳಿನವರೆಗೆ ದೇಹದ ಪ್ರತಿಯೊಂದು ಅಂಗವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು:

ಹಾಗಲಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಧುಮೇಹ ರೋಗಿಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಹಾಗಲಕಾಯಿಯಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸುವ ಸಂಯುಕ್ತಗಳಿವೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ:

ಹಾಗಲಕಾಯಿಯಲ್ಲಿ ಕ್ಯಾಲೋರಿ ಕಡಿಮೆ ಮತ್ತು ನಾರಿನಂಶ ಹೆಚ್ಚಾಗಿರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೇಹದ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಲಕಾಯಿ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಹಾಗಲಕಾಯಿಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳು ಹೇರಳವಾಗಿವೆ. ಅಲ್ಲದೆ, ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಲಕಾಯಿ ಮಳೆಗಾಲದಲ್ಲಿ ಬರುವ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿಯ ರಸವನ್ನು ಕುಡಿಯುವುದರಿಂದ ಅನಾರೋಗ್ಯದ ಸಾಧ್ಯತೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಗಣೇಶನಿಗೆ ಪ್ರಿಯವಾದ ಗರಿಕೆ ಹುಲ್ಲಿನಲ್ಲಿದೆ ಆರೋಗ್ಯ ಪ್ರಯೋಜನ

ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ:

ಹಾಗಲಕಾಯಿಯ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಹಲಸಿನ ಹಣ್ಣಿನ ಜ್ಯೂಸ್‌ನಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ