Yoga for Women: ಮುಟ್ಟಿನ ಸಮಯದ ನೋವನ್ನು ನಿವಾರಿಸಲು ಈ 5 ಯೋಗಾಸನಗಳು ಪ್ರಯೋಜನಕಾರಿ

ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿ ಮಹಿಳೆಯರ ಒತ್ತಡವನ್ನು ಹೆಚ್ಚಿಸಿದೆ. ಹಾಗಾಗಿ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಇದನ್ನು ತಡೆಯಲು ನಿಯಮಿತವಾಗಿ ಕೆಲವು ಯೋಗಾಸನಗಳನ್ನು ಮಾಡುವ ಮೂಲಕ, ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ಹಾಗಾದರೆ ಯಾವ ಯೋಗಾಸನಗಳು ಮಹಿಳೆಯರಿಗೆ ಪ್ರಯೋಜನಕಾರಿ ಎಂಬುದರ ಬಗೆಗಿನ ಮಾಹಿತಿ ಇಲ್ಲಿದೆ.

Yoga for Women: ಮುಟ್ಟಿನ ಸಮಯದ ನೋವನ್ನು ನಿವಾರಿಸಲು ಈ 5 ಯೋಗಾಸನಗಳು ಪ್ರಯೋಜನಕಾರಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 31, 2024 | 10:19 AM

ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿ ಮಹಿಳೆಯರ ಒತ್ತಡವನ್ನು ಹೆಚ್ಚಿಸಿದೆ. ಹಾಗಾಗಿ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಇದನ್ನು ತಡೆಯಲು ನಿಯಮಿತವಾಗಿ ಕೆಲವು ಯೋಗಾಸನಗಳನ್ನು ಮಾಡುವ ಮೂಲಕ, ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಅದರಲ್ಲಿಯೂ ಕೆಲವು ಯೋಗಾಸನಗಳು ಮಹಿಳೆಯರಿಗೆ ದೇವರು ನೀಡಿದ ವರ ಎಂದರೆ ತಪ್ಪಾಗಲಾರದು. ನಿಮಗೆ ಋತುಚಕ್ರದ ಸಮಯದಲ್ಲಿ ವಿಪರೀತ ಹೊಟ್ಟೆ ನೋವಿನ ಜೊತೆಗೆ ಕಿರಿಕಿರಿ ಉಂಟಾಗುತ್ತಿದ್ದರೆ ಇದಕ್ಕೆ ಬೇರೆ ಬೇರೆ ಔಷಧಿ ತೆಗೆದುಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಇಲ್ಲಿ ನೀಡಿರುವ ಸರಳ ಯೋಗಾಸನಗಳನ್ನು ಮನೆಯಲ್ಲಿಯೇ ಮಾಡಿ, ನಿಮ್ಮ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಿ.

ಬದ್ದ ಕೋನಾಸನ: ಇದು ಒಳ್ಳೆಯ ಆಸನವಾಗಿದ್ದು ಅಧಿಕ ರಕ್ತಸ್ರಾವವನ್ನು ನಿವಾರಣೆ ಮಾಡಿಕೊಳ್ಳಲು. ಅಸಹಜ ಮುಟ್ಟಿನಿಂದ ಮುಕ್ತಿ ಪಡೆಯಲು ಈ ಆಸನವನ್ನು ಮಾಡಬಹುದು. ಈ ಯೋಗಾಸನವನ್ನು ತಪ್ಪದೆ ಪ್ರತಿದಿನ ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವನ್ನು ನಿವಾರಿಸಬಹುದು. ಈ ಯೋಗಾಸನವು ಸಂತಾನೋತ್ಪತ್ತಿ ಅಂಗಗಳ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಮಲಾಸನ: ಮಹಿಳೆಯರಿಗೆ ಜೀವನದಲ್ಲಿ ಅನೇಕ ಬಾರಿ ಹಾರ್ಮೋನುಗಳಲ್ಲಿ ಬದಲಾವಣೆ ಕಂಡು ಬರುತ್ತದೆ. ಆದ್ದರಿಂದ ಹಾರ್ಮೋನುಗಳ ಅಸಮತೋಲನವನ್ನು ಸರಿದೂಗಿಸಲು ಮಲಾಸನವನ್ನು ಪ್ರತಿದಿನ ಅಭ್ಯಾಸ ಮಾಡಿ. ಇದಲ್ಲದೆ, ಈ ಆಸನವನ್ನು ಮಾಡುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ, ಅಲ್ಲದೆ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ಪಾದಗಳು ಮತ್ತು ಮೊಣಕಾಲುಗಳು, ಸೊಂಟದ ಪ್ರದೇಶದ ಸ್ನಾಯುಗಳು ಸಹ ಬಲಗೊಳ್ಳುತ್ತವೆ.

ಪವನಮುಕ್ತಾಸನ: ಈ ಆಸನವು ಸಂತಾನೋತ್ಪತ್ತಿ ಅಂಗಗಳಿಗೆ (ಗರ್ಭಾಶಯ) ಪ್ರಯೋಜನವನ್ನು ನೀಡುತ್ತದೆ. ಇದಲ್ಲದೆ, ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ಪರಿಹಾರ ನೀಡುತ್ತದೆ. ಪ್ರತಿದಿನ ಪವನಮುಕ್ತಾಸನವನ್ನು ಅಭ್ಯಾಸ ಮಾಡುವುದರಿಂದ ಸೊಂಟ, ಬೆನ್ನು ಮೂಳೆ, ತೋಳುಗಳು ಮತ್ತು ಕಾಲುಗಳ ಸ್ನಾಯುಗಳು ಹಿಗ್ಗುತ್ತವೆ.

ಇದನ್ನೂ ಓದಿ: ಕಾರ್ಟಿಕೊಬಾಸಲ್ ಸಿಂಡ್ರೋಮ್ ಎಂದರೇನು? ಲಕ್ಷಣಗಳೇನು? ಇಲ್ಲಿದೆ ಮಾಹಿತಿ

ಹಲಾಸನ: ಈ ಆಸನದ ನಿಯಮಿತ ಅಭ್ಯಾಸವು ಮುಟ್ಟಿನ ಸಮಯದಲ್ಲಿ ಪೆಲ್ವಿಕ್ ಪ್ರದೇಶದಲ್ಲಿನ ಉಂಟಾಗುವ ಸೆಳೆತವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ತ್ವಚೆಯನ್ನು ಸುಂದರವಾಗಿಸಲು ಸಹಾಯ ಮಾಡುತ್ತದೆ. ಹಲಾಸನ ಭಂಗಿಯು ಆಯಾಸ, ಒತ್ತಡ, ಸೆಳೆತ, ಮಲಬದ್ಧತೆ, ಗ್ಯಾಸ್, ಹೊಟ್ಟೆಯ ಕೊಬ್ಬು ಇತ್ಯಾದಿಗಳನ್ನು ಕಡಿಮೆ ಮಾಡಲು ಕೂಡ ಸಹಕಾರಿಯಾಗಿದೆ.

ಹನುಮಾಸನ: ಈ ಆಸನವು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ. ಇದು ಸೊಂಟ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಈ ಯೋಗಾಸನದಿಂದ ಸ್ನಾಯುಗಳು ಸಹ ಬಿಗಿಯಾಗುತ್ತವೆ. ಜೊತೆಗೆ ಇದು ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಜೊತೆಗೆ ಸ್ನಾಯುಗಳನ್ನು ಬಲಪಡಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ