Corticobasal Degeneration: ಕಾರ್ಟಿಕೊಬಾಸಲ್ ಸಿಂಡ್ರೋಮ್ ಎಂದರೇನು? ಲಕ್ಷಣಗಳೇನು? ಇಲ್ಲಿದೆ ಮಾಹಿತಿ
ಕಾರ್ಟಿಕೊಬಾಸಲ್ ಸಿಂಡ್ರೋಮ್ ಬಗ್ಗೆ ನೀವು ಕೇಳಿದ್ದೀರಾ? ಇದು ಮೆದುಳಿನ ನರಮಂಡಲದ ನರತಂತುಗಳ ಮೇಲ್ಭಾಗದ ಕೋಟಿಂಗ್ ಸಹಿತ, ನರ ಸವೆಯುವುದು ಹಾಗೂ ಸವಕಳಿ ಹೊಂದುವುದಾಗಿದೆ. ಈ ಸ್ಥಿತಿಯಲ್ಲಿ ನಿಮ್ಮ ಮೆದುಳು ಅವನತಿಯ ಅಂಚಿಗೆ ತಲುಪಿರುತ್ತದೆ ಅಂದರೆ ನಡೆಯಲು, ಮಾತನಾಡಲು ಕಷ್ಟವಾಗುವಂತಹ ಪರಿಸ್ಥಿತಿ. ಈ ರೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ ಇದರಿಂದ ವ್ಯಕ್ತಿಯು ಬುದ್ಧಿಮಾಂದ್ಯತೆ, ನಿಧಾನ ಮತ್ತು ಮಂದ ಮಾತು, ಸಮತೋಲನ ಸಮಸ್ಯೆಗಳು, ಸ್ನಾಯು ಬಿಗಿತ, ದೇಹದ ಒಂದು ಬದಿಯ ಅಂಗವನ್ನು ನಿಯಂತ್ರಿಸುವಲ್ಲಿ ತೊಂದರೆಯಾಗುವಂತದ್ದು, ಆಹಾರ ನುಂಗಲು ಕಷ್ಟ ಮುಂತಾದ ರೋಗಲಕ್ಷಣಗಳನ್ನು ಅನುಭವಿಸುತ್ತಾನೆ.
ಕಾರ್ಟಿಕೊಬಾಸಲ್ ಸಿಂಡ್ರೋಮ್ ಅಥವಾ ಕಾರ್ಟಿಕೊಬಾಸಲ್ ಕ್ಷೀಣತೆ ಬಗ್ಗೆ ನೀವು ಕೇಳಿದ್ದೀರಾ? ಇದು ಮೆದುಳಿನ ನರಮಂಡಲದ ನರತಂತುಗಳ ಮೇಲ್ಭಾಗದ ಕೋಟಿಂಗ್ ಸಹಿತ, ನರ ಸವೆಯುವುದು ಹಾಗೂ ಸವಕಳಿ ಹೊಂದುವುದಾಗಿದೆ. ಈ ಸ್ಥಿತಿಯಲ್ಲಿ ನಿಮ್ಮ ಮೆದುಳು ಅವನತಿಯ ಅಂಚಿಗೆ ತಲುಪಿರುತ್ತದೆ ಅಂದರೆ ನಡೆಯಲು, ಮಾತನಾಡಲು ಕಷ್ಟವಾಗುವಂತಹ ಪರಿಸ್ಥಿತಿ. ಈ ರೀತಿ ಲಕ್ಷಣಗಳು ನಿಮಗೆ ಅಲ್ಝೈಮರ್ ಕಾಯಿಲೆಯಲ್ಲಿಯೂ ಕಂಡುಬರುತ್ತದೆ. ಈ ರೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ ಇದರಿಂದ ವ್ಯಕ್ತಿಯು ಬುದ್ಧಿಮಾಂದ್ಯತೆ, ನಿಧಾನ ಮತ್ತು ಮಂದ ಮಾತು, ಸಮತೋಲನ ಸಮಸ್ಯೆಗಳು, ಸ್ನಾಯು ಬಿಗಿತ, ದೇಹದ ಒಂದು ಬದಿಯ ಅಂಗವನ್ನು ನಿಯಂತ್ರಿಸುವಲ್ಲಿ ತೊಂದರೆಯಾಗುವಂತದ್ದು, ಆಹಾರ ನುಂಗಲು ಕಷ್ಟ ಮುಂತಾದ ರೋಗಲಕ್ಷಣಗಳನ್ನು ಅನುಭವಿಸುತ್ತಾನೆ.
ಕಾರ್ಟಿಕೊಬಾಸಲ್ ಕ್ಷೀಣತೆ ಎಂದರೇನು?
ಈ ಸ್ಥಿತಿಯಲ್ಲಿ ವ್ಯಕ್ತಿಯ ಮೆದುಳಿನ ಭಾಗಗಳು ಕಿರಿದಾಗುವುದರ ಜೊತೆಗೆ ನರ ಕೋಶಗಳು ಹದಗೆಡುತ್ತಾ ಬರುತ್ತದೆ. ಕಾಲಾನಂತರದಲ್ಲಿ ಸಾವು ಸಂಭವಿಸುವ ಸ್ಥಿತಿಯಾಗಿದೆ. ಮೆದುಳಿನ ಜೀವಕೋಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಟೌ ಎಂಬ ಪ್ರೋಟೀನ್ ಅಸಹಜವಾಗಿ ಒಟ್ಟಿಗೆ ಸೇರಿದಾಗ ಈ ಸ್ಥಿತಿ ಉಂಟಾಗುತ್ತದೆ. ಇದರಿಂದ ನಿಮ್ಮ ಮೆದುಳು ಹದಗೆಡುವುದಲ್ಲದೆ, ನರಕೋಶಗಳನ್ನು ಹಾನಿಗೊಳಿಸುತ್ತದೆ.
ಲಕ್ಷಣಗಳೇನು?
ವ್ಯಕ್ತಿಗೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ
ಸ್ನಾಯು ಸೆಳೆತ ಹೆಚ್ಚಾಗುತ್ತದೆ (ಮಯೋಕ್ಲೋನಸ್)
ಕೈ ಅಥವಾ ಕಾಲುಗಳಲ್ಲಿ ಅಸಹಜ ಭಂಗಿ (ಕೈ ಬಿಗಿದು ಮುಷ್ಟಿ ಕಟ್ಟುವುದು)
ಆಹಾರ ತಿನ್ನಲು ಸಮಸ್ಯೆಯಾಗುವುದು
ಸಮತೋಲನ ಸಮಸ್ಯೆಗಳು
ತಮ್ಮ ಕೆಲಸವನ್ನು ಮಾಡಿಡಿಕೊಳ್ಳಲು ಕಷ್ಟ ಪಡುವುದು (ಅಪ್ರಾಕ್ಸಿಯಾ)
ಯೋಚನೆ ಮಾಡಲು ಮತ್ತು ಮಾತನಾಡಲು ಕಷ್ಟವಾಗುವುದು
ದೇಹದ ಒಂದು ಬದಿಯ ಅಂಗವನ್ನು ನಿಯಂತ್ರಿಸಲು ಕಷ್ಟವಾಗುವುದು (ಏಲಿಯನ್ ಲಿಂಬ್ ಸಿಂಡ್ರೋಮ್)
ಆದರೆ ಕಾರ್ಟಿಕೊಬಾಸಲ್ ಕ್ಷೀಣತೆಯು ಅಪರೂಪದ ಮೆದುಳಿನ ಕಾಯಿಲೆಯಾಗಿದ್ದು ಇದರ ರೋಗ ನಿರ್ಣಯ ಮಾಡುವುದು ಸವಾಲಿನ ಕೆಲಸವಾಗಿದೆ.
ಈ ಸಮಸ್ಯೆ ಸಾಮಾನ್ಯವಾಗಿ ನಿಮಗೆ 60 ರ ಹರೆಯದಲ್ಲಿದ್ದಾಗ ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಇದು 40ನೇ ವಯಸ್ಸಿನಲ್ಲಿಯೇ ಕಂಡು ಬರಬಹುದು. ಇದರ ರೋಗ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರಬಹುದು ಜೊತೆಗೆ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಬೀರಬಹುದು. ಇದು ಸಾಮಾನ್ಯವಾಗಿ ಮೊದಲು ನಿಮ್ಮ ದೇಹದ ಒಂದು ಅಂಗ ಅಥವಾ ಒಂದು ಬದಿಯಲ್ಲಿ ಸಂಭವಿಸುತ್ತದೆ ಬಳಿಕ ಇದು ನಿಮ್ಮ ದೇಹದ ಉಳಿದ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ಮೆದುಳಿನ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ರೋಗಲಕ್ಷಣಗಳು ಹದಗೆಡುತ್ತವೆ.
ಇದನ್ನೂ ಓದಿ: ಪ್ರತಿದಿನ ಈ ಎಲೆ ಸೇವನೆ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಯೂ ಮಾಯ
ಕಾರ್ಟಿಕೊಬಾಸಲ್ ಕ್ಷೀಣತೆಗೆ ಇತರ ಯಾವ ಪರಿಸ್ಥಿತಿಗಳು ಕಾರಣವಾಗಬಹುದು?
ಮೆದುಳಿನ ಕ್ಯಾನ್ಸರ್
ಬುದ್ಧಿಮಾಂದ್ಯತೆ, ವಿಶೇಷವಾಗಿ ಫ್ರಂಟೊಟೆಂಪೊರಲ್ ಬುದ್ಧಿಮಾಂದ್ಯತೆ
ಅಲ್ಝೈಮರ್ ಕಾಯಿಲೆ
ಮಲ್ಟಿಪಲ್ ಸಿಸ್ಟಮ್ ಅಟ್ರೋಫಿ
ಪಾರ್ಶ್ವವಾಯು
ಇವೆಲ್ಲವೂ ಕಾರ್ಟಿಕೊಬಾಸಲ್ ಸಿಂಡ್ರೋಮ್ಗೆ ಕಾರಣವಾಗಬಹುದು. ಹಾಗಾಗಿ ಈ ರೀತಿಯ ಆರೋಗ್ಯ ಸಮಸ್ಯೆ ಅಥವಾ ರೋಗ ಲಕ್ಷಣಗಳು ಕಂಡುಬಂದಲ್ಲಿ, ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ