AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mung Beans: ನಿತ್ಯ ಮೊಳಕೆಕಟ್ಟಿದ ಹೆಸರುಕಾಳು ತಿನ್ನುವುದರಿಂದಾಗುವ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

ನೀವು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ನಿಮ್ಮ ರೋಗನಿರೋಧಕ ಶಕ್ತಿ ಕುಂದಿದೆ ಎನ್ನುವ ಅನುಭವವಾಗುತ್ತಿದ್ದರೆ ನಿಮ್ಮಲ್ಲಿ ಹೊಸ ಚೈತನ್ಯ ಮೂಡಿಸಲು ಹೆಸರುಕಾಳು ಅತ್ಯುತ್ತಮ ಧಾನ್ಯವಾಗಿದೆ.

Mung Beans: ನಿತ್ಯ ಮೊಳಕೆಕಟ್ಟಿದ ಹೆಸರುಕಾಳು ತಿನ್ನುವುದರಿಂದಾಗುವ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ
Mung Beans
TV9 Web
| Edited By: |

Updated on:Aug 18, 2022 | 11:27 AM

Share

ನೀವು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ನಿಮ್ಮ ರೋಗನಿರೋಧಕ ಶಕ್ತಿ ಕುಂದಿದೆ ಎನ್ನುವ ಅನುಭವವಾಗುತ್ತಿದ್ದರೆ ನಿಮ್ಮಲ್ಲಿ ಹೊಸ ಚೈತನ್ಯ ಮೂಡಿಸಲು ಹೆಸರುಕಾಳು ಅತ್ಯುತ್ತಮ ಧಾನ್ಯವಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳು ಅಡಗಿವೆ, ಮೊಳಕೆಕಾಳುಗಳು ಜೀರ್ಣಿಸಿಕೊಳ್ಳಲು ತುಂಬಾ ಹಗುರವಾಗಿದೆ ಮತ್ತು ಸಾತ್ವಿಕ ಆಹಾರವಾಗಿದೆ.

ಆಯುರ್ವೇದವು ಮೂಂಗ್ ದಾಲ್ ಅನ್ನು ಅತ್ಯುತ್ತಮವೆಂದು ಪರಿಗಣಿಸುತ್ತದೆ ಮತ್ತು ಅದರ ಔಷಧೀಯ ಮತ್ತು ವಿಶಿಷ್ಟ ಗುಣಗಳಿಂದಾಗಿ ಊಟದಲ್ಲಿ ಪ್ರತಿದಿನ ಸೇವಿಸಲು ಶಿಫಾರಸು ಮಾಡುತ್ತದೆ . ಇದು ಕಫ ಮತ್ತು ಪಿತ್ತವನ್ನು ಸಮತೋಲನಗೊಳಿಸುತ್ತದೆ ಮತ್ತು ವಾತವನ್ನು ಸ್ವಲ್ಪ ಉಲ್ಬಣಗೊಳಿಸುತ್ತದೆ.

-ಹೆಸರುಕಾಳು ಕಬ್ಬಿಣ, ಪೊಟ್ಯಾಸಿಯಮ್, ಅಮೈನೋ ಏಡ್ಸ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.

– ಹೆಸರು ಕಾಳು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ

– ಇದು ಒಟ್ಟು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

– ಯಕೃತ್ತಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ

-ಮೊಳಕೆ ಭರಿಸಿದ ಹೆಸರುಬೇಳೆಯಲ್ಲಿ ಉನ್ನತ ಮಟ್ಟದ ಕಿಣ್ವಗಳು ಇರುವುದು. ಈ ಕಿಣ್ವಗಳು ದೇಹದಲ್ಲಿ ಚಯಾಪಚಯ ಕ್ರಿಯೆ ವೃದ್ಧಿಸಿ, ದೇಹದಲ್ಲಿ ರಾಸಾಯನಿಕ ಪ್ರತಿಕ್ರಿಯೆಯನ್ನು ವೃದ್ಧಿಸಿ, ಜೀರ್ಣಕ್ರಿಯೆಗೆ ನೆರವಾಗುವುದು. ಕಿಣ್ವಗಳು ಆಹಾರವನ್ನು ವಿಘಟಿಸುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಜೀರ್ಣಕ್ರಿಯೆಯನ್ನು ನಿಯಂತ್ರಿಸುವುದು.

– ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯಕವಾಗಿದೆ.

-ಕ್ಯಾಲೊರಿ ತುಂಬಾ ಕಡಿಮೆಯಿರುವ ಕಾರಣದಿಂದಾಗಿ ತೂಕ ಇಳಿಸಿಕೊಳ್ಳುವ ಆಹಾರ ಕ್ರಮದಲ್ಲಿ ಇದನ್ನು ಚಿಂತೆಯಿಲ್ಲದೆ ಬಳಸಿಕೊಳ್ಳಬಹುದು. ಇದರಲ್ಲಿ ಇರುವಂತಹ ನಾರಿನಾಂಶವು ದೀರ್ಘಕಾಲದ ತನಕ ಹಸಿವಾಗದಂತೆ ನೋಡಿಕೊಳ್ಳುವುದು. ಹೆಚ್ಚು ತಿನ್ನಬೇಕು ಎಂದು ಮೆದುಳಿಗೆ ಹೇಳುವ ಗ್ರೆಲಿನ್ ಹಾರ್ಮೋನು ಬಿಡುಗಡೆಯನ್ನು ಇದು ತಡೆಯುವುದು.

-ಗ್ಲೊಬುಲಿನ್ ಮತ್ತು ಅಲ್ಬುಲಿನ್ ಪ್ರೋಟೀನ್ ನ ಪ್ರಮುಖ ಅಂಶವಾಗಿದೆ. ಮೊಳಕೆಯುಕ್ತ ಹೆಸರುಬೇಳೆಯಲ್ಲಿ ಶೇ.85ರಷ್ಟು ಅಮಿನೋ ಆಮ್ಲವನ್ನು ಇದು ಬಳಸಿಕೊಳ್ಳುವುದು. ಕೋಶಗಳನ್ನು ಬೆಳೆಸಲು ಹಾಗೂ ಸರಿಪಡಿಸಲು ಪ್ರೋಟೀನ್ ಅಗತ್ಯವಾಗಿ ಬೇಕು. ಪ್ರೋಟೀನ್ ನಿಂದ ಮೂಳೆಗಳು, ಸ್ನಾಯುಗಳ, ಚರ್ಮ ಬೆಳೆಯುವುದು.

-ವಿಟಮಿನ್ ಕೆ ಯು ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಮೂಳೆಯ ಖನಿಜಾಂಶವನ್ನು ನಿಯಂತ್ರಿಸುವುದು ಮತ್ತು ಮೂಳೆ ಸಾಂದ್ರತೆಯನ್ನು ಕಾಪಾಡುವುದು. ಮೊಳೆಕೆಯುಕ್ತ ಹೆಸರುಬೇಳೆಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದ್ದು, ಒಂದು ಕಪ್ ನಲ್ಲಿ 34 ಮಿ.ಗ್ರಾಂ.ಇದೆ. ಆರೋಗ್ಯಕರ ದೇಹಕ್ಕೆ ಬೇಕಾಗಿರುವ ದೈನಂದಿನ ಅಗತ್ಯತೆಯ ವಿಟಮಿನ್ ಕೆ ಯನ್ನು ಇದು ಒದಗಿಸುವುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:22 am, Thu, 18 August 22

ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್