Lady Finger Benefits: ಬೆಂಡೆಕಾಯಿಯಿಂದ ಮಧುಮೇಹ ನಿಯಂತ್ರಣ ಸಾಧ್ಯ, ಇತರೆ ಪ್ರಯೋಜನಗಳನ್ನು ತಿಳಿಯಿರಿ

| Updated By: ನಯನಾ ರಾಜೀವ್

Updated on: Jul 25, 2022 | 10:23 AM

ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಅಸಮತೋಲನ ಕಂಡುಬಂದಾಗ ಅದು ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ. ಹಾಗೆಯೇ ಒಮ್ಮೆ ಮಧುಮೇಹ ಕಾಣಿಸಿಕೊಂಡರೆ ಸಂಪೂರ್ಣವಾಗಿ ಹೋಗಲಾಡಿಸುವುದು ಕಷ್ಟ ಆದರೆ ಖಂಡಿತವಾಗಿಯೂ ಕಡಿಮೆ ಮಾಡಬಹುದು

Lady Finger Benefits: ಬೆಂಡೆಕಾಯಿಯಿಂದ ಮಧುಮೇಹ ನಿಯಂತ್ರಣ ಸಾಧ್ಯ, ಇತರೆ ಪ್ರಯೋಜನಗಳನ್ನು ತಿಳಿಯಿರಿ
Lady Finger
Follow us on

ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಅಸಮತೋಲನ ಕಂಡುಬಂದಾಗ ಅದು ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ. ಹಾಗೆಯೇ ಒಮ್ಮೆ ಮಧುಮೇಹ ಕಾಣಿಸಿಕೊಂಡರೆ ಸಂಪೂರ್ಣವಾಗಿ ಹೋಗಲಾಡಿಸುವುದು ಕಷ್ಟ ಆದರೆ ಖಂಡಿತವಾಗಿಯೂ ಕಡಿಮೆ ಮಾಡಬಹುದು. ಡಯೆಟ್, ವ್ಯಾಯಾಮ ಸೇರಿದಂತೆ ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ನೀವು ಮಧುಮೇಹಿಗಳಾಗಿದ್ದರೆ ನಿಮ್ಮ ಊಟದಲ್ಲಿ ಏನಿರಬೇಕು ಎಂಬುದನ್ನು ನೀವು ನಿರ್ಧಾರ ಮಾಡಬೇಕು. ಹಾಗೆಯೇ ಬೆಂಡೆಕಾಯಿಯಿಂದ ಏನೇನು ಪ್ರಯೋಜನವಿದೆ ಎಂಬುದರ ಬಗ್ಗೆ ಅರಿಯಿರಿ.

ಮಧುಮೇಹಿಗಳಿಗೆ ಬೆಂಡೆಕಾಯಿಯಿಂದ ಏನೇನು ಪ್ರಯೋಜನ?
ಮಧುಮೇಹಿಗಳಿಗೆ ಹಲವು ತರಕಾರಿ ಹಾಗೂ ಹಣ್ಣುಗಳನ್ನು ತಿನ್ನುವಂತೆ ಸಲಹೆ ನೀಡಲಾಗುತ್ತದೆ ಅದರಲ್ಲಿ ಬೆಂಡೆಕಾಯಿ ಕೂಡ ಒಂದು.
ಬೆಂಡೆಕಾಯಿಯಲ್ಲಿದೆ.

ವಿಟಮಿನ್ ಬಿ: ಬೆಂಡೆಕಾಯಿಯಲ್ಲಿ ಫೋಲೇಟ್, ವಿಟಮಿನ್ ಬಿ6 ಹಾಗೂ ಫೈಬರ್ ಒಳಗೊಂಡಿದೆ. ಇಲ್ಲಿರುವ ವಿಟಮಿನ್ ಬಿ ಅಂಶವು ನಿಧಾನವಾಗಿ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಗ್ಲೈಕಾಮಿಕ್ ಇಂಡೆಕ್ಸ್: ಬೆಂಡೆಕಾಯಿಯಲ್ಲಿ ಕಡಿಮೆ ಪ್ರಮಾಣದ ಗ್ಲೈಕಾಮಿಕ್ ಇಂಡೆರಕ್ಸ್ ಇರಲಿದೆ. ಬೇರೆ ಬೇರೆ ಆಹಾರಗಳಲ್ಲಿ ಕೂಡ ಗ್ಲೈಕಾಮಿಕ್ ಇಂಡೆಕ್ಸ್ ಅನ್ನು ನೋಡಲಾಗುತ್ತದೆ. ಇದು ಕೂಡ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.

ಫೈಬರ್: ಬೆಂಡೆಕಾಯಿಯಲ್ಲಿ ಸಾಲ್ಯುಬಲ್ ಹಾಗೂ ಇನ್​ಸಾಲ್ಯೂಬಲ್ ಫೈಬರ್ ಒಳಗೊಂಡಿದೆ. ಇದು ಕೂಡ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಫೈಬರ್​ಯುಕ್ತ ಆಹಾರವನ್ನು ಸೇವನೆ ಮಾಡುವುದರಿಂದ ಸದಾ ಹೊಟ್ಟೆ ತುಂಬಿದ ಅನುಭವವಿರಲಿದೆ. ಹಾಗಾಗಿ ತೂಕ ಏರಿಕೆ ಸಮಸ್ಯೆ ಕಾಡುವುದಿಲ್ಲ.

ಕಡಿಮೆ ಕ್ಯಾಲೊರಿ: 100 ಗ್ರಾಂನಷ್ಟು ಬೆಂಡೆಕಾಯಿಯಲ್ಲಿ ಕೇವಲ 33 ಕ್ಯಾಲೊರಿಗಳಿರುತ್ತವೆ. ಕ್ಯಾಲೊರಿ ಕಡಿಮೆ ಇರುವುದರಿಂದ ತೂಕದ ಸಮತೋಲನ ಕಾಯ್ದುಕೊಳ್ಳಬಹುದು.

ಪೋಷಕಾಂಶಗಳು ಹೆಚ್ಚಿರಲಿವೆ: ಈ ತರಕಾರಿಯಲ್ಲಿ ಆಂಟಿಆಕ್ಸಿಡೆಂಟ್ಸ್​ ಪ್ರಮಾಣ ಹೆಚ್ಚಿರಲಿದೆ. ಹಾಗೆಯೇ ಬೆಂಡೆಕಾಯಿಯಲ್ಲಿ ಫೊಲೇಟ್, ಲ್ಯೂಟಿನ್ ಹಾಗೂ ಬೀಟಾ ಕ್ಯಾರೊಟಿನ್ ಇರಲಿದ್ದು ಅದರಲ್ಲಿ ಪೋಷಕಾಂಶಗಳು ಹೆಚ್ಚಿರಲಿವೆ.

ಬೆಂಡೆಕಾಯಿಯ ಇತರೆ ಪ್ರಯೋಜನಗಳು
ಬೆಂಡೆಕಾಯಿಯು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ ಆದರೆ ಈ ತರಕಾರಿ ಹಲವಾರು ಇತರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರ ಹೆಚ್ಚಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿ.

-ಬೆಂಡೆಕಾಯಿಯು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಏಕೆಂದರೆ ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
-ಬೆಂಡೆಕಾಯಿ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಗರ್ಭಿಣಿಯರು ಬೆಂಡೆಕಾಯಿಯನ್ನು ಸೇವಿಸಬಹುದು ಏಕೆಂದರೆ ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇರುತ್ತದೆ.
-ಬೆಂಡೆಕಾಯಿಯು ವಿಟಮಿನ್ ಕೆ ಯಲ್ಲಿ ಸಮೃದ್ಧವಾಗಿದೆ, ಇದು ಮೂಳೆ ರಚನೆಗೆ ಸಹಾಯ ಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ.

-ಬೆಂಡೆಕಾಯಿ ಲುಟೀನ್, ಜಿಯಾಕ್ಸಾಂಥಿನ್ ಮತ್ತು ಮೆಸೊ-ಜಿಯಾಕ್ಸಾಂಥಿನ್ ಅನ್ನು ಹೊಂದಿರುತ್ತದೆ. ಈ ಮೂರು ಆಹಾರದ ಕ್ಯಾರೊಟಿನಾಯ್ಡ್‌ಗಳ ಉಪಸ್ಥಿತಿಯಿಂದಾಗಿ, ಇದು ನಿಮ್ಮ ಕಣ್ಣುಗಳಿಗೆ ಸಹ ಪ್ರಯೋಜನಕಾರಿಯಾಗಿದೆ.
-ಚರ್ಮದ ಕೋಶಗಳ ಬೆಳವಣಿಗೆ ಮತ್ತು ದುರಸ್ತಿಗೆ ಆಹಾರದ ಕ್ಯಾರೊಟಿನಾಯ್ಡ್ಗಳು ಅವಶ್ಯಕ. ಬೆಂಡೆಕಾಯಿಯು ಸೂರ್ಯನಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹೀಗಾಗಿ ನಿಮಗೆ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.