ಈ ಚಿಕ್ಕಪುಟ್ಟ ವ್ಯಾಯಾಮಗಳ ಮೂಲಕ ಮಧುಮೇಹಿಗಳು ಮಳೆಗಾಲದಲ್ಲಿ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು

ಮಳೆಗಾಲದ ದಿನಗಳಲ್ಲಿ ಡಯಾಬಿಟೀಸ್ ನಿಂದ ಬಳಲುತ್ತಿರುವವರಿಗೆ ತಮ್ಮ ನಿಯಮಿತ ವ್ಯಾಯಾಮ ಮಾಡುವುದು ಕಷ್ಟವಾಗುತ್ತದೆ. ಆದರೆ ಅದನ್ನು ಜಾರಿಯಲ್ಲಿಡಲು ಅವರು ಮನೆಯೊಳಗಿದ್ದುಕೊಂಡೇ ತಮ್ಮ ವೈದ್ಯರ ಸಲಹೆ ಮೇರೆಗೆ ವ್ಯಾಯಾಮ ಮಾಡಬಹುದಾಗಿದೆ.

ಈ ಚಿಕ್ಕಪುಟ್ಟ ವ್ಯಾಯಾಮಗಳ ಮೂಲಕ ಮಧುಮೇಹಿಗಳು ಮಳೆಗಾಲದಲ್ಲಿ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು
ಮಧುಮೇಹಿಗಳಿಗೆ ಮಳೆಗಾಲದ ವ್ಯಾಯಾಮ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 22, 2022 | 8:01 AM

ಮಧುಮೇಹವನ್ನು (Diabetes) ನಿಯಂತ್ರಣದಲ್ಲಿಡಬೇಕಾದರೆ ವೈದ್ಯರು ಸಲಹೆ ನೀಡುವ ಮಾತ್ರೆಗಳನ್ನು ಕ್ರಮವಾಗಿ ತೆಗೆದುಕೊಳ್ಳುವ ಜೊತೆಗೆ ಸಮತೂಕದ ಆಹಾರ ಸೇವಿಸಬೇಕು ಮತ್ತು ನಿಯಮಿತವಾಗಿ ವ್ಯಾಯಾಮ (work out) ಮಾಡಬೇಕು. ಟೈಪ್ 1 ಮಧುಮೇಹದಿಂದ ಬಳಳುತ್ತಿರುವರಿಗೆ ದೈಹಿಕ ವ್ಯಾಯಾಮ (physical exercise) ಅತ್ಯವಶ್ಯಕವಾಗಿದೆ. ಇದು ದೇಹದಲ್ಲಿ ಬಲ ಹೆಚ್ಚಿಸುವುದರ ಜೊತೆಗೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.

ಅಮೆರಿಕದ ಡಯಾಬಿಟೀಸ್ ಸಂಸ್ಥೆಯ ಪ್ರಕಾರ ವ್ಯಾಯಾಮದ ಜೊತೆಗೆ ಭಾರ ಎತ್ತುವುದು ಮಧುಮೇಹಿಗಳಿಗೆ ಹೆಚ್ಚುವರಿ ಆರೋಗ್ಯ ಪ್ರಯೋಜನಗಳು ಒದಗಿಸುತ್ತದೆ. ವ್ಯಾಯಾಮ ದೇಹದ ಮೂಳೆಗಳನ್ನು ಬಲಗೊಳಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ದೇಹ ತೂಕ ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ ಹಾಗೂ ಹೃದ್ರೋಗಳನ್ನೂ ದೂರವಿಡುತ್ತದೆ.

ಮಳೆಗಾಲದ ದಿನಗಳಲ್ಲಿ ಡಯಾಬಿಟೀಸ್ ನಿಂದ ಬಳಲುತ್ತಿರುವವರಿಗೆ ತಮ್ಮ ನಿಯಮಿತ ವ್ಯಾಯಾಮ ಮಾಡುವುದು ಕಷ್ಟವಾಗುತ್ತದೆ. ಆದರೆ ಅದನ್ನು ಜಾರಿಯಲ್ಲಿಡಲು ಅವರು ಮನೆಯೊಳಗಿದ್ದುಕೊಂಡೇ ತಮ್ಮ ವೈದ್ಯರ ಸಲಹೆ ಮೇರೆಗೆ ವ್ಯಾಯಾಮ ಮಾಡಬಹುದಾಗಿದೆ. ದೈಹಿಕ ಬಲವನ್ನು ವೃದ್ಧಿಸುವ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸರಿದೂಗಿಸುವ ವ್ಯಾಯಾಮಗಳ ಕಡೆ ಅವರು ಗಮನ ಹರಿಸಬೇಕು.

ತಜ್ಞರ ಪ್ರಕಾರ ಮಧುಮೇಹದಿಂದ ಬಳಲುವ ಜನರು ನಿಯಮಿತವಾಗಿ ವ್ಯಾಯಾಮ ಮಾಡುವುದು ಸವಾಲಿನ ಕೆಲಸವಾಗಿರುವುದಿರಿಂದ ಮಳೆಗಾಲದಲ್ಲಿ ಅದನ್ನು ನಿರ್ಲಕ್ಷಿಸುತ್ತಾರೆ. ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು, ಅವರು ಒಳಾಂಗಣ ವ್ಯಾಯಾಮದ ದಿನಚರಿಯನ್ನು ರೂಪಿಸಿಕೊಳ್ಳುವ ಮೂಲಕ ಕೆಲ ಚಿಕ್ಕ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆರೋಗ್ಯಕರ ಆಹಾರ ಸೇವಿಸಿ ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ, ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ರಕ್ತದೊತ್ತಡ ಮತ್ತು ರಕ್ತದ ಕೊಲೆಸ್ಟ್ರಾಲ್ ಮಟ್ಟದಲ್ಲಿ ಪಾಸಿಟಿವ್ ಬದಲಾವಣೆಯನ್ನು ಕಾಣಬಹುದು.

ವ್ಯಾಯಾಮ ಮಾಡುವ ಮೊದಲು ಮತ್ತು ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುವ ಮೂಲಕ ವ್ಯಾಯಾಮದ ಪ್ರಯೋಜನಗಳನ್ನು ಕಂಡುಕೊಳ್ಳಬಹುದು. ಹಾಗಾದರೆ ಅವರು ಮನೆಯಲ್ಲಿದ್ದುಕೊಂಡೇ ಮಾಡಬಹುದಾದ ವ್ಯಾಯಾಮಗಳು ಯಾವವು ಅನ್ನೋದನ್ನು ತಿಳಿದುಕೊಳ್ಳೋಣ.

ವಾಲ್ ಪುಶ್ ಅಪ್ಸ್: ಇದು ಬಹಳ ಸುಲಭ. ಗೋಡೆಗೆ ಮುಖಮಾಡಿ ನಿಮ್ಮ ಅಂಗೈಗಳನ್ನು ಸಮಾನಾಂತರದಲ್ಲಿ ಗೋಡೆಯ ಮೇಲಿಡಿ. ನಿಮ್ಮ ಎದೆಭಾಗವನ್ನು ನೇರವಾಗಿಟ್ಟುಕೊಂಡು ಮೊಣಕೈಗಳನ್ನು ಬಾಗಿಸುತ್ತಾ ಎದೆಯನ್ನು ಗೋಡೆಯ ಕಡೆ ಒಯ್ಯಿರಿ. ಹಾಗೆಯೇ ಎದೆಯನ್ನು ಹಿಂದೆ ತಳ್ಳುತ್ತಾ ಕೈಗಳನ್ನು ನೇರಗೊಳಿಸಿ.

ಭಾರ ಎತ್ತುವುದು: ಇದನ್ನು ಕೂತು ಇಲ್ಲವೇ ನಿಂತುಕೊಂಡು ಮಾಡಬಹುದು. ನಿಮ್ಮ ಎರಡೂ ಕೈಗಳಲ್ಲಿ ಸಮತೂಕದ ವೇಟ್ ಗಳಿರಲಿ. ಮೊಣಕೈಗಳನ್ನು ಕೊಂಚ ಬಾಗಿಸಿ ನಿಧಾನವಾಗಿ ಟಿ ಆಕಾರ ಮೂಡುವ ಹಂತದವರೆಗೆ ವೇಟ್ ಗಳನ್ನು ಮೇಲೆತ್ತಿರಿ. ನಿಧಾನಕ್ಕೆ ಕೈಗಳನ್ನು ಕೆಳಗೆ ತನ್ನಿ ಮತ್ತು ವ್ಯಾಯಾಮವನ್ನು ಪುನರಾವರ್ತಿಸಿ.

ಚೇರ್ ರೈಸಸ್: ಸುರಕ್ಷಿತವಾಗಿರುವ ಕುರ್ಚಿಯ ಮುಂಭಾಗದಲ್ಲಿ ಕುಳಿತು ನಿಮ್ಮ ಕೈಗಳನ್ನು ಎದೆಯ ಮೇಲೆ ಅಡ್ಡಲಾಗಿ ಮಡಿಚಿ ಹಿಂದಕ್ಕೆ ಬಾಗಿ. ನಂತರ ನಿಮ್ಮ ಕೈಗಳನ್ನು ನೇರವಾಗಿಸಿ ಕುರ್ಚಿಯ ಮೇಲೆ ಕೂರುವುದು ಏಳುವುದನ್ನು ಮಾಡಿ. ನಿಮಗೆ ದಣಿವೆನಿಸುವವರಗೆ ಹಾಗೆ ಮಾಡುತ್ತಿರಿ.

ಬೈಸೆಪ್ ಕರ್ಲ್ಸ್: ತೋಳುಗಳನ್ನು ನಿಮ್ಮ ಬದಿಗಳಲ್ಲಿಟ್ಟು ನಿಮ್ಮ ಅಂಗೈಗಳು ನಿಮ್ಮ ಮುಖಕ್ಕೆ ಎದುರಾಗಿರುವ ಹಾಗಿಟ್ಟುಕೊಂಡು, ಪ್ರತಿ ಕೈಯಲ್ಲಿ ವೇಟ್ ಹಿಡಿದುಕೊಳ್ಳಿ. ಅಂಗೈಯು ನಿಮಗೆ ಎದುರಾಗಿ, ತೂಕವನ್ನು ಭುಜಕ್ಕೆ ವರ್ಗಾಯಿಸಲು ಒಂದು ತೋಳನ್ನು ಬಗ್ಗಿಸಿ. ನಂತರ ಮತ್ತೊಂದು ಕೈಯಿಂದಲೂ ಇದನ್ನೇ ಮಾಡುತ್ತ್ತಾ ಸರದಿಯಂತೆ ಮಾಡುವುದನ್ನು ಮುಂದುವರೆಸಿ.

ಟ್ರೈಸೆಪ್ಸ್ ಎಕ್ಸ್ಟೆನ್ಶನ್ಸ್: ಒಂದು ಕೈಯಲ್ಲಿ ವೇಟ್ ಹಿಡಿದುಕೊಂಡು ಮತ್ತೊಂದು ಕೈಯನ್ನು ಬಾಗಿಸಿ ಮೊಣಕೈ ಮೇಲ್ಛಾವಣಿ ಕಡೆ ನೋಡುತ್ತಿರುವ ಹಾಗೆ ತಲೆಯ ಮೇಲೆ ತನ್ನಿ. ನಿಮ್ಮ ಮೊಣಕೈಗೆ ಗಾಯವಾಗದಂತಿರಲು ನಿಮ್ಮ ಇನ್ನೊಂದು ಕೈಯಿಂದ ಅದನ್ನು ಬಲವಾಗಿ ಹಿಡಿದುಕೊಳ್ಳಿ. ವೇಟನ್ನು ನಿಮ್ಮ ತಲೆಗಿಂತ ಮೇಲೆ ಎತ್ತಲು ನಿಮ್ಮ ಕೈಯನ್ನು ನೇರಗೊಳಿಸಿ. ಇದನ್ನು ಪುನರಾವರ್ತಿಸಿದ ಬಳಿಕ ಮತ್ತೊಂದು ಕೈಯಿಂದ ಇದನ್ನು ಮಾಡಿ.

ಈ ಚಿಕ್ಕಪುಟ್ಟ ವ್ಯಾಯಾಮಗಳು ನಿಮ್ಮ ದೇಹದಲ್ಲಿ ಬಲವನ್ನು ಹೆಚ್ಚಿಸುತ್ತವೆ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತವೆ. ಅದರೆ ಇದನ್ನೆಲ್ಲ ಮಾಡುವ ಮೊದಲು ನಿಮ್ಮ ಡಯಾಬಿಟಾಲೊಜಿಸ್ಟ್ ಅವರನ್ನು ಸಂಪರ್ಕಿಸಲು ಮರೆಯದಿರಿ. ಹಾಗೆಯೇ ವ್ಯಾಯಾಮ ಮಾಡುವ ಮೊದಲು ಮತ್ತು ನಂತರ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಆಗಾಗ್ಗೆ ಪರೀಕ್ಷಿಸುತ್ತಿರಿ.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ