ಹೊಕ್ಕಳಿನ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆಯೇ? ಕಾರಣ ತಿಳಿಯಿರಿ

|

Updated on: Mar 22, 2023 | 8:00 AM

ಹೊಕ್ಕಳ ಕೆಳ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದು ಆದರೆ ಅದೇ ಮೇಲ್ಭಾಗದಲ್ಲಿ ಕಾಣಿಸಿಕೊಂಡರೆ ಅದಕ್ಕೂ ಕೂಡ ಹಲವು ಕಾರಣಗಳಿರುತ್ತವೆ

ಹೊಕ್ಕಳಿನ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆಯೇ? ಕಾರಣ ತಿಳಿಯಿರಿ
ಹೊಟ್ಟೆ ನೋವು
Follow us on

ಹೊಕ್ಕಳ ಕೆಳ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದು ಆದರೆ ಅದೇ ಮೇಲ್ಭಾಗದಲ್ಲಿ ಕಾಣಿಸಿಕೊಂಡರೆ ಅದಕ್ಕೂ ಕೂಡ ಹಲವು ಕಾರಣಗಳಿರುತ್ತವೆ. ಈ ನೋವಿನ ಹಿಂದೆ ಹಲವು ಕಾರಣಗಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಜನರು ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ವ್ಯಕ್ತಿಗೆ ಅಜೀರ್ಣದ ಸಮಸ್ಯೆ ಇದ್ದಾಗ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಉಂಟಾಗುತ್ತದೆ. ಈ ಕಾರಣದಿಂದಾಗಿ ಒಬ್ಬ ವ್ಯಕ್ತಿಯು ಸಮಸ್ಯೆ ಅನುಭವಿಸಬಹುದು.

ಹೊಟ್ಟೆಯ ಮೇಲ್ಭಾಗದಲ್ಲಿ ನೋವನ್ನು ಅನುಭವಿಸುತ್ತಿದ್ದರೆ ಮೂತ್ರಕೋಶದ ಕಲ್ಲುಗಳು ಕೂಡ ಒಂದು ಕಾರಣವಾಗಿರಬಹುದು. ಭುಜದ ನೋವು, ವಾಂತಿ ಅಥವಾ ವಾಕರಿಕೆ, ಎದೆಮೂಳೆಯ ಅಡಿಯಲ್ಲಿ ಹಠಾತ್ ತೀಕ್ಷ್ಣವಾದ ನೋವು ಇತ್ಯಾದಿಗಳು ಕಾಣಿಸಿಕೊಳ್ಳಬಹುದು.

ವ್ಯಕ್ತಿಯ ಹೊಕ್ಕುಳ ಜಾರಿದಾಗ, ಈ ಕಾರಣದಿಂದಾಗಿ ವ್ಯಕ್ತಿಯು ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಅನುಭವಿಸಬಹುದು. ಈ ನೋವು ನಿಧಾನವಾಗಿ ಹೆಚ್ಚುತ್ತಲೇ ಇರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು.

ಮತ್ತಷ್ಟು ಓದಿ: ರಾಜ್ಯದಲ್ಲಿ ಏರಿಕೆಯಾಗುತ್ತಿರುವ ಕೊವಿಡ್​ ಪ್ರಕರಣಗಳು; 4 ಜಿಲ್ಲೆಗಳ ಮೇಲೆ ನಿಗಾ

ವ್ಯಕ್ತಿಯು ಯಕೃತ್ತಿನ ಕಾಯಿಲೆಯನ್ನು ಹೊಂದಿದ್ದರೆ ಆಗ ವ್ಯಕ್ತಿಯ ಹೊಟ್ಟೆಯ ಮೇಲಿನ ಭಾಗದಲ್ಲಿ ನೋವು ಅನುಭವಿಸಬಹುದು.

ಈ ರೋಗಲಕ್ಷಣವು ಯಕೃತ್ತಿನಲ್ಲಿ ಬಾವು ಕಾಣಿಸಿಕೊಂಡಾಗ ಕಂಡುಬರಬಹುದು. ಇದರಿಂದಾಗಿ ಯಕೃತ್ತಿಗೆ ಹಾನಿಯುಮಟಾಗಬಹುದು.
ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಒಬ್ಬ ವ್ಯಕ್ತಿಗೆ ಪೆಪ್ಟಿಕ್ ಅಲ್ಸರ್ ಸಮಸ್ಯೆ ಇದ್ದಾಗ ಅಂದರೆ ಹೊಟ್ಟೆಯ ಒಳಪದರದಲ್ಲಿ ಅಥವಾ ನಿಮ್ಮ ಸಣ್ಣ ಕರುಳಿನ ಮೇಲಿನ ಭಾಗದಲ್ಲಿ ಉಂಟಾಗುವ ಗಾಯ, ಆಗ ವ್ಯಕ್ತಿಯು ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಅನುಭವಿಸಬಹುದು.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ