Hemoglobin Increase: ನೀವು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಸಲಹೆಗಳು

| Updated By: preethi shettigar

Updated on: Jul 05, 2021 | 9:01 AM

Health Tips: ದೇಹದಲ್ಲಿ ಹಿಮೋಗ್ಲೋಬಿನ್​ ಹೆಚ್ಚಿಸಲು ಪ್ರೋಟೀನ್​ಗಳು ಸಹಾಯ ಮಾಡುತ್ತವೆ. ತರಕಾರಿಗಳು, ಹಣ್ಣುಗಳನ್ನು ಸೇವಿಸಿ. ಜತೆಗೆ ಹಸಿರು ಸೊಪ್ಪುಗಳು ನಿಮ್ಮ ಆಹಾರ ಪದಾರ್ಥಗಳಲ್ಲಿ ಇರಲಿ.

Hemoglobin Increase: ನೀವು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಸಲಹೆಗಳು
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಜನರು ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ರಕ್ತ ಮಟ್ಟ ಸರಿಯಾಗಿರಬೇಕು. ಇಲ್ಲದಿದ್ದರೆ ಹೆಚ್ಚಿನ ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಆದ್ದರಿಂದ ದೇಹದಲ್ಲಿ ರಕ್ತ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಕೆಲವು ಸಲಹೆಗಳು ಇಲ್ಲಿವೆ. ಕೆಲವು ಹಣ್ಣುಗಳಲ್ಲಿ ರಕ್ತ ಶುದ್ಧೀಕರಿಸುವ ಮತ್ತು ರಕ್ತವನ್ನು ಹೆಚ್ಚಿಸುವ ಪ್ರೋಟೀನ್​ಗಳಿರುತ್ತವೆ ಹಾಗೂ ನಿಮ್ಮ ಆರೋಗ್ಯದಲ್ಲಿ ಕಬ್ಬಿಣದ ಅಂಶವು ಹೆಚ್ಚು ಆರೋಗ್ಯವನ್ನು ವೃದ್ಧಿಸುತ್ತದೆ. ದೇಹಕ್ಕೆ ಅಗತ್ಯ ಪ್ರಮಾಣದ ಕಬ್ಬಿಣದ ಅಂಶ ಸಿಕ್ಕರೆ ರಕ್ತಹೀನತೆ ಸಮಸ್ಯೆಯಿಂದ ದೂರವಿರಬಹುದು. ಹಾಗಾಗಿ ಕಬ್ಬಿಣ ಅಂಶ ಹೆಚ್ಚಿಸುವ ಆಹಾರ ಯಾವುವು ಎಂಬ ಮಾಹಿತಿ ಇಲ್ಲಿದೆ.

ಕಬ್ಬಿಣಾಂಶಯುಕ್ತ ಆಹಾರವನ್ನು ಸೇವಿಸಿ
ರಕ್ತಹೀನತೆ, ಆಲಸ್ಯ, ತಲೆತಿರುಗುವುದು ಇವೆಲ್ಲಾ ಸಮಸ್ಯೆಗೆ ಕಾರಣ ರಕ್ತಹೀನತೆ. ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿದ್ದರೂ ಸಹ ಈ ರೀತಿಯ ಸಮಸ್ಯೆಗಳು ಕಂಡು ಬರುತ್ತವೆ. ಹಾಗಿರುವಾಗ ಹಸಿರು ಸೊಪ್ಪು, ಹೂಕೋಸು, ಪಾಲಾಕ್​, ಅಣಬೆ, ಆಲೂಗಡ್ಡೆಯಂತಹ ಆಹಾರ ಪದಾರ್ಥಗಳು ನಿಮ್ಮದಾಗಿರಲಿ. ಇದು ನಿಮ್ಮ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜತೆಗೆ ಕಲ್ಲಂಗಡಿ, ದಾಳಿಂಬೆ, ಒಣದ್ರಾಕ್ಷಿ ಹಣ್ಣುಗಳು ದೇಹದಲ್ಲಿ ರಕ್ತ ಹೆಚ್ಚಿಸಲು ಸಹಾಯಕವಾಗಿದೆ.

ವಿಟಮಿನ್​ ಸಿ
ಕಬ್ಬಿಣದ ಕೊರತೆಯನ್ನು ನೀಗಿಸಲು ಮಿಟಮಿನ್​ ಸಿ ಸೇವನೆಯು ಹೆಚ್ಚು ಸಹಾಯ ಮಾಡುತ್ತದೆ. ಇದಕ್ಕೆ ಸರಿಯಾದ ಪ್ರಮಾಣದಲ್ಲಿ ಮಿಟಮಿನ್​ ಸಿ ತೆಗೆದುಕೊಳ್ಳುವುದು ಮುಖ್ಯ. ಇದು ನಿಮ್ಮ ದೇಹದಲ್ಲಿ ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಸೇಬು ಅಥವಾ ದಾಳಿಂಬೆ
ಹಿಮೋಗ್ಲೋಬಿನ್​ ಸರಿಯಾಗಿ ನಿಯಂತ್ರಣಕ್ಕೆ ತರಲು ಕಬ್ಬಿಣಾಂಶಯುಕ್ತ ಹಣ್ಣುಗಳು ಸಹಾಯ ಮಾಡುತ್ತವೆ. ಪ್ರತಿನಿತ್ಯ ನೀವು ಸೇಬು ಅಥವಾ ದಾಳಿಂಬೆ ಹಣ್ಣುಗಳನ್ನು ಸೇವಿಸುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಪೋಲಿಕ್​ ಆಮ್ಲ
ದೇಹದಲ್ಲಿ ಪೋಲಿಕ್​ ಆಮ್ಲದ ಕೊರತೆಯಿದ್ದಾಗ ಹಿಮೋಗ್ಲೋಬಿನ್​ ಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ಪೋಲಿಕ್​ ಆಮ್ಲಯುಕ್ತ ಆಹಾರವನ್ನು ಸೇವಿಸಿ. ಎಲೆಕೋಸು, ಹೂಕೋಸು, ಬಾದಾಮಿ, ಪುಟಾಣಿ ಹಾಗೂ ಬಾಳೆಹಣ್ಣಿನಲ್ಲಿ ಈ ಅಂಶ ಹೆಚ್ಚಾಗಿರುವುದರಿಂದ ಹಿಮೋಗ್ಲೋಬಿನ್​ ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ.

ಪ್ರೋಟೀನ್​ಯುಕ್ತ ಆಹಾರ
ದೇಹದಲ್ಲಿ ಹಿಮೋಗ್ಲೋಬಿನ್​ ಹೆಚ್ಚಿಸಲು ಪ್ರೋಟೀನ್​ಗಳು ಸಹಾಯ ಮಾಡುತ್ತವೆ. ತರಕಾರಿಗಳು, ಹಣ್ಣುಗಳನ್ನು ಸೇವಿಸಿ. ಜತೆಗೆ ಹಸಿರು ಸೊಪ್ಪುಗಳು ನಿಮ್ಮ ಆಹಾರ ಪದಾರ್ಥಗಳಲ್ಲಿ ಇರಲಿ. ಡ್ರೈಫ್ರೂಟ್ಸ್​ ಜತೆಗೆ ಮೆಗ್ನೀಶಿಯಂ ಹೊಂದಿರುವ ಆಹಾರಗಳನ್ನು ಸೇವಿಸಿ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಜತೆಗೆ ರಕ್ತಹೀನತೆ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.

ಇದನ್ನೂ ಓದಿ:

Health Tips: ಮಾನ್ಸೂನ್​ನಲ್ಲಿ ನಿಮ್ಮ ಆರೋಗ್ಯವನ್ನು ಹೇಗೆ ರಕ್ಷಿಸಿಕೊಳ್ಳಬಹುದು? ಇಲ್ಲಿದೆ ಮಾಹಿತಿ

Health Tips: ವಿಟಮಿನ್ ಬಿ 12 ಕೊರತೆ ಎಂದರೇನು? ಈ ಸಮಸ್ಯೆಯಿಂದ ಹೊರಬರಲು ಸೇವಿಸಬೇಕಾದ ಆಹಾರ ಪದ್ಧತಿಗಳ ವಿವರ ಹೀಗಿದೆ