ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟುಬಿಡಿ

ಋತುಗಳಿಗೆ ಅನುಗುಣವಾಗಿ ಸಿಗುವ ಬಹುತೇಕ ಹಣ್ಣುಗಳು ತಮ್ಮದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತವೆ. ಹಾಗಾಗಿ ಅವು ಒದಗಿಸುವ ಪೋಷಕಾಂಶಗಳು ದೇಹಕ್ಕೆ ಬಹಳ ಮುಖ್ಯ. ಆದರೆ ಕೆಲವರು ತಿಳಿದೋ ತಿಳಿಯದೆಯೋ, ಹಣ್ಣುಗಳನ್ನು ಸೇವಿಸಿದ ನಂತರ ನೀರು ಕುಡಿಯುತ್ತಾರೆ. ಈ ರೀತಿಯ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ದೇಹಕ್ಕೆ ವಿವಿಧ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾದರೆ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ಯಾವ ರೀತಿಯ ತೊಂದರೆಯಾಗುತ್ತದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳಿ.

ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟುಬಿಡಿ
ಸಾಂದರ್ಭಿಕ ಚಿತ್ರ
Edited By:

Updated on: Mar 06, 2025 | 11:01 AM

ಋತುಗಳಿಗೆ ಅನುಗುಣವಾಗಿ ವಿವಿಧ ರೀತಿಯ ಹಣ್ಣುಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಅನುಗುಣವಾಗಿ ದಿನನಿತ್ಯ ಕನಿಷ್ಠ ಒಂದು ರೀತಿಯ ಹಣ್ಣನ್ನಾದರೂ ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಹಣ್ಣುಗಳು ವಿಟಮಿನ್ ಎ, ಬಿ, ಸಿ, ಇ, ಕ್ಯಾಲ್ಸಿಯಂ, ಕಬ್ಬಿಣದಿಂದ ಪೊಟ್ಯಾಸಿಯಮ್ ವರೆಗೆ, ದೇಹಕ್ಕೆ ಅಗತ್ಯವಿರುವ ಅನೇಕ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತವೆ. ಅದಕ್ಕಾಗಿಯೇ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ಸೇರಿಸಿಕೊಳ್ಳುವುದಕ್ಕೆ ಸಲಹೆ ನೀಡಲಾಗುತ್ತದೆ. ಋತುಗಳಿಗೆ ಅನುಗುಣವಾಗಿ ಸಿಗುವ ಬಹುತೇಕ ಹಣ್ಣುಗಳು ತಮ್ಮದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತವೆ. ಹಾಗಾಗಿ ಅವು ಒದಗಿಸುವ ಪೋಷಕಾಂಶಗಳು ದೇಹಕ್ಕೆ ಬಹಳ ಮುಖ್ಯ. ಆದರೆ ಕೆಲವರು ತಿಳಿದೋ ತಿಳಿಯದೆಯೋ, ಹಣ್ಣುಗಳನ್ನು ಸೇವಿಸಿದ ನಂತರ ನೀರು ಕುಡಿಯುತ್ತಾರೆ. ಈ ರೀತಿಯ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ದೇಹಕ್ಕೆ ವಿವಿಧ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾದರೆ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ಯಾವ ರೀತಿಯ ತೊಂದರೆಯಾಗುತ್ತದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳಿ.

ಜೀರ್ಣಕಾರಿ ಸಮಸ್ಯೆಗಳು

ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದರಿಂದ ಅಜೀರ್ಣತೆ, ಆಮ್ಲೀಯತೆ, ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಪರಿಣಾಮವಾಗಿ, ಹಣ್ಣುಗಳಿಂದ ಸರಿಯಾದ ರೀತಿಯಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗುವುದಿಲ್ಲ. ಪೂರ್ಣ ಪ್ರಯೋಜನಗಳು ಸಿಗುವುದಿಲ್ಲ. ಹಣ್ಣು ತಿಂದ ತಕ್ಷಣ, ಅದರಲ್ಲಿಯೂ ವಿಶೇಷವಾಗಿ ಹುಳಿ ಹಣ್ಣುಗಳನ್ನು ಸೇವಿಸಿದ ನಂತರ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು.

ಪಿಎಚ್ (pH) ಮಟ್ಟಗಳಲ್ಲಿನ ಬದಲಾವಣೆಗಳು

ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಇದು ದೇಹದ ಪಿಎಚ್ ಮಟ್ಟದ ಕುಸಿತಕ್ಕೆ ಕಾರಣವಾಗುತ್ತದೆ. ಕೆಲವು ಹಣ್ಣುಗಳಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿರುತ್ತದೆ. ಹಾಗಾಗಿ ನೀವು ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ನೀರಿನಾಂಶ ಜಾಸ್ತಿಯಾಗಿ ಕೆಲವರಿಗೆ ವಾಂತಿಯಾಗಬಹುದು.

ಇದನ್ನೂ ಓದಿ
ಮೈಕ್ರೋವೇವ್ ಗಳ ಬಳಕೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ
ಹೃದಯಾಘಾತ ಆಗುವ 30 ದಿನಗಳ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಂಡುಬರುತ್ತದೆ
ಈ ತರಕಾರಿ ಕೊಲೆಸ್ಟ್ರಾಲ್​​ಗೆ ಬ್ರಹ್ಮಾಸ್ತ್ರ
ಪ್ರೈವೇಟ್ ಪಾರ್ಟ್ ನಲ್ಲಿ ತುರಿಕೆ ಬರುವುದನ್ನು ತಡೆಯಲು ಈ ರೀತಿ ಮಾಡಿ

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳ

ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ ದೇಹದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ. ಇದು ಮಧುಮೇಹಕ್ಕೆ ಕಾರಣವಾಗಬಹುದು. ಹಾಗಾಗಿ ಮಧುಮೇಹಿಗಳು ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯಬಾರದು ಎಂಬುದನ್ನು ನೆನಪಿನಲ್ಲಿಡಬೇಕು.

ಇದನ್ನೂ ಓದಿ: ಈ ಹಣ್ಣು ಕ್ಯಾನ್ಸರ್‌ಗೆ ರಾಮಬಾಣ, ಹೃದಯಕ್ಕೆ ರಕ್ಷಕ, ವರ್ಷಕ್ಕೆ ಒಂದು ಬಾರಿ ತಿಂದರೆ ಸಾಕು

ಶೀತ ಮತ್ತು ಕೆಮ್ಮಿನ ಸಮಸ್ಯೆಗಳು

ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ದೇಹದಲ್ಲಿ ಕಫ ಹೆಚ್ಚಾಗುತ್ತದೆ. ಇದು ಕೆಮ್ಮು, ಶೀತ, ಗಂಟಲು ನೋವಿಗೆ ಕಾರಣವಾಗಬಹುದು. ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವುದರಿಂದ ಕೆಮ್ಮಿಗೆ ಕಾರಣವಾಗಬಹುದು ಎಂದು ಹಿರಿಯರು ಹೇಳುವುದನ್ನು ನೀವು ಆಗಾಗ ಕೇಳಿರಬಹುದು. ಈ ಹಣ್ಣುಗಳನ್ನು ಊಟಕ್ಕೆ ಅರ್ಧ ಗಂಟೆ ಮೊದಲು ಅಥವಾ ನಂತರ ತಿನ್ನಬೇಕು. ಆದರೆ ಅವುಗಳ ಸೇವನೆಯ ನಂತರ ನೀರನ್ನು ಮಾತ್ರ ಕುಡಿಯಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 10:36 am, Thu, 6 March 25