Patanjali Bronchom: ಶ್ವಾಸಕೋಶ ಕಾಯಿಲೆಗಳಿಗೆ ಪತಂಜಲಿ ಔಷಧ; ಬ್ರೋಂಕೋಮ್ ಸರ್ವರೋಗ ನಿವಾರಕವಾ?

Patajali's Bronchom can cure Microplastic induced lung damage: ಪತಂಜಲಿ ಸಂಸ್ಥೆಯು ನಡೆಸಿದ ಇತ್ತೀಚಿನ ಸಂಶೋಧನೆಯ ಪ್ರಕಾರ, ಆಯುರ್ವೇದ ಔಷಧವಾದ ಬ್ರಾಂಕೋಮ್ ಮೈಕ್ರೋಪ್ಲಾಸ್ಟಿಕ್‌ಗಳಿಂದ ಉಂಟಾಗುವ ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ, ಬ್ರಾಂಕೋಮ್ ಉರಿಯೂತ ಮತ್ತು ಶ್ವಾಸಕೋಶದ ಕಾರ್ಯನಿರ್ವಹಣೆಯಲ್ಲಿನ ಕ್ಷೀಣತೆಯನ್ನು ಕಡಿಮೆ ಮಾಡಿದೆ ಎಂದು ಕಂಡುಬಂದಿದೆ. ಈ ಸಂಶೋಧನೆಯು ಎಲ್ಸೆವಿಯರ್ ಪ್ರಕಟಣೆಯಲ್ಲಿ ಪ್ರಕಟವಾಗಿದೆ.

Patanjali Bronchom: ಶ್ವಾಸಕೋಶ ಕಾಯಿಲೆಗಳಿಗೆ ಪತಂಜಲಿ ಔಷಧ; ಬ್ರೋಂಕೋಮ್ ಸರ್ವರೋಗ ನಿವಾರಕವಾ?
ಪತಂಜಲಿ

Updated on: May 07, 2025 | 3:22 PM

ಇಂದು ಇಡೀ ಜಗತ್ತು ಪ್ಲಾಸ್ಟಿಕ್‌ನಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳಿಂದ (plastic induced diseases) ಬಳಲುತ್ತಿದೆ. ಮೈಕ್ರೋಪ್ಲಾಸ್ಟಿಕ್ಸ್ ಎಂದು ಕರೆಯಲ್ಪಡುವ ಈ ಸಣ್ಣ ಪ್ಲಾಸ್ಟಿಕ್ ಕಣಗಳು ಈಗ ಗಾಳಿ, ನೀರು ಮತ್ತು ಆಹಾರದಲ್ಲಿ ಕಂಡುಬರುತ್ತವೆ. ಇವ್ಯಾವುದೂ ಗೊತ್ತಿಲ್ಲದೇ ನಾವು ಇವುಗಳನ್ನು ಪ್ರತಿದಿನ ಸೇವಿಸುತ್ತಿದ್ದೇವೆ. ಈ ಕಣಗಳು ಮಾನವ ದೇಹವನ್ನು, ಅದರಲ್ಲೂ ವಿಶೇಷವಾಗಿ ಶ್ವಾಸಕೋಶವನ್ನು ಪ್ರವೇಶಿಸಿದಾಗ, ಉರಿಯೂತ, ಕಿರಿಕಿರಿ ಮತ್ತು ಜೀವಕೋಶಗಳಿಗೆ ಹಾನಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇದು ಶ್ವಾಸಕೋಶದ ಉರಿಯೂತ (Lung Inflammation) ಮತ್ತು ಉಸಿರಾಟ ಮಾರ್ಗದ ಅತಿರೇಕ ಸ್ಪಂದನೆಯಂತಹ (Airway Hyper-Responsiveness) ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

ಪತಂಜಲಿ ಸಂಸ್ಥೆಯಿಂದ ಸಂಶೋಧನೆ

ಮೈಕ್ರೋಪ್ಲಾಸ್ಟಿಕ್‌ಗಳಿಂದ ಉಂಟಾಗುವ ಶ್ವಾಸಕೋಶದ ಕಾರ್ಯನಿರ್ವಹಣೆಯ ಕ್ಷೀಣತೆಯನ್ನು ಆಯುರ್ವೇದ ಔಷಧ ಬ್ರಾಂಕೋಡಿಲ್‌ನಿಂದ (Bronchom) ತಡೆಯಬಹುದು ಎಂದು ಪತಂಜಲಿ ಸಂಸ್ಥೆಯ ವಿಜ್ಞಾನಿಗಳು ಹೇಳುತ್ತಾರೆ. ಇಲಿಗಳ ಮೇಲೆ ನಡೆಸಿದ ಇತ್ತೀಚಿನ ಸಂಶೋಧನೆಯಲ್ಲಿ ಇದು ಋಜುವಾತಾಗಿದೆಯಂತೆ. ಬ್ರಾಂಕೊ ಚಿಕಿತ್ಸೆಯು ಸೈಟೊಕಿನ್ ಬಿಡುಗಡೆ (Cytokine Release) ಮತ್ತು ಏರ್​​ವೇ ಹೈಪರ್-ರೆಸ್ಪಾನ್ಸಿವ್‌ನೆಸ್‌ನಂತಹ (Airway Hyper-Responsiveness) ಮೈಕ್ರೋಪ್ಲಾಸ್ಟಿಕ್-ಪ್ರೇರಿತ ಶ್ವಾಸಕೋಶದ ಉರಿಯೂತದ ಗುರುತುಗಳನ್ನು ಕಡಿಮೆ ಮಾಡಿದೆ ಎಂದು ಈ ಅಧ್ಯಯನ ಖಚಿತಪಡಿಸಿದೆ. ಈ ಸಂಶೋಧನೆಯು ವಿಶ್ವಪ್ರಸಿದ್ಧ ಎಲ್ಸೆವಿಯರ್ ಪಬ್ಲಿಕೇಶನ್ (Elsevier) ಪ್ರಕಟಿಸಿದ ಅಂತರರಾಷ್ಟ್ರೀಯ ಸಂಶೋಧನಾ ಜರ್ನಲ್ ಬಯೋಮೆಡಿಸಿನ್ & ಫಾರ್ಮಾಕೋಥೆರಪಿಯಲ್ಲಿ ಪ್ರಕಟವಾಗಿದೆ.

ಇದನ್ನೂ ಓದಿ: ಅನ್ಯಭಾಗ್ಯ, ಅರೋಗ್ಯಭಾಗ್ಯ… ಆರೋಗ್ಯಕ್ಕೆ ಆಹಾರ ಹೇಗೆ ಬಳಸುವುದು? ಪತಂಜಲಿ ಆಯುರ್ವೇದ ನಿಯಮಗಳು ತಿಳಿದಿರಿ

ಇದನ್ನೂ ಓದಿ
ಆರೋಗ್ಯಕ್ಕೆ ಬೇಕು ಸರಿಯಾದ ಆಹಾರಕ್ರಮ: ಪತಂಜಲಿ
ಕೂದಲು ಉದರುವಿಕೆ ಸಮಸ್ಯೆಗೆ ಪತಂಜಲಿಯಿಂದ ಪರಿಹಾರ
ಪತಂಜಲಿ, ಕೋವಿಡ್ ಮತ್ತು ನ್ಯಾನೋತಂತ್ರಜ್ಞಾನ
ಘಮಘಮ ಮಲ್ಲಿಗೆಯಲ್ಲಿದೆ ಅಪೂರ್ವ ಔಷಧ ಗುಣ: ಪತಂಜಲಿ

ಆಯುರ್ವೇದವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವುದು ಮತ್ತು ಜಗತ್ತಿನ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವುದು ಪತಂಜಲಿಯ ಉದ್ದೇಶವಾಗಿದೆ ಎಂದು ಈ ವೇಳೆ ಸಿಇಒ ಆಚಾರ್ಯ ಬಾಲಕೃಷ್ಣ ಹೇಳಿದರು. ಪರಿಸರ ಅಂಶಗಳಿಂದ ಉಂಟಾಗುವ ಕಾಯಿಲೆಗಳಿಗೆ ಸನಾತನ ಜ್ಞಾನ, ನಿರ್ದಿಷ್ಟ ಸಂಶೋಧನೆ ಮತ್ತು ಪುರಾವೆ ಆಧಾರಿತ ಔಷಧದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವುದು ಸಾಧ್ಯ ಎಂಬುದನ್ನು ಈ ಸಂಶೋಧನೆ ಸಾಬೀತುಪಡಿಸುತ್ತದೆ.

ಪತಂಜಲಿ ಸಂಶೋಧನಾ ಸಂಸ್ಥೆಯ ಉಪಾಧ್ಯಕ್ಷ ಮತ್ತು ಮುಖ್ಯ ವಿಜ್ಞಾನಿ ಡಾ. ಅನುರಾಗ್ ವಾರಷ್ಣೋಯ್ ಈ ಸಂದರ್ಭದಲ್ಲಿ ಮಾತನಾಡಿ, ಸನಾತನ ಜ್ಞಾನ ಮತ್ತು ಆಧುನಿಕ ವಿಜ್ಞಾನದ ಈ ಅದ್ಭುತ ಸಂಗಮವು ಇಡೀ ಜಗತ್ತನ್ನು ಆರೋಗ್ಯಕರವಾಗಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಆಯುರ್ವೇದದ ಈ ಪ್ರಾಚೀನ ಜ್ಞಾನವನ್ನು ವೈಜ್ಞಾನಿಕ ಪುರಾವೆಗಳೊಂದಿಗೆ ಪ್ರಸ್ತುತಪಡಿಸುವುದು ನಮ್ಮ ಪ್ರಯತ್ನ ಎಂದಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ