ದೀರ್ಘ ಕಾಲದವರೆಗೆ ಕೆಲಸ ಮಾಡುವುದರಿಂದ ಹಾಗೂ ಹೊರಗಡೆ ಎಲ್ಲಾದರೂ ಹೋಗಿ ಬಂದಾಗ ಹೆಚ್ಚಾಗಿ ದಣಿವು, ದೇಹ ನೋವು ಕಾಣಿಸಿಕೊಳ್ಳುತ್ತದೆ. ನೈಸರ್ಗಿಕವಾಗಿ ದೊರೆಯುವಂತಹ ಕೆಲವೊಂದು ಮನೆಮದ್ದುಗಳು ಈ ದೇಹ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದಣಿವಿನ ಪರಿಣಾಮಕಾರಿ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಆಯುರ್ವೇದ ಮತ್ತು ಕರುಳಿನ ಆರೋಗ್ಯ ತರಬೇತುದಾರರಾದ ಡಾ. ಡಿಂಪಲ್ ಜಂಗ್ಲಾ ಅವರು ತಮ್ಮ ಇತ್ತೀಚಿನ ಇನ್ಟಾಗ್ರಾಮ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಅವರು ದೇಹದ ನೋವಿಗೆ ಕೆಲವು ಪರಿಣಾಮಕಾರಿ ಆಯುರ್ವೇದ ಪರಿಹಾರಗಳನ್ನು ಹಂಚಿಕೊಂಡಿದ್ದಾರೆ.
ಅರಶಿನ: ಅರಶಿನವು ಉರಿಯೂತ ಮತ್ತು ನೋವನ್ನು ನಿವಾರಿಸುವ ಗುಣವನ್ನು ಹೊಂದಿದ್ದು, ಅದು ದೇಹದ ನೋವಿನ ವಿರುದ್ಧ ಹೋರಾಡಲು ಮತ್ತು ಒಟ್ಟಾರೆ ಆರೋಗ್ಯ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ಲೋಟ ಬಿಸಿ ಹಾಲಿಗೆ ಚಮಚ ಅರಶಿನ ಸೇರಿಸಿ ಚೆನ್ನಾಗಿ ಬೆರೆಸಿ ಕುಡಿಯಿರಿ.
ಅಭ್ಯಂಗ ಮಸಾಜ್: ಅಭ್ಯಂಗ ಎಂದರೆ ಆಯುರ್ವೇದ ದೇಹದ ಮಸಾಜ್. ಇದು ಸ್ನಾಯುಗಳ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಿಂದ ಸ್ನಾಯುಗಳು ಸಡಿಲಗೊಂಡು ದೇಹದ ರಕ್ತ ಪರಿಚಲನೆಯು ಸುಧಾರಿಸುತ್ತದೆ. ಇದಕ್ಕಾಗಿ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಬಿಸಿ ಮಾಡಿ ಸಂಪೂರ್ಣ ದೇಹಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.
ಇದನ್ನೂ ಓದಿ: Ayurveda beauty: ನಿಮ್ಮ ತ್ವಚೆ, ಕೂದಲಿಗೆ ರಕ್ಷಣೆ ನೀಡುತ್ತದೆ ಈ ಆಯುರ್ವೇದ ಉತ್ಪನ್ನಗಳು
ಶುಂಠಿ: ಶುಂಠಿಯು ಫೈಟೊಕೆಮಿಸ್ಟಿ ಅಂಶವನ್ನು ಹೊಂದಿದೆ. ಮತ್ತು ಇದು ಉರಿಯೂತ ವಿರೋಧಿ ಗುಣಲಕ್ಷಣವನ್ನು ಹೊಂದಿದೆ. ಇವುಗಳು ದೇಹದ ನೋವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. 1 ಅಥವಾ 2 ಇಂಚು ಕತ್ತರಿಸಿದ ಶುಂಠಿಯನ್ನು ಒಂದು ಕಪ್ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ, ಆ ನೀರನ್ನು ಸೇವಿಸಿ.
ಸಾಸಿವೆ ಎಣ್ಣೆ: ಸಾಸಿವೆ ಎಣ್ಣೆಯಲ್ಲಿ ಅಲೈಲ್ ಐಸೋಥಿಯೋಸೈನೇಟ್ ಎಂಬ ಸಂಯುಕ್ತವಿದ್ದು, ಇದು ದೇಹದಲ್ಲಿ ಉರಿಯೂತದಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹಕ್ಕೆ ಸಾಸಿವೆ ಎಣ್ಣೆಯನ್ನು ಹಚ್ಚಿ ಮಸಾಜ್ ಚೆನ್ನಾಗಿ ಮಾಡಿ ಹಾಗೂ 30 ನಿಮಿಷಗಳ ಬಳಿಕ ಸ್ನಾನ ಮಾಡಿ. ಈ ಮೂಲಕ ದೇಹದ ನೋವನ್ನು ನಿವಾರಿಸಿಕೊಳ್ಳಬಹುದು.
Published On - 5:21 pm, Wed, 29 March 23