ಆಹಾರದ ವಿಷಯದಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ಅಭಿರುಚಿಯನ್ನು ಹೊಂದಿರುತ್ತಾರೆ, ನಾವು ತಿನ್ನುವ ಆಹಾರವು ಎಲ್ಲರಿಗೂ ಇಷ್ಟವಾಗಬೇಕೆಂದೇನಿಲ್ಲ, ಹಾಗೆಯೇ ಬೇರೆಯವರಿಗೆ ಇಷ್ಟವಾಗುವ ಆಹಾರಗಳು ನಮಗೂ ಇಷ್ಟವಾಗಬೇಕೆಂದೇನಿಲ್ಲ. ಆದರೆ ಉಪ್ಪಿನಕಾಯಿ ವಿಚಾರದಲ್ಲಿ ಆ ಮಾತು ಸುಳ್ಳೆನ್ನಬಹುದು. ಸಾಮಾನ್ಯವಾಗಿ ಉಪ್ಪಿನಕಾಯಿ ಇಷ್ಟಪಡದವರಿಲ್ಲ.
ಮೊಸರನ್ನು ಅನ್ನದೊಂದಿಗೆ ತಿನ್ನುವಾಗ ಅದರ ಜೊತೆ ಉಪ್ಪಿನಕಾಯಿ ಇದ್ದರಂತೂ ಇದರ ರುಚಿಯೋ ರುಚಿ, ಉಪ್ಪಿನಕಾಯಿಯಲ್ಲಿ ಹೆಚ್ಚಾದ ಉಪ್ಪು ಹಾಗೂ ಮಸಾಲೆ ಅಂಶಗಳು ಇರುವುದರಿಂದ ಉಪ್ಪಿನಕಾಯಿ ಸೇವನೆಯನ್ನು ವೈದ್ಯರು ಬೇಡವೆನ್ನುತ್ತಾರೆ. ಆದರೆ ನಿಯಮಿತ ಮಟ್ಟದಲ್ಲಿ ಮೊಸರಿನೊಂದಿಗೆ ಉಪ್ಪಿನಕಾಯಿಯನ್ನು ಸೇವಿಸಿದಾಗ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ.
ಮಧುಮೇಹವನ್ನು ಕಡಿಮೆ ಮಾಡಬಹುದು
ಸಾಮಾನ್ಯವಾಗಿ ಹುಳಿಯ ಆಹಾರ ಪದಾರ್ಥಗಳು ಮಧುಮೇಹ, ಸಂಧಿವಾತವನ್ನು ತಡೆಯಬಹುದು. ಮೊಸರು, ಉಪ್ಪಿನಕಾಯಿ, ಕಾಟೇಜ್ ಚೀಸ್ ಯಂತಹ ಕೆಲವು ಮೂಲಭೂತ ಹುಳಿ ಉತ್ಪತ್ತಿ ಮಾಡುವ ಅಂಶಗಳು ಹಲವಾರು ಗಂಭೀರ ರೋಗಗಳನ್ನು ತಡೆಗಟ್ಟಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಆಹಾರದಲ್ಲಿ ಸರಳವಾದ ತಿದ್ದುಪಡಿಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮಾರಕ ರೋಗಗಳನ್ನು ದೂರವಿರಿಸುತ್ತದೆ ಎಂದು ಹೇಳಲಾಗುತ್ತದೆ.
ರೋಗನಿರೋಧಕ ಕೋಶಗಳನ್ನು ಸಕ್ರಿಯಗೊಳಿಸುತ್ತದೆ
ಆರೋಗ್ಯ ಪ್ರಯೋಜನಗಳ ಜೊತೆಗೆ ಈ ರೀತಿಯ ಆಹಾರ ಪದಾರ್ಥಗಳು ನಾಲ್ಕು ವಿಧದ ರೋಗನಿರೋಧಕ ಕೋಶಗಳನ್ನು ಸಕ್ರಿಯಗೊಳಿಸುತ್ತದೆ. ರಕ್ತದ ಮಾದರಿಗಳಲ್ಲಿ ಅಳೆಯಲದ 19 ಉರಿಯೂತದ ಪ್ರೋಟೀನ್ ಗಳ ಮಟ್ಟವು ಕಡಿಮೆಯಾಗಿದೆ.
ಈ ಪ್ರೋಟೀನ್ ಗಳಲ್ಲಿ ಒಂದಾದ ಇಂಟರ್ಲ್ಲುಕಿನ್ 6, ಟೈಪ್ 2 ಡಯಾಬಿಟಿಸ್ ಮತ್ತು ದೀರ್ಘಕಾಲದ ಒತ್ತಡ ದಂತಹ ಸ್ಥಿತಿಗಳಿಗೆ ಸಂಬಂಧಿಸಿದೆ. ಇದಕ್ಕೆ ತದ್ವಿರುದ್ಧವಾಗಿ, ದ್ವಿದಳ ಧಾನ್ಯಗಳು, ಬೀಜಗಳು,ತರಕಾರಿಗಳು ಮತ್ತು ಹಣ್ಣುಗಳಿಂದ ಸಮೃದ್ಧವಾಗಿರುವ ಹೆಚ್ಚಿನ ಫೈಬರ್ ಆಹಾರಕ್ಕೆ ನಿಯೋಜಿಸಲಾದ ಭಾಗವಹಿಸುವವರಲ್ಲಿ ಈ 19 ತಿಂಗಳಲ್ಲಿ ಉರಿಯೂತದ ಪ್ರೋಟೀನ್ ಗಳಲ್ಲಿ ಯಾವುದು ಕಡಿಮೆಯಾಗಿರಲಿಲ್ಲ.
ಸರಾಸರಿ, ಕರುಳಿನ ಸೂಕ್ಷ್ಮಜೀವಿಗಳ ವೈವಿಧ್ಯತೆಯು ಸ್ಥಿರವಾಗಿ ಉಳಿಯಿತು. ಹೆಚ್ಚಿನ ಫೈಬರ್ ಹೆಚ್ಚು ಸಾರ್ವತ್ರಿಕವಾಗಿ ಪ್ರಯೋಜನಕಾರಿ ಪರಿಣಾಮವನ್ನು ಹೊಂದಿರುತ್ತದೆ ಮತ್ತು ಮೈಕ್ರೋ ಬಾಯೋಟ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಇದರಿಂದ ತಿಳಿದು ಬಂದಿದೆ. ಅಲ್ಪಾವಧಿಯ ಅವಧಿಯಲ್ಲಿ ಹೆಚ್ಚಿದ ಫೈಬರ್ ಸೇವನೆಯು ಮೈಕ್ರೋ ಬಯೋಟ ವೈವಿಧ್ಯತೆಯನ್ನು ಹೆಚ್ಚಿಸಲು ಸಾಕಾಗುವುದಿಲ್ಲ ಎಂದು ಸೂಚಿಸಲಾಗುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ
ಇದು ಹೊಟ್ಟೆಯಲ್ಲಿ ಉತ್ತಮವಾದ ಬ್ಯಾಕ್ಟೀರಿಯಗಳನ್ನು ಉಂಟುಮಾಡುವ ಮೂಲಕ ಉತ್ತಮ ಜೀರ್ಣಕ್ರಿಯೆಗೆ ಸಹಕಾರ ನೀಡುತ್ತದೆ. ಆದ್ದರಿಂದ ಪ್ರತಿನಿತ್ಯದಲ್ಲಿ ನೀವು ಮೊಸರನ್ನು ಸೇವಿಸುವ ಅಭ್ಯಾಸವನ್ನು ರೂಡಿಸಿಕೊಳ್ಳಿ. ದಿನದಲ್ಲಿ ಒಂದು ಬಾರಿಯಾದರೂ ಮೊಸರನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಹೊಂದಿರಿ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:00 am, Wed, 25 May 22