Winter Health: ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹಸಿರು ಬಟಾಣಿ ಸೇವಿಸಿ; ಪ್ರಯೋಜಗಳು ಇಲ್ಲಿವೆ

| Updated By: sandhya thejappa

Updated on: Mar 01, 2022 | 11:21 AM

ತೂಕ ಇಳಿಸುವವರಿಗೆ ಇದು ಒಳ್ಳೆಯ ಆಹಾರ ಪದಾರ್ಥ. ಚಳಿಗಾಲದಲ್ಲಿ ಇದರ ಬಳಕೆ ಹೆಚ್ಚಾಗಿರುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ.

Winter Health: ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹಸಿರು ಬಟಾಣಿ ಸೇವಿಸಿ; ಪ್ರಯೋಜಗಳು ಇಲ್ಲಿವೆ
ಹಸಿರು ಬಟಾಣಿ
Follow us on

ಸಾಮಾನ್ಯವಾಗಿ ಹಸಿರು ಬಟಾಣಿಯನ್ನು (Green Peas) ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ. ಇದು ನಾಲಿಗೆಗೆ ರುಚಿ ಕೊಡುವ ಜೊತೆಗೆ, ಹೆಚ್ಚು ಪೋಷಕಾಂಶಗಳನ್ನೂ ಹೊಂದಿದೆ. ಪ್ರೋಟೀನ್, ಫೈಬರ್, ಕಬ್ಬಿಣದಂತಹ ಅಂಶಗಳು ಇದರಲ್ಲಿ ಅಡಗಿದೆ. ಬಟಾಣಿಯನ್ನು ಸೇವಿಸಿದರೆ ತುಂಬಾ ಹೊತ್ತು ಹಸಿವಾಗಲ್ಲ. ಹೀಗಾಗಿ ತೂಕ ಇಳಿಸುವವರಿಗೆ ಇದು ಒಳ್ಳೆಯ ಆಹಾರ ಪದಾರ್ಥ. ಚಳಿಗಾಲದಲ್ಲಿ ಇದರ ಬಳಕೆ ಹೆಚ್ಚಾಗಿರುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಚಳಿಗಾಲದಲ್ಲಿ ಹಸಿರು ಬಟಾಣಿಯನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಆ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ, ಗಮನಿಸಿ.

* ದೇಹದ ತೂಕ ಇಳಿಕೆ:
ದೇಹದ ತೂಕ ಇಳಿಸುವವರು ಹಸಿರು ಬಟಾಣಿಯನ್ನು ಸೇವಿಸಬೇಕು. ಇದನ್ನು ಸೇವಿಸಿದರೆ ತುಂಬಾ ಹೊತ್ತು ಹಸಿವಾಗಲ್ಲ. ಪದೇ ಪದೆ ಹಸಿವಾಗದ ಕಾರಣ ಬೇರೆ ಆಹಾರ ತಿನ್ನುವ ಅನಿವಾರ್ಯವಿರಲ್ಲ. ಹೀಗಾಗಿ ಹಸಿರು ಬಟಾಣಿಯನ್ನು ಸೇವಿಸಿ.

* ಹೃದಯದ ಆರೋಗ್ಯ ಕಾಪಾಡುತ್ತದೆ:
ಹಸಿರು ಬಟಾಣಿ ರಕ್ತದೊತ್ತಡವನ್ನು ನಿಯಂತ್ರಿಸುವ ಗುಣ ಹೊಂದಿದೆ. ಬಟಾಣಿಯಲ್ಲಿರುವ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳು ಆಕ್ಸಿಡೀಕರಣ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಬಟಾಣಿಯಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

* ಜೀರ್ಣಕ್ರಿಯೆ:
ಬಟಾಣಿಯಲ್ಲಿ ಫೈಬರ್ ಇರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಜೀರ್ಣಕ್ರಿಯ ಸಮಸ್ಯೆ ಹೊಂದಿರುವವರು ಹಸಿರು ಬಟಾಣಿಯನ್ನು ಸೇವಿಸಿ. ಹೊಟ್ಟೆ ಕ್ಯಾನ್ಸರ್​ನಿಂದ ಬಳಲುತ್ತಿರುವವರು ಹಸಿರು ಬಟಾಣಿ ಸೇವಿಸಿ.

* ರೋಗನಿರೋಧಕ ಶಕ್ತಿ:
ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರಬೇಕು. ಹಸಿರು ಬಟಾಣಿಯಲ್ಲಿರುವ ವಿಟಮಿನ್ ಸಿ, ಇ, ಸತು, ಕ್ಯಾಟೆಚಿನ್ ಮತ್ತು ಎಪಿಕಾಟೆಚಿನ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಹಸಿರು ಬಟಾಣಿಯನ್ನು ಹೆಚ್ಚು ಸೇವಿಸಿ.

* ರಕ್ತದಲ್ಲಿನ ಸಕ್ಕರೆ ನಿಯಂತ್ರಿಸುತ್ತದೆ:
ವಯಸ್ಸು 30 ದಾಟುವಾಗಲೇ ಸಕ್ಕರೆ ಕಾಯಿಲೆ ಒಕ್ಕರಿಸಿ ಬಿಡುತ್ತದೆ. ಇಷ್ಟವಾಗುವ ಆಹಾರವನ್ನೆಲ್ಲ ತಿಂದು ದಷ್ಟಪುಷ್ಟರಾಗುವ ವಯಸ್ಸಲ್ಲಿ ಮಾತ್ರೆ ನುಂಗುವ ಅನಿವಾರ್ಯ. ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚು ಹಸಿರು ಬಟಾಯಿಯನ್ನು ಸೇವಿಸಿ. ಇದು ರಕ್ತದಲ್ಲಿರುವ ಸಕ್ಕರೆಯನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ

ಶ್ವೇತ ವರ್ಣದ ಸೀರೆಯಲ್ಲಿ ಮಿಂಚಿದ ಸುಹಾನಾ ಖಾನ್; ಶಾರುಖ್ ಪುತ್ರಿಯ ಬಾಲಿವುಡ್ ಪ್ರವೇಶ ಯಾವಾಗ?

ಚರ್ಚ್​​​ನಲ್ಲಿ ತನ್ನ ಮೂರು ಮಕ್ಕಳನ್ನು ಕೊಂದು, ತಾನೂ ಗುಂಡು ಹಾರಿಸಿಕೊಂಡ ವ್ಯಕ್ತಿ; ಒಟ್ಟು ಮೃತಪಟ್ಟವರು ಐದು ಮಂದಿ