ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದ ಚರ್ಚ್ನಲ್ಲಿ ಸೋಮವಾರ ಸಂಜೆ ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಅದಕ್ಕೂ ಮೊದಲು ಆತ ತನ್ನ ಮೂವರು ಮಕ್ಕಳು ಸೇರಿ, ಒಟ್ಟು ನಾಲ್ವರನ್ನು ಕೊಂದಿದ್ದಾನೆ. ಈ ಗುಂಡಿನ ದಾಳಿ ಪ್ರಕರಣದಲ್ಲಿ ಒಟ್ಟಾರೆ ಮೃತಪಟ್ಟವರ ಸಂಖ್ಯೆ 5. ಸ್ಯಾಕ್ರಮೆಂಟೊದ ಚರ್ಚ್ನ ಪವಿತ್ರ ಸ್ಥಳದಲ್ಲಿ ಸಂಜೆ 5ಗಂಟೆ ಹೊತ್ತಿಗೆ ಗುಂಡಿನ ದಾಳಿ ನಡೆದಿದೆ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಸಾರ್ಜೆಂಟ್ ರಾಡ್ನಿ ಗ್ರಾಸ್ಮನ್ ತಿಳಿಸಿದ್ದಾರೆ.
ಈ ವ್ಯಕ್ತಿ ತನ್ನ ಮಕ್ಕಳನ್ನೇ ಕೊಲ್ಲಲು ಕೌಟುಂಬಿಕ ಜಗಳವೇ ಕಾರಣ. ಈತ ತನ್ನ ಪತ್ನಿಯಿಂದ ದೂರವಾಗಿದ್ದನು. ಹಾಗೇ ಮಕ್ಕಳಿಂದಲೂ ದೂರವೇ ಇದ್ದನು. ಈತ ತನ್ನ ಮಕ್ಕಳನ್ನು ಭೇಟಿಯಾಗಲು ಚರ್ಗೆ ಬಂದಿದ್ದಾಗ ಶೂಟ್ ಮಾಡಿದ್ದಾನೆ. ಸದ್ಯ ಆರೋಪಿಯ ಗುರುತನ್ನು ಬಿಡುಗಡೆ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ಶಬ್ದ ಕೇಳಿದ ಚರ್ಚ್ ಉದ್ಯೋಗಿಯೊಬ್ಬ ಪೊಲೀಸರಿಗೆ ಕರೆ ಮಾಡಿದ್ದಾನೆ. ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ಕೌಟುಂಬಿಕ ಹಿಂಸೆ ಆಯಾಮದಲ್ಲಿಯೇ ತನಿಖೆ ಶುರು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Gold and Silver Rate: ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳ ಮಾರ್ಚ್ 1 ಚಿನ್ನ- ಬೆಳ್ಳಿ ಬೆಲೆ ಇಂತಿದೆ