ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಬೇಕಿದೆ: ವಿಶ್ವಸಂಸ್ಥೆಯ ತುರ್ತು ವಿಶೇಷ ಸಾಮಾನ್ಯ ಸಭೆ ಅಭಿಪ್ರಾಯ
ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರಷ್ಯಾ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಚೆರ್ನೋಬಿಲ್ ಸ್ಥಾವರದಲ್ಲಿ ವಿಕಿರಣ ಸೋರಿಕೆ ಹೆಚ್ಚಾಗುತ್ತಿದೆ ಎಂದು ವಿಶ್ವಸಂಸ್ಥೆ ವಿಶೇಷ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಆತಂಕ ವ್ಯಕ್ತಪಡಿಸಿದೆ.
ಉಕ್ರೇನ್ (Ukraine) ಮೇಲೆ ರಷ್ಯಾ (Russia) ಸೇನೆ ಯುದ್ಧ ಮುಂದುವರಿಸಿದೆ. ಈ ಮಧ್ಯೆ, ವಿಶ್ವಸಂಸ್ಥೆಯ ತುರ್ತು ವಿಶೇಷ ಸಾಮಾನ್ಯ ಸಭೆ (United Nations General Assembly) ನಡೆಸಲಾಗಿದೆ. ರಷ್ಯಾ ಆಕ್ರಮಣಕಾರಿ ನೀತಿ ಖಂಡಿಸಲು ಸಭೆ ಕರೆಯಲಾಗಿದೆ. ಶೀಘ್ರವೇ ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಬೇಕಿದೆ ಎಂದು ವಿಶ್ವಸಂಸ್ಥೆಯ ತುರ್ತು ವಿಶೇಷ ಸಾಮಾನ್ಯ ಸಭೆ ಅಭಿಪ್ರಾಯ ವ್ಯಕ್ತಪಡಿಸಿದೆ. ಉಕ್ರೇನ್ ರಾಯಭಾರಿ ರಷ್ಯಾ ಆಕ್ರಮಣಕಾರಿ ನೀತಿಯನ್ನು ಖಂಡಿಸಿದ್ದಾರೆ. ಮಕ್ಕಳು, ಶಾಲೆಗಳ ಮೇಲೆಯೂ ರಷ್ಯಾ ದಾಳಿ ನಡೆಸುತ್ತಿದೆ. ಕೂಡಲೇ ಸೇನಾಪಡೆಯನ್ನು ರಷ್ಯಾ ವಾಪಸ್ ಪಡೆಯಲಿ ಎಂದು ಹೇಳಿದ್ದಾರೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರಷ್ಯಾ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಚೆರ್ನೋಬಿಲ್ ಸ್ಥಾವರದಲ್ಲಿ ವಿಕಿರಣ ಸೋರಿಕೆ ಹೆಚ್ಚಾಗುತ್ತಿದೆ ಎಂದು ವಿಶ್ವಸಂಸ್ಥೆ ವಿಶೇಷ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಆತಂಕ ವ್ಯಕ್ತಪಡಿಸಿದೆ.
ಆದರೆ ಉಕ್ರೇನ್ ಮೇಲೆ ದಾಳಿಯನ್ನು ರಷ್ಯಾ ಸಮರ್ಥಿಸಿಕೊಂಡಿದೆ. ರಷ್ಯಾ ವಿರುದ್ಧ ಉಕ್ರೇನ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ರಷ್ಯಾಗೆ ಉಕ್ರೇನ್‌ನನ್ನು ವಶಪಡಿಸಿಕೊಳ್ಳುವ ಉದ್ದೇಶವಿಲ್ಲ. ಡಾನ್ಬಾಸ್ ನಿವಾಸಿಗಳನ್ನು ರಕ್ಷಿಸಲು ಉಕ್ರೇನ್ ಮೇಲೆ ದಾಳಿ ಮಾಡಲಾಗುತ್ತಿದೆ. ಡಾನ್ಬಾಸ್ ನಿವಾಸಿಗಳ ಬಗ್ಗೆ ಉಕ್ರೇನ್‌ಗೆ ಸಹಾನುಭೂತಿ ಇಲ್ಲ ಎಂದು ರಷ್ಯಾ ಹೇಳಿದೆ. ಉಕ್ರೇನ್ ಮೇಲೆ ದಾಳಿ ಬಗ್ಗೆ ರಷ್ಯಾ ರಾಯಭಾರಿ ತಿಳಿಸಿದ್ದಾರೆ. ನಾಚಿಕೆ ಇಲ್ಲದೇ ಕೆಲ ದೇಶಗಳು ಶಸ್ತ್ರಾಸ್ತ್ರ ಪೂರೈಸುತ್ತಿವೆ ಎಂದು ಪಾಶ್ಚಿಮಾತ್ಯ ದೇಶಗಳ ವಿರುದ್ಧ ರಷ್ಯಾ ರಾಯಭಾರಿ ಕಿಡಿಕಾರಿದ್ದಾರೆ.
Russian troops are suffering, already lost over 1000s of manpower. Stop this offensive against Ukraine. We demand Russia to unconditionally withdraw its forces and demand full compliance with international humanitarian law: Ukraine Rep at UNGA emergency meeting on #Ukraine pic.twitter.com/4KJ22iaS1u
— ANI (@ANI) February 28, 2022
ಯುರೋಪಿಯನ್ ಒಕ್ಕೂಟದಲ್ಲಿ ಸದಸ್ಯತ್ವಕ್ಕಾಗಿ ಉಕ್ರೇನ್ ಅರ್ಜಿ ಸಲ್ಲಿಸಿದೆ. ಉಕ್ರೇನ್ ಸದಸ್ಯತ್ವಕ್ಕಾಗಿ ಅರ್ಜಿಗೆ ಝೆಲೆನ್ಸ್ಕಿ ಸಹಿ ಹಾಕಿದ್ದಾರೆ. ಈ ಮಧ್ಯೆ, ಇಂಗ್ಲೆಂಡ್ ರಷ್ಯಾಗೆ ಮತ್ತಷ್ಟು ಆರ್ಥಿಕ ನಿರ್ಬಂಧ ವಿಧಿಸಿದೆ. ಯುಕೆ ರಷ್ಯನ್ ಬ್ಯಾಂಕ್ಗಳ ಆಸ್ತಿ ಮುಟ್ಟುಗೋಲು ಹಾಕಿದೆ. ಉಕ್ರೇನ್‌ನಲ್ಲಿ ಜೀವ ಉಳಿಸಿಕೊಳ್ಳಲು ಜನರು ಪರದಾಟ ಪಡುತ್ತಿದ್ದಾರೆ. ಕೀವ್ನ ರೈಲ್ವೆ ನಿಲ್ದಾಣದಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ರಾಜಧಾನಿ ಕೀವ್ ತೊರೆಯಲು ಜನ ಮುಂದಾಗಿದ್ದಾರೆ. ಕೀವ್ ನಗರದ ಹೊರವಲಯದಲ್ಲಿ ಭಾರಿ ಸ್ಫೋಟ ಆಗಿರುವ ಬಗ್ಗೆಯೂ ಮಾಹಿತಿ ಲಭಿಸಿದೆ.
ರಷ್ಯಾ- ಉಕ್ರೇನ್ ನಿಯೋಗಗಳ ಮಧ್ಯೆ ಶಾಂತಿ ಸಭೆ ಅಂತ್ಯವಾಗಿದೆ. ಬೆಲಾರಸ್ನಲ್ಲಿ ಇಂದು ಒಂದೇ ದಿನ 3 ಸಭೆ ನಡೆಸಲಾಗಿದೆ. ಇಂದು ನಡೆದ ಸಭೆ ಒಂದು ಉತ್ತಮ ಬೆಳೆವಣಿಗೆಯಾಗಲಿದೆ. ಮುಂದಿನ 2 ದಿನಗಳಲ್ಲಿ ಮತ್ತೊಂದು ಸುತ್ತಿನ ಸಭೆಗೆ ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ಲಭಿಸಿದೆ. ಈ ನಡುವೆ, ಉಕ್ರೇನ್ ದೇಶಕ್ಕೆ ಫಿನ್ಲ್ಯಾಂಡ್ ನೆರವಿನ ಹಸ್ತ ಚಾಚಿದೆ. ಶಸ್ತ್ರಾಸ್ತ್ರ ಪೂರೈಸುವುದಾಗಿ ಫಿನ್ಲ್ಯಾಂಡ್ ಘೋಷಣೆ ಮಾಡಿದೆ.
ಇದನ್ನೂ ಓದಿ: Russia Ukraine War: ಊಟ, ನೀರು ಇಲ್ಲದೇ ಉಕ್ರೇನ್‌ನಲ್ಲಿ ಮುಂದುವರೆದ ರಾಜ್ಯದ ವಿದ್ಯಾರ್ಥಿಗಳ ಪರದಾಟ
Published On - 10:50 pm, Mon, 28 February 22