AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಆಲಿಯಾ ಭಟ್ ಮಾಡಿದ ಕಪೋತಾಸನದ ಭಂಗಿ ಹೇಗಿದೆ ಗೊತ್ತಾ? ಅದರ ಆರೋಗ್ಯಕಾರಿ ಪ್ರಯೋಜನಗಳು ಹೀಗಿವೆ ನೋಡಿ

ಈ ಪೋಸ್ಟ್ ಅಲ್ಲಿರುವ ಭಂಗಿ ಕಪೋತಾಸನ ಎಂದು ಕರೆಯಲಾಗಿದ್ದರೂ, ಆಲಿಯಾ ಅದನ್ನು ಸರಾಗವಾಗಿ ಪ್ರದರ್ಶಿಸುವುದನ್ನು ನೋಡಿದ ಅಂಶುಕಾ ಅದನ್ನು 'ಆಲಿಯಾ ಆಸನಾ' ಎಂದು ಮರುನಾಮಕರಣ ಮಾಡಿದ್ದಾರೆ.

ನಟಿ ಆಲಿಯಾ ಭಟ್ ಮಾಡಿದ ಕಪೋತಾಸನದ ಭಂಗಿ ಹೇಗಿದೆ ಗೊತ್ತಾ? ಅದರ ಆರೋಗ್ಯಕಾರಿ ಪ್ರಯೋಜನಗಳು ಹೀಗಿವೆ ನೋಡಿ
TV9 Web
| Updated By: preethi shettigar|

Updated on:Mar 01, 2022 | 8:15 PM

Share

ನಟಿ ಆಲಿಯಾ ಭಟ್(Alia Bhatt) ತನ್ನ ಅಭಿಮಾನಿಗಳನ್ನು ಮೆಚ್ಚಿಸುವ ಮತ್ತು ಅವರ ಹೃದಯದಲ್ಲಿ ಸದಾ ತನಗೊಂದು ಸ್ಥಾನ ಕಾಯ್ದಿರಿಸಲು ಹೊಸತನವನ್ನು ರೂಢಿಸಿಕೊಳ್ಳುತ್ತಿರುತ್ತಾರೆ. ಇದು ಆಲಿಯಾಳ ಅದ್ಭುತ ನಟನಾ ಕೌಶಲ್ಯವಾಗಿರಲಿ ಅಥವಾ ಫಿಟ್‌ನೆಸ್‌ ಆಗಿರಲಿ ಎರಡಕ್ಕೂ ಅನ್ವಯವಾಗುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತೆ ಆಲಿಯಾಳ ಹೊಸ ಸಿನಿಮಾ ಗಂಗೂಬಾಯಿ ಕಥಿಯಾವಾಡಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಸದ್ಯ ಸಿನಿಮಾ ಹೊರತು ಪಡಿಸಿ ಆಲಿಯಾ ಸುದ್ದಿಯಲ್ಲಿದ್ದು, ಅವಳ ಫಿಟ್​ನೆಸ್​ ತರಬೇತುದಾರರಾದ ಅಂಶುಕಾ ಪರ್ವಾನಿ ಅವರು ಟ್ರಿಕಿ ಯೋಗ ಭಂಗಿಯನ್ನು(Yoga) ಪ್ರದರ್ಶಿಸುವ ನಟಿಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ(Social media) ಇದು ವೈರಲ್​ ಆಗಿದೆ.

ಅನನ್ಯಾ ಪಾಂಡೆ, ಕರೀನಾ ಕಪೂರ್ ಖಾನ್ ಮತ್ತು ದೀಪಿಕಾ ಪಡುಕೋಣೆಯಂತಹ ತಾರೆಯರಿಗೆ ತರಬೇತಿ ನೀಡಿರುವ ಅಂಶುಕಾ ಪರ್ವಾನಿ, ಆಲಿಯಾ ಭಟ್​ಗೂ ತರಬೇತಿ ನೀಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆಲಿಯಾ ಭಟ್​​ ಕಪೋತಾಸನದ ಭಂಗಿಯನ್ನು ಪ್ರದರ್ಶಿಸುತ್ತಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಬೆನ್ನು ಬಾಗುವ ಭಂಗಿ ಇದಾಗಿದ್ದು, ನೋಡಿಷ್ಟು ಸುಲಭವಲ್ಲ ಈ ಯೋಗಸಾನದ ಭಂಗಿ. ಹೀಗಾಗಿ ಅಭಿಮಾನಿಗಳು ಆಲಿಯಾಳ ಪೋಸ್ಟ್​ ಮೆಚ್ಚಿಕೊಂಡಿದ್ದಾರೆ.

ಈ ಪೋಸ್ಟ್ ಅಲ್ಲಿರುವ ಭಂಗಿ ಕಪೋತಾಸನ ಎಂದು ಕರೆಯಲಾಗಿದ್ದರೂ, ಆಲಿಯಾ ಅದನ್ನು ಸರಾಗವಾಗಿ ಪ್ರದರ್ಶಿಸುವುದನ್ನು ನೋಡಿದ ಅಂಶುಕಾ ಅದನ್ನು ‘ಆಲಿಯಾ ಆಸನಾ’ ಎಂದು ಮರುನಾಮಕರಣ ಮಾಡಿದ್ದಾರೆ. ಆಲಿಯಾ ಆಸನಾನದ ಮೂಲಕ ಆಲಿಯಾ ಭಟ್​ ನನ್ನ ಹೃದಯಕ್ಕೆ ಸಂತೋಷವನ್ನು ನೀಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಅಂಶುಕಾ ಪೋಸ್ಟ್​ ಹಂಚಿಕೊಂಡಿದ್ದಾರೆ.

ಗಂಗೂಬಾಯಿ ಕಥಿಯಾವಾಡಿ ನಟಿ ಆಲಿಯಾ ಕಪೋತಾಸನ ಮಾಡುತ್ತಿರುವುದು ಇದೇ ಮೊದಲಲ್ಲ. ಆದರೂ, ಪರಿಪೂರ್ಣತೆಯ ಮಾಪಕವಾದ ಬೆರಳ ತುದಿಯಿಂದ ಕಾಲ್ಬೆರಳುಗಳನ್ನು ಸ್ಪರ್ಶಿಸುವಲ್ಲಿ ಅವಳು ಮೊದಲ ಬಾರಿಗೆ ಯಶಸ್ವಿಯಾಗಿದ್ದಳು. ಮೊದಲು ಆಲಿಯಾ ಈ ಆಸನ ಮಾಡಲು ಹೆಣಗಾಡಿದರೂ  ನಂತರ ಪರಿಪೂರ್ಣತೆ ಕಂಡಿದ್ದಾಳೆ ಎಂದು ಅಂಶುಕಾ ಹಂಚಿಕೊಂಡಿದ್ದಾಳೆ.

ಕಪೋತಾಸನದ ಆರೋಗ್ಯ ಪ್ರಯೋಜನಗಳು ಕಪೋತಾಸನವು ಬೆನ್ನು-ಬಾಗುವ ಆಸನವಾಗಿದ್ದು, ಅದು ದೇಹದ ಮುಂಭಾಗವಾದ ಹೊಟ್ಟೆ, ಎದೆ, ಗಂಟಲು, ಮೊಣಕಾಲುಗಳು, ತೊಡೆ ಮತ್ತು ತೊಡೆಸಂದುಗಳನ್ನು ವಿಸ್ತರಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕಪೋತಾಸನದ ಭಂಗಿಯು ಒಂದು ಸಮಯದಲ್ಲಿ ಹಲವಾರು ಸ್ನಾಯು ಗುಂಪುಗಳನ್ನು ಕೆಲಸ ಮಾಡುವಂತೆ ಮಾಡುತ್ತದೆ. ಇದು ಬೆನ್ನಿನ ಸ್ನಾಯುಗಳ ಮೇಲೆ ಕೆಲಸ ಮಾಡುತ್ತದೆ ಮತ್ತು ಕುತ್ತಿಗೆ ಹಾಗೂ ಹೊಟ್ಟೆಯನ್ನು ಸದೃಢವಾಗಿಸುತ್ತದೆ.

ಈ ಭಂಗಿಯ ಇತರ ಕೆಲವು ಪ್ರಯೋಜನಗಳು

  • ತೊಡೆಸಂದುಗಳನ್ನು ವಿಸ್ತರಿಸುತ್ತದೆ
  • ತೊಡೆಯ ಮತ್ತು ಸೊಂಟದ ಸ್ನಾಯುಗಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ
  • ಆಂತರಿಕ ಅಂಗಗಳನ್ನು ಉತ್ತೇಜಿಸುತ್ತದೆ
  • ಸಿಯಾಟಿಕಾ ನೋವಿಗೆ ಚಿಕಿತ್ಸೆ ನೀಡುತ್ತದೆ
  • ಮೂತ್ರದ ಅಸ್ವಸ್ಥತೆಗಳಿಗೆ ಸಹಾಯ ಮಾಡುತ್ತದೆ

ಇದನ್ನೂ ಓದಿ: ‘ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ಸುಟ್ಟು ಬೂದಿಯಾಗಲಿದೆ’; ಆಲಿಯಾ ಭಟ್​ ಸಿನಿಮಾ ಬಗ್ಗೆ ಕಂಗನಾ ಟೀಕೆ

ಗೆದ್ದು ಬೀಗಿದ ಆಲಿಯಾ ನಟನೆಯ ‘ಗಂಗೂಬಾಯಿ..’; ಬಾಕ್ಸ್​ ಆಫೀಸ್​ ಕಲೆಕ್ಷನ್​ನಲ್ಲಿ ಭಾರೀ ಏರಿಕೆ

Published On - 8:09 pm, Tue, 1 March 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!