Onion Hair Oil: ಈರುಳ್ಳಿಯಿಂದ ಕೂದಲಿಗೆ ಇಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಯೋಚಿಸಿದ್ದೀರಾ?

| Updated By: Skanda

Updated on: Aug 28, 2021 | 8:17 AM

ಈರುಳ್ಳಿ ಎಣ್ಣೆ ಕೂದಲಿನ ಎಳೆಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳಪಾಗಿ ಕಾಣುವಂತೆ ಮಾಡುತ್ತದೆ. ಈ ಎಣ್ಣೆಯು ಕೂದಲಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ.

Onion Hair Oil: ಈರುಳ್ಳಿಯಿಂದ ಕೂದಲಿಗೆ ಇಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಯೋಚಿಸಿದ್ದೀರಾ?
ಈರುಳ್ಳಿ ಎಣ್ಣೆ
Follow us on

ತಲೆ ಕೂದಲು ಉದುರುವಿಕೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬದಲಾದ ವಾತಾವರಣ, ಆಹಾರ ಪದ್ಧತಿ, ನಿದ್ರೆಯ ಕೊರತೆ, ಬಿಡುವಿಲ್ಲದ ಜೀವನಶೈಲಿ ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ ಕೂದಲನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇದಕ್ಕೆ ಪರಿಹಾರವೆಂದು ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ಉತ್ಪನ್ನಗಳು ಸಿಗುತ್ತವೆಯಾದರೂ ಹೆಚ್ಚಿನವು ರಾಸಾಯನಿಕಯುಕ್ತ ಆಗಿರುವುದರಿಂದ ಅವುಗಳಿಂದ ಅಡ್ಡಪರಿಣಾಮವೇ ಹೆಚ್ಚು. ಹೀಗಾಗಿ ಹೆಚ್ಚಿನವರು ಕೂದಲು ಆರೈಕೆಗೆ ಆಯುರ್ವೇದ ಪದ್ಧತಿಯನ್ನೇ ಇಷ್ಟಪಡುತ್ತಾರೆ. ಇನ್ನು ಬಗೆಬಗೆಯ ಗಿಡಮೂಲಿಕೆಗಳಿಂದ ಕೂದಲಿಗೆ ಔಷಧಿ ಮಾಡಬಹುದಾಗಿದ್ದು, ಅಪರೂಪದ ಗಿಡಮೂಲಿಕೆಗಳನ್ನು ಹೊರತುಪಡಿಸಿ ನಿತ್ಯ ನಾವು ಬಳಸುವ ವಸ್ತುಗಳಿಂದಲೂ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವುದು ಗಮನಾರ್ಹ. ಇಂದು ಈ ಲೇಖನದಲ್ಲಿ ಕೂದಲಿನ ಆರೈಕೆಗೆ ಈರುಳ್ಳಿಯಿಂದ ತಯಾರಿಸಿದ ಎಣ್ಣೆ ಹೇಗೆ ಸಹಕಾರಿಯಾಗುತ್ತದೆ ಎಂದು ನೋಡೋಣ.

ಈರುಳ್ಳಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನಮ್ಮ ಬಿಡುವಿಲ್ಲದ ಜೀವನಶೈಲಿ, ಅದರ ಪರಿಣಾಮವಾಗಿ ಬದಲಾದ ಆಹಾರ ಪದ್ಧತಿ, ಮಾಲಿನ್ಯ, ಒತ್ತಡ ಇತ್ಯಾದಿಗಳಿಂದ ಉಂಟಾಗುವ ಕೂದಲಿನ ಸಮಸ್ಯೆಗೆ ಈರುಳ್ಳಿ ಎಣ್ಣೆ ಹೇಗೆ ಪರಿಹಾರ ಎಂದು ಅಚ್ಚರಿಯಾಗಬಹುದು. ಆದರೆ, ಇದು ರೂಢಿಯಲ್ಲಿರುವುದಂತೂ ನಿಜ. ಜೀವನ ಶೈಲಿಯಲ್ಲಿ ಹಠಾತ್ ಬದಲಾವಣೆ ಮಾಡುವುದು ಕಷ್ಟವಾದ ಕಾರಣ ಇಂತಹ ಪರ್ಯಾಯ ಮಾರ್ಗಗಳನ್ನು ಜನ ಕಂಡುಕೊಂಡಿದ್ದು, ಕೂದಲ ರಕ್ಷಣೆಯ ಹಿತದೃಷ್ಟಿಯಿಂದ ಈರುಳ್ಳಿ ಎಣ್ಣೆಯ ಬಳಕೆ ಅತ್ಯಂತ ಉಪಯುಕ್ತ ಎಂದು ಅನೇಕರು ಅಭಿಪ್ರಾಯಪಡುತ್ತಾರೆ.

ಈರುಳ್ಳಿ ಎಣ್ಣೆ ಕೂದಲಿನ ಎಳೆಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳಪಾಗಿ ಕಾಣುವಂತೆ ಮಾಡುತ್ತದೆ. ಈ ಎಣ್ಣೆಯು ಕೂದಲಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ. ಜತೆಗೆ, ಈರುಳ್ಳಿ ಎಣ್ಣೆ ಕೂದಲು ತೆಳುವಾಗುವುದನ್ನು ನಿಯಂತ್ರಿಸುವುದಲ್ಲದೆ ಕೂದಲಿನ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಪ್ರಮಾಣದ ಈರುಳ್ಳಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಬೇಕಾದಷ್ಟು ಮಾತ್ರ ತಲೆಗೆ ಹಾಕಿಕೊಂಡು ಅಂಗೈಯಲ್ಲಿ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಈ ವಿಧಾನವು ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ತಜ್ಞರು ಹೇಳುವ ಪ್ರಕಾರ ಈರುಳ್ಳಿಯಲ್ಲಿರುವ ಉತ್ತಮ ಅಂಶಗಳು ಹೀಗಿವೆ:
1. ಈರುಳ್ಳಿ ಹೆಚ್ಚು ಪೌಷ್ಟಿಕವಾಗಿದೆ. ಇದು ಕೂದಲಿನ ಉದ್ದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
2. ಈರುಳ್ಳಿ ಎಣ್ಣೆಯು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಮಾಲಿನ್ಯದಿಂದಾಗಿ ದುರ್ಬಲಗೊಳ್ಳುವ ಕೂದಲಿಗೆ ಶಕ್ತಿ ನೀಡಿ ಪೋಷಿಸುತ್ತದೆ
3. ಈರುಳ್ಳಿಯ ಸಾವಯವ ಗುಣ ಕೂದಲ ಬುಡವನ್ನು ಪೋಷಿಸುತ್ತದೆ ಇದು ಕೂದಲನ್ನು ಗಟ್ಟಿಗೊಳಿಸುತ್ತದೆ
4. ಈರುಳ್ಳಿ ಎಣ್ಣೆಯನ್ನು ನೆತ್ತಿಗೆ ಹಾಕಿ ನಿಧಾನವಾಗಿ ಮಸಾಜ್ ಮಾಡಿದಾಗ ರಕ್ತ ಸಂಚಾರ ಉತ್ತಮವಾಗುತ್ತದೆ. ಇದು ನೆತ್ತಿಯನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಇದು ಕೂದಲು ತೆಳುವಾಗುವುದನ್ನು ಹಾಗೂ ಟಿಸಿಲು ಒಡೆಯುವುದನ್ನು ಕಡಿಮೆ ಮಾಡುತ್ತದೆ
5. ಈರುಳ್ಳಿ ರಸವು ತಲೆಹೊಟ್ಟು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೂದಲನ್ನು ಹೊಳೆಯುವಂತೆ ಮಾಡುತ್ತದೆ.
6. ಈರುಳ್ಳಿ ಎಣ್ಣೆಯಲ್ಲಿರುವ ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ನೆತ್ತಿಗೆ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ
7. ಈರುಳ್ಳಿಯು ನೈಸರ್ಗಿಕವಾಗಿ ಶಕ್ತಿಯುತವಾದ ರೋಗ ನಿರೋಧಕಗಳಿಂದ ಸಮೃದ್ಧವಾಗಿದೆ, ಅದಕ್ಕಾಗಿಯೇ ಇದು ಕೂದಲು ಬಲುಬೇಗನೇ ಬಿಳಿಯಾಗುವುದನ್ನು ತಡೆಗಟ್ಟಲು ಸಹಕರಿಸುತ್ತದೆ
8. ಈರುಳ್ಳಿ ಎಣ್ಣೆಯು ಕೂದಲನ್ನು ಆರೋಗ್ಯಕರವಾಗಿಸುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತದೆ. ನಿಯಮಿತ ಬಳಕೆಯಿಂದ, ಈ ಹೊಳಪು ಶಾಶ್ವತವಾಗಿರಬಹುದು
9. ಈರುಳ್ಳಿಯಲ್ಲಿ ಸಲ್ಫರ್ ಹೇರಳವಾಗಿದ್ದು ಇದು ಸೋಂಕು ಹಾಗೂ ಪರಾವಲಂಬಿ ಕೀಟಗಳ ವಿರುದ್ಧ ಹೋರಾಡುತ್ತದೆ

ಇದನ್ನೂ ಓದಿ:
Health Tips: ತಲೆಕೂದಲು ಬಿಳಿಯಾಗಿದೆ ಎಂದು ಚಿಂತಿಸುವ ಬದಲು ಈ 5 ಕ್ರಮಗಳನ್ನು ಅನುಸರಿಸಿ 

ತಲೆ ಬೋಳಾಗಬಹುದು ಎಂಬ ಚಿಂತೆಯೇ? ಯೌವನದಲ್ಲಿ ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ರಾಮಬಾಣ

(Benefits of onion oil experts recommend onion oil to control hair fall thinning and dandruff issues)