ಆಭರಣಗಳನ್ನು ಧರಿಸಲು ವೈಜ್ಞಾನಿಕ ಕಾರಣಗಳಿವೆ; ಏನು ಅಂತ ನೀವೂ ತಿಳಿದುಕೊಳ್ಳಿ
ನಾಲ್ಕನೆ ಬೆರಳಿನ ನರವೊಂದು ಹೃದಯಕ್ಕೆ ಸಂಪರ್ಕವಿರುವ ಕಾರಣ ಆ ಬೆರಳಿಗೆ ಉಂಗುರ ಧರಿಸಲಾಗುತ್ತದೆ. ಇದೇ ಕಾರಣಕ್ಕೆ ನಾಲ್ಕನೆ ಬೆರಳನ್ನು ಉಂಗುರದ ಬೆರಳು ಅಂತ ಕರೆಯಲಾಗುತ್ತದೆ.
Updated on: Aug 27, 2021 | 8:57 AM

ಕಾಲ್ಗೆಜ್ಜೆ

ರಾಜರ ಆಳ್ವಿಕೆಯ ಕಾಲದಲ್ಲಿ ರಾಜ ಮನೆತನದ ಮಹಿಳೆಯರು ಬೈತಲೆ ಬೊಟ್ಟನ್ನು ಪ್ರತಿದಿನ ಬಳಸುತ್ತಿದ್ದರು. ಬೈತಲೆ ಬೊಟ್ಟು ಧರಿಸಲು ವೈಜ್ಞಾನಿಕ ಕಾರಣವೆಂದರೆ ಶರೀರದ ಬಿಸಿಯನ್ನು ನಿಯಂತ್ರಿಸುತ್ತದೆ.

ಕಾಲಿನ ಬೆರಳಿನ ನರ ಹೃದಯದ ಮೂಲಕ ಗರ್ಭಕೋಶವನ್ನು ತಲುಪುತ್ತದೆ. ಇದು ಸಂತಾನ ಭಾಗ್ಯ ಪಡೆಯಲು ಸಹಕರಿಸುತ್ತದೆ ಎಂದು ಹೇಳಲಾಗುತ್ತದೆ.

ಬಳೆಗಳನ್ನು ಕೈಗಳಿಗೆ ಹಾಕಿಕೊಂಡರೆ ಕೈಗಳು ಬಲವಾಗುತ್ತದೆ. ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ದೇಹದ ಉಷ್ಣಾಂಶವನ್ನು ನಿಯಂತ್ರಿಸುತ್ತದೆ. ಕೆಲವರು ಬಳೆಗಳನ್ನು ತುಂಬಾ ಬಿಗಿಯಾಗಿ, ಇನ್ನು ಕೆಲವರು ಸಡಿಲವಾಗಿ ಹಾಕಿಕೊಳ್ಳುತ್ತಾರೆ. ಆದರೆ ಹೀಗೆ ಧರಿಸುವುದು ಒಳ್ಳೆಯದಲ್ಲ. ರಕ್ತನಾಳ ಮತ್ತು ನರಗಳಿಗೆ ಮೃದು ಸ್ಪರ್ಶ ನೀಡುವಂತೆ ಬಳೆಗಳನ್ನ ಹಾಕಿಕೊಳ್ಳಬೇಕು.

ಮೂಗಿಗೆ ಒಂದು ಚಿಕ್ಕ ತೂತು ಮಾಡಿದರೆ ಋತುಚಕ್ರದ ಸಮಯದಲ್ಲಿ ಹೆಣ್ಣಿಗೆ ಹೊಟ್ಟೆ ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಮೂಗಿನ ನರ ನೇರವಾಗಿ ಗರ್ಭಕೋಶಕ್ಕೆ ಸಂಪರ್ಕವಿದೆ. ಇದರಿಂದ ಸಂತಾನ ಭಾಗ್ಯ ಸಿಗುತ್ತದೆ ಎಂದು ನಂಬಲಾಗಿದೆ.

ನಾಲ್ಕನೆ ಬೆರಳಿನ ನರವೊಂದು ಹೃದಯಕ್ಕೆ ಸಂಪರ್ಕವಿರುವ ಕಾರಣ ಆ ಬೆರಳಿಗೆ ಉಂಗುರ ಧರಿಸಲಾಗುತ್ತದೆ. ಇದೇ ಕಾರಣಕ್ಕೆ ನಾಲ್ಕನೆ ಬೆರಳನ್ನು ಉಂಗುರದ ಬೆರಳು ಅಂತ ಕರೆಯಲಾಗುತ್ತದೆ. ಮಧ್ಯದ ಬೆರಳಿನ ನರ ಮೆದುಳಿನ ನಡುವೆ ಹಾದುಹೋಗಿದೆ. ಉಂಗುರವನ್ನು ಮಧ್ಯದ ಬೆರಳಿಗೆ ಧರಿಸಿದಾಗ ತೀರ್ಮಾನಗಳನ್ನು ತಕ್ಷಣದ ತೆಗೆದುಕೊಳ್ಳಲು ಮೆದುಳಿಗೆ ಕಷ್ಟವಾಗುತ್ತದೆ. ಹೀಗಾಗಿ ವೈಜ್ಞಾನಿಕ ಕಾರಣ ತಿಳಿದವರು ಮಧ್ಯದ ಬೆರಳಿಗೆ ಉಂಗುರವನ್ನು ಹಾಕಲ್ಲ.

ನಾನಾ ವಿನ್ಯಾಸದ ಓಲೆಗಳನ್ನು ಖರೀದಿಸಿ, ಬಳಸುತ್ತಾರೆ. ಆದರೆ ಕಿವಿ ಓಲೆಗಳನ್ನು ಹಾಕಿಕೊಳ್ಳುವವರಿಗೆ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳು ಗೊತ್ತಿಲ್ಲ. ಕಿವಿಯಲ್ಲಿರುವ ನರ ಗರ್ಭಕೋಶಕ್ಕೆ ಸಂಪರ್ಕವಿದೆ. ಕಿವಿ ಓಲೆಗಳನ್ನು ಧರಿಸಿದಾಗ ಸಂತಾನ ಭಾಗ್ಯ ಹೆಣ್ಣಿಗೆ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ತಾಳಿಗೆ ಅರಿಶಿಣ, ಕುಂಕುಮ ಹಚ್ಚಿ ಕಣ್ಣಿಗೆ ಮುಟ್ಟಿಸಿಕೊಂಡಾಗ ಗಂಡನ ಆಯಸ್ಸು ಜಾಸ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇದರ ನಡುವೆ ತಾಳಿಯನ್ನು ಧರಿಸಲು ವೈಜ್ಞಾನಿಕ ಕಾರಣವಿದೆ. ಮಂಗಳಸೂತ್ರ ಬಳಸುವುದರಿಂದ ದೇಹದ ರಕ್ತ ಸಂಚಾರ ಸರಿಯಾಗುತ್ತದೆ.



















