
ಹಿಂದೂ ಧರ್ಮದಲ್ಲಿ ನದಿ (River) ಸ್ನಾನಕ್ಕೆ ಅದರದ್ದೇ ಆದಂತಹ ಮಹತ್ವವಿದೆ. ಏಕೆಂದರೆ ಭಾರತೀಯರು ನದಿಗಳನ್ನು ದೇವರಂತೆ ಪೂಜೆ ಮಾಡುತ್ತೇವೆ. ಹಾಗಾಗಿ ನಮ್ಮ ತಾಯ್ನಡಿನಲ್ಲಿ ಹರಿಯುವ ಪ್ರತಿಯೊಂದು ನದಿಯು ಕೂಡ ನಮಗೆ ಬಹಳ ಪವಿತ್ರ. ನದಿಯ ಸ್ನಾನವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧೀಕರಣವನ್ನು ಒದಗಿಸುತ್ತದೆ ಎಂಬುದು ನಮ್ಮ ನಂಬಿಕೆ. ಹಾಗಾಗಿ ಎಲ್ಲಾ ಧರ್ಮಿಯರು ಕೂಡ ನದಿ ನೀರಿನ ಸ್ನಾನ (River water bath) ಮಾಡುತ್ತಾರೆ. ಆದರೆ ನಿಮಗೆ ಗೊತ್ತಾ? ಇದು ಕೇವಲ ಆತ್ಮದ ಶುದ್ಧೀಕರಣ ಬದಲಾಗಿ ಆರೋಗ್ಯ (Health) ಪ್ರಯೋಜನಗಳನ್ನು ನೀಡುತ್ತದೆ. ಇದರಿಂದ ಅನೇಕ ರೀತಿಯ ರೋಗಗಳು (Diseases) ಕೂಡ ಶಮನವಾಗುತ್ತದೆ. ಹಾಗಾದರೆ ನದಿ ಸ್ನಾನ ಮಾಡುವುದರಿಂದ ಯಾವ ರೀತಿಯ ಲಾಭಗಳಿವೆ? ವರ್ಷದಲ್ಲಿ ಒಮ್ಮೆಯಾದರೂ ನದಿ ನೀರಿನ ಸ್ನಾನ ಮಾಡಬೇಕು ಎನ್ನಲು ಕಾರಣವೇನು ತಿಳಿದುಕೊಳ್ಳಿ.
ಹಿಂದೂ ಧರ್ಮದಲ್ಲಿ, ನದಿಗಳನ್ನು ದೇವರೆಂದು ಪೂಜಿಸುವುದರಿಂದ ನದಿಗೆ ಇಳಿಯುವಾಗ ಬರಿಗಾಲಿನಲ್ಲಿ ಹೋಗುತ್ತೇವೆ ಇದರಿಂದಲೂ ಕೂಡ ಅನೇಕ ರೀತಿಯ ಪ್ರಯೋಜನಗಳಿವೆ. ಪಾದರಕ್ಷೆಗಳನ್ನು ಧರಿಸದಿದ್ದಾಗ ನಮ್ಮ ಪಾದಗಳು ಭೂಮಿ ಮತ್ತು ನೀರಿನೊಂದಿಗೆ ನೇರ ಸಂಪರ್ಕದಲ್ಲಿರುವುದರಿಂದ ಭೂಮಿಯಲ್ಲಿನ ಶಕ್ತಿಯನ್ನು ಆಕರ್ಷಿಸುತ್ತದೆ. ಈ ರೀತಿಯ ಅನುಭವ ನಿಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ನಕಾರಾತ್ಮಕ ಆಲೋಚನೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ.
ನದಿ ಸ್ನಾನ ಮಾಡುವುದರಿಂದ ಸಿಗುವ ಪ್ರಯೋಜನಗಳು:
ಇದನ್ನೂ ಓದಿ: Teething in Babies: ಮಗುವಿಗೆ ಹಲ್ಲು ಬರುವಾಗ ಈ ಲಕ್ಷಣಗಳು ಕಂಡುಬರುತ್ತೆ
ಸ್ನಾನ ಮಾಡುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು;
ನದಿಯ ನೀರು ಸುರಕ್ಷಿತ ಮತ್ತು ಸ್ನಾನಕ್ಕೆ ಸ್ವಚ್ಛವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನದಿಯ ಆಳದ ಬಗ್ಗೆ ತಿಳಿದಿರಲಿ. ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ, ನದಿ ನೀರಿನಲ್ಲಿ ಸ್ನಾನ ಮಾಡುವ ಮೊದಲು ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ