ಹೊಟ್ಟೆ ನೋವು ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆ ಜಂಕ್ ಫುಡ್ ಅಥವಾ ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ಕಾಡುತ್ತದೆ. ಹೊಟ್ಟೆ ನೋವು ಬಂದಾಗ ಪ್ರತಿ ಬಾರಿ ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆಯುವುದು ಸೂಕ್ತವಲ್ಲ. ಹೆಚ್ಚು ಮಾತ್ರೆ ತೆಗೆದುಕೊಂಡರೆ ಅಡ್ಡ ಪರಿಣಾಮಗಳಾಗುತ್ತವೆ. ಹೀಗಾಗಿ ಇಂತಹ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರವನ್ನು ಹುಡುಕಬೇಕು. ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ಸರಿಯಾಗಿ ಜೀರ್ಣವಾಗುವುದಿಲ್ಲ. ವಾಂತಿ ಬಂದಂತಾಗುತ್ತದೆ. ಹೊಟ್ಟೆ ವಿಪರೀತ ನೋವಾಗುವುದು. ಇದಕ್ಕೆ ಹೊಟ್ಟೆ ಉಬ್ಬರಿಸುವುದು ಅಂತಲೂ ಹೇಳಬಹುದು. ಈ ಹೊಟ್ಟೆ ಉಬ್ಬರಿಸುವುದಕ್ಕೆ ಕೆಲವು ಪರಿಹಾರವನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.
*ಅಕ್ಕಿ ನೀರು (ಗಂಜಿ)
ಜೀರ್ಣಕ್ರಿಯೆ ಸರಿಯಾಗದೆ ಇದ್ದಾಗ ಹೊಟ್ಟೆ ನೋವಾಗುತ್ತದೆ. ಇದಕ್ಕೆ ಅಕ್ಕಿ ನೀರು ಹೇಳಿ ಮಾಡಿಸಿದ ಪರಿಹಾರ. ಅತಿಸಾರ ಭೇದಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಅಕ್ಕಿ ನೀರನ್ನು ಸೇವಿಸಿ. ಒಂದು ಲೋಟ ಅಕ್ಕಿ ನೀರನ್ನು ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಮನೆಯಲ್ಲಿ ಅನ್ನ ಮಾಡಿದ ಬಳಿಕ ಉಳಿಯುವ ಗಂಜಿಯನ್ನು ಎಸೆಯಬೇಡಿ. ಹೊಟ್ಟೆ ಉಬ್ಬರಿಸುವಿಕೆ ಇದು ಮನೆ ಮದ್ದಾಗಿದೆ.
* ಕ್ಯಾಮೊಮೈಲ್ ಚಹಾ
ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ ಕ್ಯಾಮೊಮೈಲ್ ಚಹಾ ಸೇವಿಸಿ. ಕ್ಯಾಮೊಮೈಲ್ ಚಹಾ ಉತ್ತಮ ಗುಣವನ್ನು ಹೊಂದಿದೆ. ಇದು ಹೊಟ್ಟೆ ನೋವು ನಿವಾರಿಸುವ ಜೊತೆಗೆ ಅಸ್ವಸ್ಥತೆಯನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಕುಡಿಯುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ನಿವಾರಣೆಯಾಗುತ್ತದೆ.
* ಮೊಸರು ಮತ್ತು ಇಸಬ್ಗೋಲ್
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆಗೊಳಿಸಲು ಇಸಬ್ಗೋಲ್ ಬಳಸಬಹುದು. ಇಸಬ್ಗೋಲ್ನಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುತ್ತದೆ. ಇದನ್ನು ಮೊಸರಿನೊಂದಿಗೆ ಸೇವಿಸಬಹುದು. ಹೊಟ್ಟೆ ಉಬ್ಬರಿಸಿದ್ದರೆ ಇದು ಒಳ್ಳೆಯ ಮದ್ದಾಗಿದೆ. ರಾತ್ರಿ ಮಲಗುವ ಮೊದಲು ಇಸಬ್ಗೋಲ್ನ ಬಿಸಿ ನೀರಿಗೆ ಹಾಕಿಕೊಂಡು ಕುಡಿದರೆ ಮಲಬದ್ಧತೆ ಸಮಸ್ಯೆಯಿಂದಲೂ ಪಾರಾಗಬಹುದು.
* ಪುದೀನಾ ಟೀ
ಪುದೀನಾ ನೈಸರ್ಗಿಕ ನೋವು ನಿವಾರಕ ಗುಣಗಳನ್ನು ಹೊಂದಿದೆ. ಹೊಟ್ಟೆ ಉಬ್ಬರದಿಂದಾಗುವ ನೋವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಹೀಗಾಗಿ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದರೆ ಪುದೀನಾ ಟೀ ಸೇವಿಸಬಹುದು. ಇದು ದೇಹಕ್ಕೆ ತಂಪು. ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.
*ಶುಂಠಿ
ಶುಂಠಿ ಅಡುಗೆಯಲ್ಲಿ ಬಳಸುವ ಒಂದು ಸಾಂಬಾರ ವಸ್ತು. ಅಡುಗೆಗೆ ರುಚಿ ಕೊಡುವ ಗುಣವನ್ನು ಹೊಂದಿದೆ. ಮಾತ್ರವಲ್ಲದೆ ಕೆಲ ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರದ ಅಂಶಗಳನ್ನು ಹೊಂದಿದೆ. ಹೊಟ್ಟೆ ನೋವನ್ನು ನಿವಾರಿಸುವ ಶುಂಠಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀರಿನಲ್ಲಿ ಶುಂಠಿಯನ್ನು ಕುದಿಸಿ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಇದನ್ನೂ ಓದಿ
Health Tips: ತುಟಿ ಕಪ್ಪಾಗಿದೆಯೇ? ಇಲ್ಲಿದೆ ಪರಿಹಾರ
Dark Circle: ನಿಮ್ಮ ಕಣ್ಣಿನ ಸುತ್ತ ಕಪ್ಪಾಗಿದೆಯೇ? ಸೂಕ್ತ ಪರಿಹಾರ ಇಲ್ಲಿದೆ ನೋಡಿ
(Best medicine for Stomach Ache in home)