ಚಳಿಗಾಲದಲ್ಲಿ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುವ ಆಹಾರಗಳಿವು

|

Updated on: Feb 02, 2024 | 11:11 AM

ಬೀನ್ಸ್‌ನಂತಹ ಹೆಚ್ಚಿನ ಫೈಬರ್ ಆಹಾರವನ್ನು ಸೇವಿಸುವುದರಿಂದ ಮಧುಮೇಹಿಗಳ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗದಂತೆ ತಡೆಯಬಹುದು.

ಚಳಿಗಾಲದಲ್ಲಿ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುವ ಆಹಾರಗಳಿವು
ನಟ್ಸ್
Follow us on

ನಾವು ಸೇವಿಸುವ ಆಹಾರ ನಮ್ಮ ರಕ್ತದ ಸಕ್ಕರೆಮಟ್ಟವನ್ನು ಹೆಚ್ಚಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ, ಆಹಾರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯ. ಚಳಿಗಾಲದಲ್ಲಿ ನಾಲಿಗೆಗೆ ರುಚಿ ರುಚಿಯಾದ, ಖಾರವಾದ, ಬಿಸಿಯಾದ ಆಹಾರ ಬೇಕೆನಿಸುತ್ತದೆ. ಆದರೆ, ಇದರಿಂದ ರಕ್ತದ ಗ್ಲುಕೋಸ್ ಮಟ್ಟ ಹೆಚ್ಚಾಗಬಹುದು. ಹೀಗಾಗಿ, ನಿಮ್ಮ ದೇಹದ ರಕ್ತದ ಮಟ್ಟವನ್ನು ಕಡಿಮೆ ಮಾಡುವ ಕೆಲವು ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಬೀನ್ಸ್:

ಬೀನ್ಸ್‌ನಂತಹ ಹೆಚ್ಚಿನ ಫೈಬರ್ ಆಹಾರವನ್ನು ಸೇವಿಸುವುದರಿಂದ ಮಧುಮೇಹಿಗಳ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗದಂತೆ ತಡೆಯಬಹುದು.

ಬೆರಿ ಹಣ್ಣುಗಳು:

ಇತರ ಹಣ್ಣುಗಳಿಗೆ ಹೋಲಿಸಿದರೆ ಬೆರಿ ಹಣ್ಣುಗಳು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ ಅಂಶವನ್ನು ಕಡಿಮೆ ಹೊಂದಿರುತ್ತವೆ. ರಾಸ್​ಬೆರಿ ಹಣ್ಣುಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುತ್ತದೆ.

ಇದನ್ನೂ ಓದಿ: ತೂಕ ಇಳಿಸುವುದರಿಂದ ಮಧುಮೇಹ ನಿಯಂತ್ರಣದವರೆಗೆ; ಶುಂಠಿ ನೀರಿನ ಪ್ರಯೋಜನಗಳಿವು

ಬ್ರೊಕೊಲಿ:

ಬ್ರೊಕೊಲಿ ನಿಮ್ಮ ಕಾರ್ಬೋಹೈಡ್ರೇಟ್‌ಗಳನ್ನು ಸಮತೋಲನಗೊಳಿಸಲು ಉತ್ತಮ ಮಾರ್ಗವಾಗಿದೆ. ಅವು ನಿಮ್ಮ ಹೊಟ್ಟೆಯನ್ನು ಬೇಗ ತುಂಬಿಸುತ್ತವೆ. ಅಲ್ಲದೆ, ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ನಿಯಂತ್ರಿಸುತ್ತವೆ.

ಗೆಣಸು:

ಹುರಿದು ಅಥವಾ ಬೇಯಿಸಿದ ಗೆಣಸು ಮಧುಮೇಹಿಗಳಿಗೆ ಆರೋಗ್ಯಕರ ಆಯ್ಕೆಯಾಗಿದೆ. ಅವು ಹೆಚ್ಚು ಪೌಷ್ಠಿಕಾಂಶವನ್ನು ಹೊಂದಿವೆ ಮತ್ತು ಕ್ಯಾಲೊರಿಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹಣ್ಣುಗಳು:

ನೀವು ಶುಗರ್ ಪೇಷೆಂಟ್ ಎಂಬ ಕಾರಣಕ್ಕೆ ನೀವು ಹಣ್ಣುಗಳ ಸೇವನೆಯನ್ನು ಬಿಟ್ಟುಬಿಡಬೇಕಾಗಿಲ್ಲ. ಅವು ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ.

ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತಾ?

ನಟ್ಸ್:

ಮಧುಮೇಹ ಇರುವವರು ತಮ್ಮ ಆಹಾರದಲ್ಲಿ ನಟ್ಸ್​ ಅನ್ನು ಸೇರಿಸಿಕೊಳ್ಳಬೇಕು. ಇದು ಗ್ಲೈಸೆಮಿಕ್ ಅನ್ನು ಸುಧಾರಿಸುವುದರ ಜೊತೆಗೆ ಬಿಪಿಯನ್ನು ಕಡಿಮೆ ಮಾಡುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಓಟ್ಸ್:

ಓಟ್ಸ್​ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಿ, ಆರೋಗ್ಯಕ್ಕೆ ಬೇಕಾದ ಪೋಷಣೆಯನ್ನು ಒದಗಿಸುತ್ತದೆ.

ಸಂಪೂರ್ಣ ಧಾನ್ಯದ ಪಾಸ್ತಾ:

ಇವು ಹೆಚ್ಚುವರಿ ಪ್ರೋಟೀನ್ ಅನ್ನು ಹೊಂದಿರುತ್ತವೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಸ್ಪೈಕ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Fri, 26 January 24