
ರಾಜ್ಯಗಳಲ್ಲಿ ಹಕ್ಕಿಜ್ವರ(Bird Flu) ಪ್ರಕರಣಗಳು ವರದಿಯಾಗುತ್ತಿದೆ. ಎಚ್5ಎನ್1(H5N1) ವೈರಸ್ ಅನ್ನು ಪಕ್ಷಿ ಜ್ವರ ಎಂದೂ ಕರೆಯುತ್ತಾರೆ. ಈ ವೈರಸ್ ಮೊದಲಿಗೆ 1996ರಲ್ಲಿ ಚೀನಾದಲ್ಲಿ ಪತ್ತೆಯಾಗಿದ್ದು, ನಂತರ ಜಗತ್ತಿನಾದ್ಯಂತ ಹರಡಿತು ಎನ್ನಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಈ ರೋಗದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಹಕ್ಕಿ ಜ್ವರವು ಸೋಂಕಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ ಎನ್ನಲಾಗುತ್ತದೆ. ಈ ಕಾಯಿಲೆ ಬಗ್ಗೆ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ಇಲ್ಲವಾದರೂ ಕೂಡ ಇದರ ಬಗ್ಗೆ ಆದಷ್ಟು ಜಾಗೃತಿ ವಹಿಸುವುದು ಅನಿವಾರ್ಯವಾಗಿದೆ. ಆಗ ಮಾತ್ರ ನಮಗೆ ಅದರ ಬಗ್ಗೆ ಸ್ವಲ್ಪ ಮಟ್ಟಿಗಾದರೂ ಅರಿವಿರಲು ಸಾಧ್ಯ. ಈ ಸಮಯದಲ್ಲಿ ಅನೇಕ ರೀತಿಯ ಸುಳ್ಳು ಸುದ್ದಿಗಳೂ ಕೂಡ ಹರಡುತ್ತಿರುವುದರಿಂದ ಜನರಿಗೆ ಯಾವುದು ಸತ್ಯ ಯಾವುದು ಸುಳ್ಳು, ಯಾವುದನ್ನು ನಂಬಬೇಕು ಎಂದು ತಿಳಿಯದಿರುವ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಈ ರೋಗದ ಲಕ್ಷಣಗಳು? ಹೇಗೆ ಹರಡುತ್ತದೆ ಎಂಬುದರ ಕುರಿತು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಸೋಂಕು ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಲ್ಲಿಯೂ ಕಂಡು ಬರುತ್ತದೆ.
ತೀವ್ರ ಜ್ವರ
ಕೆಮ್ಮು
ಉಸಿರಾಟದಲ್ಲಿ ತೊಂದರೆ
ಮೂಗು ಸೋರುವಿಕೆ
ತಲೆನೋವು
ಸ್ನಾಯುಗಳ ನೋವು
ಗಂಟಲಿನ ಊತ
ಕೆಲವರಲ್ಲಿ ವಾಕರಿಕೆ, ವಾಂತಿ ಮತ್ತು ಬೇಧಿಯು ಕಂಡುಬರುವುದು ಎಂದು ಹೇಳಲಾಗಿದೆ. ಇನ್ನು ಕೆಲವರಲ್ಲಿ ಕಣ್ಣು ಕೆಂಪಾಗುವ ಸಮಸ್ಯೆಯು ಕಂಡುಬರಬಹುದು. ಸೋಂಕು ದೇಹದೊಳಗೆ ಹೋಗಿ 2- 5 ದಿನಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎನ್ನಲಾಗುತ್ತದೆ. ಇದಕ್ಕೆ ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಆಗ ಇದು ಪ್ರಾಣಾಂತಿಕವಾಗುವುದನ್ನು ತಪ್ಪಿಸಬಹುದಾಗಿದೆ. ಹಾಗಾಗಿ ಯಾವುದಾದರೂ ಲಕ್ಷಣ ಕಂಡು ಬಂದಲ್ಲಿ ಅದನ್ನು ನಿರ್ಲಕ್ಷ್ಯ ಮಾಡದೆಯೇ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ.
ಇದನ್ನೂ ಓದಿ: ಫ್ಲೂ ಲಸಿಕೆ ಪಡೆದು ಫ್ಲೂನಿಂದ ದೂರವಿರಿ ಮತ್ತು ಆರೋಗ್ಯವಾಗಿರಿ
ಸೋಂಕು ತಗುಲಿರುವಂತಹ ಹಕ್ಕಿಯನ್ನು ಸ್ಪರ್ಶಿಸುವುದು, ಅದರ ಹಿಕ್ಕೆಗಳು ಮತ್ತು ಹಾಸನ್ನು ಮುಟ್ಟುವುದರಿಂದ ಅಥವಾ ಅದನ್ನು ಅಡುಗೆಗೆ ಬಳಸುವುದು ಇತ್ಯಾದಿಯಿಂದ ಸೋಂಕು ಹರಡಬಹುದು ಎನ್ನಲಾಗುತ್ತದೆ. ಹಾಗಾಗಿ ಆದಷ್ಟು ಈ ಸಮಯದಲ್ಲಿ ಸ್ವಚ್ಛತೆ ಬಗ್ಗೆ ಗಮನ ನೀಡಿ. ಅಡುಗೆ ಮಾಡುವ ಸ್ಥಳ ಯಾವಾಗಲೂ ಸ್ವಚ್ಛವಾಗಿರಲಿ. ಆಹಾರ ತಿನ್ನುವ ಮೊದಲು ಅಥವಾ ಅದನ್ನು ತಯಾರಿಸುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ. ಸ್ಯಾನಿಟೈಸರ್ ನ್ನು ಬಳಸಿ. ಬೇರೆ ಊರಿಗೆ ಹೋಗುವಾಗಲೂ ಇದರ ಬಳಕೆ ಮಾಡುವುದನ್ನು ಮರೆಯಬೇಡಿ. ತೆರೆದ ಮಾರುಕಟ್ಟೆಯಿಂದ ದೂರವಿರಿ. ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಬಾತುಕೋಳಿಯನ್ನು ತಿನ್ನಬೇಡಿ. ಹಸಿ ಮೊಟ್ಟೆಯನ್ನು ಸೇವಿಸಬೇಡಿ. ವೈದ್ಯರ ಬಳಿ ಈ ಬಗ್ಗೆ ಸರಿಯಾದ ಸಲಹೆ ತೆಗೆದುಕೊಂಡು ಆ ಬಳಿಕ ಮಾಂಸಾಹಾರ ಸೇವನೆ ಮಾಡಿ. ಜೊತೆಗೆ ಆಹಾರಗಳನ್ನು ಬೇಯಿಸಿ ತಿನ್ನುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ