AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Hearing Day 2025: ಇಂದು ವಿಶ್ವ ಶ್ರವಣ ದಿನ; ಶ್ರವಣ ದೋಷ ಬರದಂತೆ ನೋಡಿಕೊಳ್ಳಲು ಕಿವಿಗಳ ಆರೈಕೆ ಹೀಗಿರಲಿ

ಹೆಡ್‌ಫೋನ್‌ಗಳ ಅತಿಯಾದ ಬಳಕೆ, ಕಿವಿಗಳ ಸರಿಯಾದ ಆರೈಕೆಯ ಕೊರತೆಯಿಂದಾಗಿ ಇಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಶ್ರವಣ ಸಮಸ್ಯೆಗೆ ತುತ್ತಾಗಿದ್ದಾಗಿದ್ದಾರೆ. ಈ ನಿಟ್ಟಿನಲ್ಲಿ ಶ್ರವಣ ದೋಷದ ಆರಂಭಿಕ ಪತ್ತೆ, ಅದಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಕಿವಿಗಳ ಸರಿಯಾದ ಆರೈಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್‌ 03 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ ಮತ್ತು ಶ್ರವಣ ದೋಷ ಬರದಂತೆ ನೋಡಿಕೊಳ್ಳಲು ಕಿವಿಗಳ ಆರೈಕೆ ಹೇಗಿರಬೇಕು ಎಂಬ ತಿಳಿಯಿರಿ.

World Hearing Day 2025: ಇಂದು ವಿಶ್ವ ಶ್ರವಣ ದಿನ; ಶ್ರವಣ ದೋಷ ಬರದಂತೆ ನೋಡಿಕೊಳ್ಳಲು ಕಿವಿಗಳ ಆರೈಕೆ ಹೀಗಿರಲಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 03, 2025 | 10:19 AM

ಇಂದಿನ ಬಿಡುವಿಲ್ಲದ ಜೀವನದಲ್ಲಿ, ಜೋರಾದ ಶಬ್ದ, ಜೋರಾದ ಸದ್ದಿನ ಸಂಗೀತ ಆಲಿಸುವಿಕೆ ಮತ್ತು ಕಿವಿಗಳಿಗೆ ಸರಿಯಾದ ಆರೈಕೆಯ ಕೊರತೆಯಿಂದಾಗಿ ಅನೇಕ ಜನರು ಶ್ರವಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ, ಹೆಡ್‌ಫೋನ್‌ಗಳ ಅತಿಯಾದ ಬಳಕೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹಾಡುಗಳನ್ನು ಕೇಳುವ ಅಭ್ಯಾಸದಿಂದಾಗಿ ಜನರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರಪಂಚದಲ್ಲಿ 466 ಮಿಲಿಯನ್‌ಗೂ ಹೆಚ್ಚು ಜನರು ಶ್ರವಣ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮತ್ತು ಈ ಅಂಕಿ ಅಂಶವು ನಿರಂತರವಾಗಿ ಹೆಚ್ಚುತ್ತಿದೆ. ಆದರೆ ಜನರು ಶ್ರವಣ ಆರೋಗ್ಯದ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಈ ನಿಟ್ಟಿನಲ್ಲಿ ಶ್ರವಣ ದೋಷದ ಆರಂಭಿಕ ಪತ್ತೆ, ಅದಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಕಿವಿಗಳ ಸರಿಯಾದ ಆರೈಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್‌ 03 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು? ಇದರ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ಶ್ರವಣ ದಿನದ ಇತಿಹಾಸ:

ವಿಶ್ವ ಶ್ರವಣ ದಿನವನ್ನು 2007 ರಲ್ಲಿ WHO (ವಿಶ್ವ ಆರೋಗ್ಯ ಸಂಸ್ಥೆ) ಪ್ರಾರಂಭಿಸಿತು. ಇದನ್ನು ಆರಂಭದಲ್ಲಿ “ಅಂತರರಾಷ್ಟ್ರೀಯ ಕಿವಿ ಆರೈಕೆ ದಿನ” ಎಂದು ಕರೆಯಲಾಗುತ್ತಿತ್ತು. ನಂತರ 2016 ರಲ್ಲಿ “ವಿಶ್ವ ಶ್ರವಣ ದಿನ” ಎಂದು ಮರುನಾಮಕರಣ ಮಾಡಲಾಯಿತು. ಇದರ ಉದ್ದೇಶ ಕಿವಿಗಳ ಆರೈಕೆಯ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ಶ್ರವಣ ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸದಿದ್ದರೆ, ಈ ಸಮಸ್ಯೆ ಶಾಶ್ವತವಾಗಬಹುದು ಎಂದು ಜನರಿಗೆ ತಿಳಿಸುವುದಾಗಿದೆ.

ವಿಶ್ವ ಶ್ರವಣ ದಿನವನ್ನು ಏಕೆ ಆಚರಿಸಲಾಗುತ್ತದೆ?

ಅನೇಕ ಜನರಿಗೆ ತಮಗೆ ಶ್ರವಣ ದೋಷವಿದೆ ಎಂಬ ಬಗ್ಗೆ ಅರಿವೇ ಇರುವುದಿಲ್ಲ. ವಿಶ್ವ ಶ್ರವಣ ದಿನದ ಮೂಲಕ, ಶ್ರವಣ ದೋಷಕ್ಕೆ ಸಕಾಲಿಕ ಚಿಕಿತ್ಸೆ ಎಷ್ಟು ಮುಖ್ಯ ಹಾಗೂ ಜೋರಾದ ಶಬ್ದಗಳಿಂದ ದೂರವಿರುವುದ, ಕಿವಿಗಳ ಆರೈಕೆ ಮತ್ತು ಕಾಲಕಾಲಕ್ಕೆ ಕಿವಿಗಳನ್ನು ಪರೀಕ್ಷಿಸುವುದರಿಂದ ಈ ಸಮಸ್ಯೆಯನ್ನು ಹೇಗೆ ತಪ್ಪಿಸಬಹುದು ಎಂಬ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ.

ಇದನ್ನೂ ಓದಿ
Image
ಕಿವಿಯೊಳಗಿನ ಕೊಳೆಯನ್ನು ಸುಲಭವಾಗಿ ಕ್ಲೀನ್‌ ಮಾಡಲು ಇಲ್ಲಿದೆ ಸರಳ ಪರಿಹಾರ
Image
ಯಾವ ವಿಟಮಿನ್ ಕೊರತೆಯಾದಾಗ ಹಲ್ಲು ಮುರಿಯುತ್ತೆ ಗೊತ್ತಾ?
Image
ಕಿವಿಯಲ್ಲಿ ಗಿಜಿಗುಡುವ ಶಬ್ದ ಯಾವಾಗಲೂ ಕೇಳುತ್ತಾ?
Image
ಶಿಶುಗಳಿಗೆ ಕಣ್ಣಿನ ತಪಾಸಣೆ ಮಾಡುವುದು ಏಕೆ ಮುಖ್ಯ?

ಅಷ್ಟೇ ಅಲ್ಲದೆ ಈ ದಿನ ಶ್ರವಣ ಸಾಧನಗಳು, ಕಾಕ್ಲಿಯರ್ ಇಂಪ್ಲಾಂಟ್‌ಗಳಂತಹ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದರಿಂದ ಶ್ರವಣದೋಷವುಳ್ಳವರು ಸಹ ಸಾಮಾನ್ಯ ಜೀವನವನ್ನು ನಡೆಸಬಹುದು. ಅನೇಕ ದೇಶಗಳಲ್ಲಿ, ಈ ದಿನದಂದು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತದೆ ಮತ್ತು ಶ್ರವಣ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಹೊಸ ಯೋಜನೆಗಳನ್ನು ರೂಪಿಸಲಾಗುತ್ತದೆ.

ವಿಶ್ವ ಶ್ರವಣ ದಿನದ ಮಹತ್ವ:

ವಿಶ್ವ ಶ್ರವಣ ದಿನವು ಕೇವಲ ಜಾಗೃತಿ ದಿನವಲ್ಲ, ಬದಲಾಗಿ ನಾವು ನಮ್ಮ ಶ್ರವಣದ ಬಗ್ಗೆ ಕಾಳಜಿ ವಹಿಸಬೇಕು ಎಂಬುದನ್ನು ಜನರಿಗೆ ಮನದಟ್ಟು ಮಾಡುತ್ತದೆ. ಜೋರು ಧ್ವನಿಯಲ್ಲಿ ಹಾಡುಗಳನ್ನು ಕೇಳುವುದು, ವೈದ್ಯರನ್ನು ಸಂಪರ್ಕಿಸದೆ ಕಿವಿಯಲ್ಲಿ ಏನನ್ನಾದರೂ ಹಾಕಿಕೊಳ್ಳುವುದು ಅಥವಾ ಶ್ರವಣ ಸಮಸ್ಯೆಗಳನ್ನು ನಿರ್ಲಕ್ಷಿಸುವುದು, ಈ ಎಲ್ಲಾ ಅಭ್ಯಾಸಗಳು ಕ್ರಮೇಣ ಕಿವುಡುತನವನ್ನು ಉಂಟು ಮಾಡಬಹುದು. ಹಾಗಾಗಿ ಈ ಬಗ್ಗೆ ಹಾಗೂ ಕಿವಿಗಳ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಜನರಿಗೆ ತಿಳಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಇದು ಚಿನ್ನದ ರಕ್ತ.. ಜಗತ್ತಿನಲ್ಲೇ ಅತ್ಯಂತ ಅಪರೂಪದ ರಕ್ತದ ಗುಂಪು ಯಾವುದು ಗೊತ್ತಾ?

ಶ್ರವಣ ದೋಷ ಬರದಂತೆ ನೋಡಿಕೊಳ್ಳಲು ಕಿವಿಗಳ ಆರೈಕೆ ಹೀಗಿರಲಿ:

ಜೋರಾದ ಶಬ್ದಗಳಿಂದ ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ : ಜೋರಾದ ಶಬ್ದಗಳಿಗೆ ಒಡ್ಡಿಕೊಳ್ಳುವುದರಿಂದ ಶ್ರವಣ ಸಾಮರ್ಥ್ಯ ಕಡಿಮೆಯಾಗುತ್ತದೆ. ವಾಹನಗಳು, ಯಂತ್ರಗಳ ಸದ್ದಾಗಿರಬಹುದು, ಹೆಡ್‌ಫೋನ್‌ಗಳಲ್ಲಿ ಸಂಗೀತ ಆಲಿಸುವುದು ಅಥವಾ ಜೋರು ಧ್ವನಿಯಲ್ಲಿ ಸಂಗೀತ ಆಲಿಸುವುದಾಗಿರಬಹುದು. ಹೀಗೆ ಜೋರಾದ ಶಬ್ದಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಕಿವಿಯ ಸೂಕ್ಷ್ಮ ರಚನೆಗಳು ಹಾನಿಗೊಳಗಾಗಬಹುದು. ನಿಮ್ಮ ಕಿವಿಗಳನ್ನು ರಕ್ಷಿಸಲು, ಗದ್ದಲದ ವಾತಾವರಣದಲ್ಲಿ ಇಯರ್‌ಪ್ಲಗ್‌ಗಳು ಅಥವಾ ಇಯರ್‌ಮಫ್‌ಗಳನ್ನು ಬಳಸಿ ಮತ್ತು ಹೆಡ್‌ಫೋನ್‌ಗಳು ಅಥವಾ ಇಯರ್‌ಬಡ್‌ಗಳನ್ನು ಬಳಸುವಾಗ ವಾಲ್ಯೂಮ್ ಅನ್ನು ಮಧ್ಯಮ ಮಟ್ಟದಲ್ಲಿ ಇರಿಸಿ.

ಕಿವಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ : ನಮ್ಮ ದೇಹದ ಇತರ ಭಾಗಗಳಂತೆ, ನಮ್ಮ ಕಿವಿಗಳಿಗೂ ನಿಯಮಿತ ಆರೈಕೆಯ ಅಗತ್ಯವಿದೆ. ಕಿವಿಗಳಿಗೆ ಹಾನಿ ಮಾಡುವಂತಹ ಹತ್ತಿ ಸ್ವ್ಯಾಬ್‌ಗಳು ಅಥವಾ ಇತರ ವಸ್ತುಗಳನ್ನು ಕಿವಿಯೊಳಗೆ ಹಾಕುವುದನ್ನು ತಪ್ಪಿಸಿ ಮತ್ತು ಒದ್ದೆ ಬಟ್ಟೆಯಿಂದ ನಿಮ್ಮ ಕಿವಿಗಳನ್ನು ನಿಧಾನವಾಗಿ ಸ್ವಚ್ಛಗೊಳಿಸಿ. ನಿಮ್ಮ ಕಿವಿಯಲ್ಲಿ ಅತಿಯಾದ ಕೊಳೆ ಸಂಗ್ರಹವಾಗಿದ್ದರೆ, ವೈದ್ಯರನ್ನು ಸಂಪರ್ಕಿಸಿ.

ಶ್ರವಣ ಶಕ್ತಿಯನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ : ನಿಮ್ಮ ಶ್ರವಣ ಸಾಮರ್ಥ್ಯ ಕ್ಷೀಣಿಸುತ್ತಿದ್ದರೆ, ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ನೀವು ಶ್ರವಣ ತಪಾಸಣೆ ಮಾಡಿಸಿಕೊಳ್ಳಬೇಕು.

ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ: ಅನೇಕ ಜೀವನಶೈಲಿ ಅಂಶಗಳು ಸಹ ಶ್ರವಣ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಿಟಮಿನ್ ಎ, ಸಿ ಮತ್ತು ಇ, ಹಾಗೂ ಸತು ಮತ್ತು ಮೆಗ್ನೀಸಿಯಮ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಕಿವಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಧೂಮಪಾನ ಮಾಡುವುದನ್ನು ತಪ್ಪಿಸಿ ಮತ್ತು ಮದ್ಯಪಾನವನ್ನು ಮಿತಿಗೊಳಿಸಿ, ಏಕೆಂದರೆ ಈ ಅಭ್ಯಾಸಗಳು ಶ್ರವಣ ಸಾಮಾರ್ಥ್ಯವನ್ನು ದುರ್ಬಲಗೊಳಿಸಬಹುದು. ಹೆಚ್ಚುವರಿಯಾಗಿ, ದೈಹಿಕವಾಗಿ ಸಕ್ರಿಯರಾಗಿರುವುದು ಮತ್ತು ಒತ್ತಡವನ್ನು ನಿಯಂತ್ರಿಸುವುದು ನಿಮ್ಮ ಕಿವಿಗಳ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್