ಇತ್ತೀಚೆಗಿನ ದಿನಗಳಲ್ಲಿ ಹಕ್ಕಿ ಜ್ವರವು ಎಲ್ಲೆಡೆ ಹರಡುತ್ತಿದೆ. ಈ ರೋಗದ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಈ ವೈರಸ್ ಪ್ರಾಥಮಿಕವಾಗಿ ಪಕ್ಷಿಗಳ ಮೇಲೆ ಮಾತ್ರವಲ್ಲದೇ ಮನುಷ್ಯರಿಗೆ ಕೂಡ ಹರಡಬಹುದು. ಆದರೆ ಇದೀಗ ಸಂಶೋಧನೆಯಿಂದ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ಹಕ್ಕಿ ಜ್ವರ ಸೋಂಕಿಗೆ ಒಳಗಾದ ಹಸುವಿನ ಹಸಿ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಅಪಾಯ ಹೆಚ್ಚು. ಈ ಹಾಲನ್ನು ಕುಡಿದರೆ ಶ್ವಾಸಕೋಶದಲ್ಲಿ ವೈರಸ್ ನ ಪರಿಣಾಮದ ಮಟ್ಟವು ತೀವ್ರವಾಗಿರುತ್ತದೆ ಎನ್ನಲಾಗಿದೆ.
ಹೊಸ ಅಧ್ಯಯನದಲ್ಲಿ, ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯ ಮತ್ತು ಟೆಕ್ಸಾಸ್ ಎ & ಎಂ ಸಂಶೋಧಕರು ಸೋಂಕಿತ ಪ್ರಾಣಿಗಳ ಹಸಿ ಹಾಲಿನ ಹನಿಗಳನ್ನು ಐದು ಇಲಿಗಳಿಗೆ ನೀಡಲಾಯಿತು. ಈ ಹಾಲನ್ನು ಕುಡಿದ ಇಲಿಗಳಲ್ಲಿ ಆಲಸ್ಯ ಮತ್ತು ರೋಗದ ಲಕ್ಷಣಗಳು ಕಂಡು ಬಂದವು. ಈ ಜಾನುವಾರುಗಳನ್ನು ಅವುಗಳ ಅಂಗಗಳನ್ನು ಅಧ್ಯಯನ ಮಾಡಲು ಯೂಥನೈಸ್ ಮಾಡಲಾಯಿತು. ಈ ಅಧ್ಯಯನದ ಬಳಿಕ ಹಸುವಿನ ಹಸಿ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ದೃಢವಾಗಿದೆ.
ಇದನ್ನೂ ಓದಿ: ಮಲೆನಾಡಿಗರ ಕೆಂಪು ಇರುವೆ ಚಟ್ನಿ ಸರ್ವ ರೋಗಕ್ಕೂ ರಾಮಬಾಣ, ಇದರಲ್ಲಿದೆ ಪ್ರೊಟೀನ್
ಕಳೆದ ಕೆಲವು ವರ್ಷಗಳಿಂದ ಎಚ್ 5 ಎನ್ 1 ಗೆ ಕಾರಣವಾಗುವ ಏವಿಯನ್ ಇನ್ಫ್ಲುಯೆನ್ಸ ವೈರಸ್ 50 ಕ್ಕೂ ಹೆಚ್ಚು ವಿವಿಧ ರೀತಿಯ ಪ್ರಾಣಿಗಳಿಗೆ ಸೋಂಕು ತಗುಲಿಸಿದೆ. ಈಗಾಗಲೇ ಈ ಸೋಂಕಿತ ಜಾನುವಾರುಗಳು ಯುಎಸ್ ನ ಡೈರಿಯಲ್ಲಿದೆ. ಹಕ್ಕಿ ಜ್ವರದಿಂದಾಗಿ ದೇಶಾದ್ಯಂತ ಇಲ್ಲಿಯವರೆಗೆ 52 ಜಾನುವಾರುಗಳ ಹಿಂಡುಗಳು ಸೋಂಕಿಗೆ ಒಳಗಾಗಿದ್ದು, ಈ ಸೋಂಕಿತ ಹಾಲನ್ನು ಕುಡಿದು ಇಬ್ಬರು ಕೃಷಿ ಕಾರ್ಮಿಕರಲ್ಲಿ ಹಕ್ಕಿ ಜ್ವರವು ಕಾಣಿಸಿಕೊಂಡಿದೆ. ಈ ವೈರಸ್ ಸೋಂಕಿನಿಂದಾಗಿ, ರೋಗಿಯ ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ ಹಾಗೂ ಇನ್ನಿತ್ತರ ಕೆಲವು ರೋಗಲಕ್ಷಣಗಳು ಸಹ ಬೆಳೆಯುತ್ತವೆ ಎನ್ನಲಾಗಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ