Red ant chutney: ಮಲೆನಾಡಿಗರ ಕೆಂಪು ಇರುವೆ ಚಟ್ನಿ ಸರ್ವ ರೋಗಕ್ಕೂ ರಾಮಬಾಣ, ಇದರಲ್ಲಿದೆ ಪ್ರೊಟೀನ್
ಮಲೆನಾಡು ಮತ್ತು ಅಂಕೋಲೆಯ ಸಿದ್ದಿ ಸುಮುದಾಯದವರ ವಿಶಿಷ್ಟ ಆಹಾರ ಪದ್ಧತಿಯಾದ ಚಗಳಿ ಚಟ್ನಿಯ ಬಗ್ಗೆ ನೀವು ಕೇಳಿರಬಹುದು. ಇನ್ನೇನು ಮಳೆಗಾಲ ಆರಂಭವಾಗುವ ಸಮಯ ಈಗ ಇದರ ಸೇವನೆ ಮಾಡುವುದು ತುಂಬಾ ಒಳ್ಳೆಯದು ಇದರಿಂದ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ ಎಂಬುದು ಇಲ್ಲಿನವರ ನಂಬಿಕೆ.
ನಮ್ಮ ದೇಶ ವೈವಿಧ್ಯಮಯ ಪರಂಪರೆಗಳ ತವರೂರು. ಪರಿಸರಕ್ಕೆ ಅನುಗುಣವಾಗಿ ವಿವಿಧ ರೀತಿಯ ಭಕ್ಷ್ಯ, ಭೋಜನಗಳನ್ನು ಸವಿಯುವುದು ಕೂಡ ಇಲ್ಲಿನ ವಿಶೇಷ. ಅದೇ ರೀತಿ ಮಲೆನಾಡು ಮತ್ತು ಅಂಕೋಲೆಯ ಸಿದ್ದಿ ಸುಮುದಾಯದವರ ವಿಶಿಷ್ಟ ಆಹಾರ ಪದ್ಧತಿಯಾದ ಚಗಳಿ ಚಟ್ನಿಯ ಬಗ್ಗೆ ನೀವು ಕೇಳಿರಬಹುದು. ಇನ್ನೇನು ಮಳೆಗಾಲ ಆರಂಭವಾಗುವ ಸಮಯ ಈಗ ಇದರ ಸೇವನೆ ಮಾಡುವುದು ತುಂಬಾ ಒಳ್ಳೆಯದು ಇದರಿಂದ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ ಎಂಬುದು ಇಲ್ಲಿನವರ ನಂಬಿಕೆ. ಸಾರಾಯಿ ಸರ್ವ ರೋಗಕ್ಕೂ ಮದ್ದು ಅನ್ನೋ ಹಾಗೆ ಈ ಚಟ್ನಿ ತಿಂದರೆ ಯಾವ ರೋಗವು ಬರುವುದಿಲ್ಲ ಎಂಬ ನಂಬಿಕೆ ಇದೆ.
ಹಳ್ಳಿಗರ ಮನೆಮದ್ದು!
ಕೆಂಪು ಇರುವೆಯನ್ನು ತಿನ್ನುತ್ತಾರಾ? ಇದರಿಂದ ಚಟ್ನಿ ಮಾಡುತ್ತಾರಾ? ಅಂತ ಹುಬ್ಬೇರಿಸುವವರಿಗೆ, ಇವುಗಳಿಂದಲೂ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಒರಿಸ್ಸಾ ಯೂನಿವರ್ಸಿಟಿ ನಡೆಸಿದ ಸಂಶೋಧನೆ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯದವರು ಅಂಜಿಕೆಯಿಂದ ಚಗಳಿ ಚಟ್ನಿ ಎಂದರೆ ಮೂಗು ಮರಿಯುತ್ತಾರೆ. ಆದರೆ ಮಲೆನಾಡಿನ ಬಹುತೇಕರಿಗೆ ಚಗಳಿ ಚಟ್ನಿ ಅಂದರೆ ಬಹಳ ಅಚ್ಚುಮೆಚ್ಚು. ಈ ಚಗಳಿ ಚಟ್ನಿಯನ್ನು ಅನಾದಿ ಕಾಲದಿಂದಲೂ ತಿನ್ನುತ್ತಲೇ ಬರುತ್ತಿದ್ದಾರೆ. ಮನೆಯಲ್ಲಿ ಯಾರಿಗಾದರೂ ಶೀತ, ಜ್ವರ, ಕೆಮ್ಮು ಈ ರೀತಿಯ ಕಾಯಿಲೆಗಳು ಕಾಣಿಸಿಕೊಂಡರೆ ಮೊದಲು ಖಾರವಾದ ಚಗಳಿ ಚಟ್ನಿ ತಿನ್ನಿಸಿದರೆ ಎಲ್ಲಾ ಕಾಯಿಲೆ ವಾಸಿಯಾಗುತ್ತದೆ. ಹಾಗಾಗಿ ಈ ಚಟ್ನಿ ಇಲ್ಲಿನ ಹಳ್ಳಿಗರ ಮನೆಮದ್ದು ಎಂದರೆ ತಪ್ಪಾಗಲಾರದು.
ಕೆಂಪು ಇರುವೆ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?
-ಕೆಂಪು ಇರುವೆಯ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
-ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ.
-ಮೆದುಳು ಮತ್ತು ನರ ಮಂಡಲಕ್ಕೆ ಪ್ರಯೋಜನವನ್ನು ನೀಡುತ್ತದೆ.
-ಕೆಂಪು ಇರುವೆಗಳಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳು ಸಮೃದ್ಧವಾಗಿದೆ.
-ಈ ಚಟ್ನಿಯಲ್ಲಿ ಫಾರ್ಮಿಕ್ ಆ್ಯಸಿಡ್, ವಿಟಮಿನ್ ಬಿ12, ಜಿಂಕ್ ಸೇರಿದಂತೆ ಕಬ್ಬಿಣಾಂಶ ಅಧಿಕವಾಗಿರುತ್ತದೆ.
ಇದನ್ನೂ ಓದಿ: ಆಹಾರ ತಯಾರಿಸಲು ಮಣ್ಣಿನ ಪಾತ್ರೆ ಬೆಸ್ಟ್ ಎಂದ ಸರ್ಕಾರದ ಮಾರ್ಗಸೂಚಿ
ಚಗಳಿ ಚಣ್ನಿ ಮಾಡುವ ವಿಧಾನ;
ಇರುವೆಗಳನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಸ್ವಲ್ಪ ಶಾಕ ಕೊಟ್ಟು ಸೊಪ್ಪು ಸದೆಯಿಂದ ಬೇರ್ಪಡಿಸಿ. ಮತ್ತೊಂದು ಕಡೆ ಹಸಿ ಮೆಣಸಿನಕಾಯಿ ಅಥವಾ ಜೀರಿನ ಮೆಣಸಿನಕಾಯಿ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಹುರಿದುಕೊಂಡು ಚಗಳಿ ಜೊತೆ ಹಾಕಿ ರುಬ್ಬುವ ಕಲ್ಲಿನಲ್ಲಿ ಕಡೆಯಿರಿ. ಈ ವೇಳೆ ಅರಿಶಿನ ಮತ್ತು ಉಪ್ಪಿನ ಪುಡಿಯನ್ನು ಕೂಡ ಮಿಶ್ರಣ ಮಾಡಿ ಚೆನ್ನಾಗಿ ನುಣ್ಣಗೆ ಆಗುವ ತನಕ ಕಲ್ಲಿನಲ್ಲಿ ಬಿಸಿಕೊಳ್ಳಿ. ಚಗಳಿಯಲ್ಲಿ ಹುಳಿ ಅಂಶ ಇರುವುದರಿಂದ ಯಾವುದೇ ಹುಳಿ ಪದಾರ್ಥಗಳನ್ನು ಚಟ್ನಿಗೆ ಬಳಸುವ ಅವಶ್ಯಕತೆ ಇರುವುದಿಲ್ಲ. ರುಬ್ಬುವ ಕಲ್ಲಿನಲ್ಲಿ ಕಡೆದ ರುಚಿ ರುಚಿಯಾದ ಚಗಳಿ ಚಟ್ನಿ ಸವಿಯಲು ಸಿದ್ಧವಾಗುತ್ತದೆ. ಇದನ್ನು ಗಂಜಿ, ಅಕ್ಕಿ ರೊಟ್ಟಿ ಜೊತೆ ಸವಿಯಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ