Beauty Tips: ಪಾರ್ಲರ್ಗೆ ಹೋಗಿ ಹೆಚ್ಚು ಹಣ ಖರ್ಚು ಮಾಡುವ ಅಗತ್ಯವಿಲ್ಲ; ಮನೆಯಲ್ಲೇ ಮುಖದ ಕಾಂತಿ ಹೆಚ್ಚಿಸಿ
ಮಾರುಕಟ್ಟೆಯಲ್ಲಿ ಸಿಗುವ ಬ್ಲೀಚಿಂಗ್ ಕ್ರೀಂಗಳು ಎಲ್ಲರಿಗೂ ಸರಿ ಹೊಂದುವುದಿಲ್ಲ. ಹೀಗಾಗಿ ಮುಖದ ಕಾಂತಿಯನ್ನು ಹೆಚ್ಚಿಸಲು ಮನೆಯಲ್ಲಿ ನೀವೇ ಬ್ಲೀಚಿಂಗ್ ಮಾಡಿಕೊಳ್ಳುವುದು ಒಳಿತು.
ಬ್ಲೀಚಿಂಗ್ ಮಾಡಿದರೆ ಮುಖದ ಸೌಂದರ್ಯ ಹೆಚ್ಚುತ್ತದೆ. ಹೀಗಾಗಿ ತಿಂಗಳಿಗೊಮ್ಮೆ ಪಾರ್ಲರ್ಗೆ ಹೋಗಿ ಮುಖವನ್ನು ಬ್ಲೀಚ್ ಮಾಡಿಕೊಳ್ಳುತ್ತಾರೆ. ಪದೇ ಪದೇ ಬ್ಲೀಚ್ ಮಾಡಿಸಿಕೊಂಡಾಗ ಮುಖದ ಚರ್ಮ ಹಾಳಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬ್ಲೀಚಿಂಗ್ ಕ್ರೀಂಗಳು ಎಲ್ಲರಿಗೂ ಸರಿ ಹೊಂದುವುದಿಲ್ಲ. ಹೀಗಾಗಿ ಮುಖದ ಕಾಂತಿಯನ್ನು ಹೆಚ್ಚಿಸಲು ಮನೆಯಲ್ಲಿ ನೀವೇ ಬ್ಲೀಚಿಂಗ್ ಮಾಡಿಕೊಳ್ಳುವುದು ಒಳಿತು. ಪ್ರತಿ ತಿಂಗಳು ಪಾರ್ಲರ್ಗೆ ಹೋಗಿ ಸಾವಿರಾರು ದುಡ್ಡು ಸುರಿಯುವ ಬದಲು ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ ಮುಖದ ಕಾಂತಿಯನ್ನು ಹೆಚ್ಚಿಸಬಹುದು.
ಬ್ಲೀಚಿಂಗ್ ಮುಖದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಬಹುಮುಖ್ಯವಾಗಿ ಮುಖದ ಮೇಲಿರುವ ಅನಗತ್ಯ ಕೂದಲಿನ ಬಣ್ಣವನ್ನು ಬದಲಾಯಿಸುತ್ತದೆ. ಆದರೆ ಪಾರ್ಲರ್ನಲ್ಲಿ ಬಳಸುವ ಬ್ಲೀಚಿಂಗ್ ಕ್ರೀಂಗಳಲ್ಲಿ ಅನೇಕ ಕೆಮಿಕಲ್ ಇರುವುದರಿಂದ ಇದು ಎಲ್ಲರಿಗೂ ಸರಿಹೊಂದುವುದಿಲ್ಲ. ಹೀಗಾಗಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ಮನೆಯಲ್ಲಿಯೇ ಮುಖವನ್ನು ಸುಲಭವಾಗಿ ಕೆಲ ವಸ್ತುಗಳಿಂದ ಬ್ಲೀಚ್ ಮಾಡಬಹುದು.
ಮೊಸರು ಮೊಸರಿನಿಂದ ಮುಖವನ್ನು ಮಸಾಜ್ ಮಾಡಿದರೆ ಚರ್ಮದ ಬಣ್ಣ ಸುಧಾರಿಸುತ್ತದೆ. ಜೊತೆಗೆ ಚರ್ಮವನ್ನು ತೇವಗೊಳಿಸುತ್ತದೆ. ಮೊಸರಿಗೆ ಕಡಲೆ ಹಿಟ್ಟು ಮತ್ತು ಒಂದು ಚಿಟಕಿ ಅರಿಶಿನ ಸೇರಿಸಿ ಮಿಶ್ರಗೊಳಿಸಿ. ಸಿದ್ಧಗೊಂಡ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಮಸಾಜ್ ಮಾಡಬೇಕು. ಮಸಾಜ್ ಮಾಡಿದ ಬಳಿಕ ಕೆಲ ಸಮಯ ಅದನ್ನು ಮುಖದ ಮೇಲೆ ಬಿಡಬೇಕು. ನಂತರ ತಣ್ಣೀರಿನಿಂದ ಮುಖವನ್ನು ಚೆನ್ನಾಗಿ ತೊಳೆಯಿರಿ.
ಕಡಲೆ ಹಿಟ್ಟು, ಹಾಲು ಮತ್ತು ಅರಿಶಿನ ಕಡಲೆ ಹಿಟ್ಟು, ಹಾಲು ಮತ್ತು ಅರಿಶಿನವನ್ನು ಸೇರಿಸಿ ದಪ್ಪ ಪೇಸ್ಟ್ ರೀತಿ ಸಿದ್ಧಪಡಿಸಬೇಕು. ಪೇಸ್ಟ್ನ ಮೃದು ಕೈಗಳಿಂದ ಮುಖಕ್ಕೆ ಹಚ್ಚಿ. ಲಘುವಾಗಿ ಮಸಾಜ್ ಮಾಡಿ. ನಂತರ ಸ್ವಲ್ಪ ಸಮಯ ಮುಖದ ಮೇಲೆ ಬಿಡಿ. ಒಣಗಿದ ಬಳಿಕ ಕೈಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಮತ್ತೆ ಸ್ಕ್ರಬ್ ಮಾಡಿ, ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಕನಿಷ್ಠ ಎರಡು ದಿನಗಳವರೆಗೆ ಇದನ್ನು ಮಾಡಿದರೆ ಉತ್ತಮ ಫಲಿತಾಂಶ ಬೇಗ ಸಿಗುತ್ತದೆ.
ನಿಂಬೆ ಮತ್ತು ಜೇನುತುಪ್ಪ ನಿಂಬೆ ಮತ್ತು ಜೇನುತುಪ್ಪ ಮುಖದ ಬಣ್ಣವನ್ನು ಬದಲಾಯಿಸುವ ಗುಣವನ್ನು ಹೊಂದಿದೆ. ಜೇನುತುಪ್ಪ ಮತ್ತು ನಿಂಬೆಯನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿ. ಹಚ್ಚಿದ ಸುಮಾರು 20 ನಿಮಿಷ ಬಳಿಕ ಮುಖವನ್ನು ತೊಳೆಯಿರಿ. ಕಾಂತಿಯುತ ಮುಖ ನಿಮ್ಮದಾಗುತ್ತದೆ.
ಸೌತೆಕಾಯಿ ಮತ್ತು ಪುದೀನಾ ಮುಖದ ಕಾಂತಿಯನ್ನು ಹೆಚ್ಚಿಸಲು ಸೌತೆಕಾಯಿ ಮತ್ತು ಪುದೀನಾ ಹೆಚ್ಚು ಸಹಕಾರಿಯಾಗಿದೆ. 200 ಗ್ರಾಂ ಪುದೀನಾ ಎಲೆ ಮತ್ತು ಸ್ವಲ್ಪ ಸೌತೆಕಾಯಿ ತೆಗೆದುಕೊಂಡು ಪೇಸ್ಟ್ ರೀತಿ ಸಿದ್ಧಪಡಿಸಿ. ಇದಕ್ಕೆ ನಿಂಬೆ ರಸ ಸೇರಿಸಿ. ನಂತರ ಅದಕ್ಕೆ ಒಂದು ಕಪ್ ಗ್ರೀನ್ ಟೀ ಮತ್ತು ಮೂರು ಚಮಚ ಮೊಸರು ಬೆರೆಸಿ ತಣ್ಣಗಾಗಲು ಬಿಡಿ. ಬಳಿಕ ಪೇಸ್ಟ್ನ ಮುಖಕ್ಕೆ ಚೆನ್ನಾಗಿ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ.
ಇದನ್ನೂ ಓದಿ
Health Tips: ಸಿಟ್ರಸ್ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆಯೇ? ಇಲ್ಲಿದೆ ಮಾಹಿತಿ
(Bleach the face to increase radiance of face with natural things in home)