ಆಲ್ಝೈಮರ್ ಕಾಯಿಲೆ ನಿಯಂತ್ರಣಕ್ಕೆ ಬ್ಲೂಬೆರಿ ಹಣ್ಣು ಹೇಗೆ ಪ್ರಯೋಜನಕಾರಿ?
ಬ್ಲೂಬೆರಿ ಹಣ್ಣುಗಳು ಫೈಬರ್, ಪೊಟ್ಯಾಸಿಯಂ, ಫೋಲೇಟ್, ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ 6 ಅಂಶಗಳನ್ನು ಹೊಂದಿದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಬೆರಿ ಹಣ್ಣುಗಳು ಮೆದುಳಿನ ಅಸ್ವಸ್ಥತೆಗಳ ಅಪಾಯವನ್ನು ಹೇಗೆ ಕಡಿಮೆ ಮಾಡುತ್ತದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಬ್ಲೂಬೆರಿ ಹಣ್ಣುಗಳಲ್ಲಿ ಹೇರಳವಾಗಿರುವ ಪಾಲಿಫಿನಾಲಿಕ್ ಸಂಯುಕ್ತದಿಂದಾಗಿ ಅದನ್ನು ‘ಸೂಪರ್‌ಫ್ರೂಟ್’ ಎಂದು ಹೇಳಲಾಗುತ್ತದೆ. ಇದು ಉತ್ಕರ್ಷಣ ನಿರೋಧಕ ಸಾಮರ್ಥ್ಯವನ್ನು ಹೊಂದಿದೆ. ಬ್ಲೂಬೆರಿ ಹಣ್ಣುಗಳನ್ನು (Blueberries) ಅಮೆರಿಕಾ, ಕೆನಡಾ, ಚೀನಾ ಮತ್ತು ಚಿಲಿ ದೇಶಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬ್ಲೂಬೆರಿ ಹಣ್ಣುಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು, ಹೃದ್ರೋಗವನ್ನು ತಡೆಗಟ್ಟಲು, ನೆನಪಿನ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಇವುಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಬೆರಿಹಣ್ಣುಗಳಲ್ಲಿ ಕ್ಯಾಲ್ಸಿಯಂ, ರಂಜಕ, ಐರನ್, ಮೆಗ್ನೀಸಿಯಂ, ಮ್ಯಾಂಗನೀಸ್, ಸತು, ವಿಟಮಿನ್ ಕೆ ಅತ್ಯಧಿಕವಾಗಿರುತ್ತದೆ.
ಬ್ಲೂಬೆರಿ ಹಣ್ಣುಗಳು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಬ್ಲೂಬೆರಿ ಹಣ್ಣುಗಳು ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ. ಬ್ಲೂಬೆರಿ ಹಣ್ಣುಗಳು ರಕ್ತದ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಪರಿಣಾಮವನ್ನು ಹೊಂದಿದೆ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.
ಬ್ಲೂಬೆರಿ ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯನ್ನು ಹೊಂದಿದೆ. ಬ್ಲೂಬೆರಿ ಹಣ್ಣುಗಳು ಮೂಳೆಗಳು, ಕೀಲುಗಳ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಹಾಗೇ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬ್ಲೂಬೆರಿ ಹಣ್ಣುಗಳು ಮೆದುಳು ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಪ್ರಯೋಜನಕಾರಿ.
ಇದನ್ನೂ ಓದಿ: ಹುಣಸೆಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯ ಕೆಟ್ಟೀತು ಎಚ್ಚರ!
ಬ್ಲೂಬೆರಿ ಹಣ್ಣುಗಳು ಫೈಬರ್, ಪೊಟ್ಯಾಸಿಯಂ, ಫೋಲೇಟ್, ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ 6 ಅಂಶಗಳನ್ನು ಹೊಂದಿದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಬೆರಿ ಹಣ್ಣುಗಳು ಮೆದುಳಿನ ಅಸ್ವಸ್ಥತೆಗಳ ಅಪಾಯವನ್ನು ಹೇಗೆ ಕಡಿಮೆ ಮಾಡುತ್ತದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಬ್ಲೂಬೆರಿ ಹಣ್ಣುಗಳ ನಿಯಮಿತ ಸೇವನೆಯಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದು ಸಂಶೋಧನೆ ತಿಳಿಸಿದೆ. ಜರ್ನಲ್ ಆಫ್ ಅಗ್ರಿಕಲ್ಚರಲ್ ಆ್ಯಂಡ್ ಫುಡ್ ಕೆಮಿಸ್ಟ್ರಿಯಲ್ಲಿ ಪ್ರಕಟವಾದ ಅಧ್ಯಯನವು 12 ವಾರಗಳವರೆಗೆ ಪ್ರತಿದಿನ ಬ್ಲೂಬೆರಿ ಜ್ಯೂಸ್ ಸೇವಿಸಿದವರ ಜ್ಞಾಪಕ ಶಕ್ತಿಯಲ್ಲಿ ಹಲವು ಸುಧಾರಣೆಗಳು ಉಂಟಾಗಿವೆ ಎಂದು ತಿಳಿಸಿದೆ. ವಯಸ್ಸಾಗುತ್ತಿದ್ದಂತೆ ನೆನಪಿನ ಶಕ್ತಿ ಕೂಡ ಕುಂಠಿತವಾಗುತ್ತಾ ಬರುತ್ತದೆ. ಆನಲ್ಸ್ ಆಫ್ ನ್ಯೂರಾಲಜಿಯಲ್ಲಿನ ಅಧ್ಯಯನವು ಬೆರಿ ಹಣ್ಣುಗಳು ಮತ್ತು ಸ್ಟ್ರಾಬೆರಿಗಳನ್ನು ಸೇವಿಸುವುದರಿಂದ ವಯಸ್ಸಾದ ನಂತರ ನೆನಪಿನ ಶಕ್ತಿ ಕುಂದುವುದು 2.5 ವರ್ಷಗಳವರೆಗೆ ಮುಂದೂಡಲ್ಪಡುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ: ವಾಸನೆಯೆಂದು ಮುಖ ತಿರುಗಿಸಬೇಡಿ; ಮೂಲಂಗಿಯಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?
ಆಲ್ಝೈಮರ್ ಮತ್ತು ಪಾರ್ಕಿನ್ಸನ್‌ನಂತಹ ನ್ಯೂರೋ ಡಿಜನೆರೇಟಿವ್ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಬ್ಲೂಬೆರಿ ಹಣ್ಣುಗಳು ಸಹಾಯ ಮಾಡುತ್ತವೆ. ಬೆರಿ ಹಣ್ಣುಗಳಲ್ಲಿನ ಉತ್ಕರ್ಷಣ ನಿರೋಧಕಗಳು ಮೆದುಳಿನಲ್ಲಿ ವಿಷಕಾರಿ ಪ್ರೋಟೀನ್‌ಗಳ ಸಂಗ್ರಹವನ್ನು ಪ್ರತಿರೋಧಿಸುತ್ತದೆ.
ಬೆರಿ ಹಣ್ಣುಗಳು ವರ್ಷಪೂರ್ತಿ ಲಭ್ಯವಿರುತ್ತವೆ. ಅವುಗಳನ್ನು ನಿಮ್ಮ ಬೆಳಗಿನ ಓಟ್ ಮೀಲ್, ಮೊಸರು ಅಥವಾ ಸ್ಮೂಥಿಗೆ ಸೇರಿಸಿ ಸೇವಿಸಬಹುದು. ರಿಫ್ರೆಶ್ ಮತ್ತು ಉತ್ಕರ್ಷಣ ನಿರೋಧಕಭರಿತ ಪಾನೀಯಕ್ಕಾಗಿ ಒಂದು ಕಪ್ ಬ್ಲೂಬೆರಿ ಚಹಾವನ್ನು ಸೇವಿಸಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:50 pm, Mon, 16 October 23