ನೀವು ತಿನ್ನುವ ಪ್ರತಿಯೊಂದು ಆಹಾರವೂ ನಿಮ್ಮ ಮೆದುಳನ್ನು ದುರ್ಬಲಗೊಳಿಸುವ ಅಥವಾ ಪೋಷಿಸುವ ಸಾಮರ್ಥ್ಯ ಹೊಂದಿದೆ ಎಂಬುದು ನಿಮಗೆ ಗೊತ್ತಿದೆಯೇ? ನೀವು ಇಷ್ಟಪಡುವ ಸಿಹಿತಿಂಡಿಗಳಂತಹ ಆಹಾರಗಳು, ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬುಗಳು ನಿಮಗೆ ಮಾನಸಿಕವಾಗಿ ಮಬ್ಬು, ಪ್ರಕ್ಷುಬ್ಧತೆ ಮತ್ತು ಖಿನ್ನತೆಯನ್ನು ಉಂಟುಮಾಡಬಹುದು. ಆದರೆ ಸರಿಯಾದ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಮಾನಸಿಕ ಆರೋಗ್ಯ ಉತ್ತಮಗೊಳ್ಳಬಹುದು ಎಂಬುದು ನಿಮಗೆ ತಿಳಿದಿರಲಿ. ಹೀಗಾಗಿ, ನೀವು ಸೇವಿಸುವ ಆಹಾರ ನಿಮ್ಮ ಮೆದುಳಿನ ಬೆಳವಣಿಕೆ, ಕಾರ್ಯಕ್ಕೆ ಸಂಬಂಧಿಸಿರುತ್ತದೆ.
ಕೆಲವು ಆಹಾರಗಳು ವಿಶೇಷವಾಗಿ ಮೆದುಳಿನ ಕೋಶಗಳನ್ನು ರೂಪಿಸಲು, ಬೆಂಬಲಿಸಲು ಮತ್ತು ಪೋಷಿಸಲು ಅಗತ್ಯವಾದ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಕೆಲವು ಆಹಾರಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಮೆದುಳಿನ ಕೋಶಗಳನ್ನು ರಕ್ಷಿಸುತ್ತದೆ.
ಇದನ್ನೂ ಓದಿ: ನೆನಪಿನ ಶಕ್ತಿ, ಮೆದುಳಿನ ಆರೋಗ್ಯಕ್ಕೆ ಮನೆಯಲ್ಲೇ ತಯಾರಿಸಿದ 5 ಜ್ಯೂಸ್ಗಳು ಇಲ್ಲಿವೆ
ಮೆದುಳಿಗೆ ಯಾವ ರೀತಿಯ ಆಹಾರ ಒಳ್ಳೆಯದು?:
ಈ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಜ್ಞಾಪಕಶಕ್ತಿ ಮತ್ತು ಮೆದುಳನ್ನು ಹೆಚ್ಚಿಸಿಕೊಳ್ಳಬಹುದು.
– ಬಾದಾಮಿ ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.
– ವಾಲ್‌ನಟ್ಸ್ ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಹೆಚ್ಚಿನ ಸಸ್ಯ ಮೂಲವಾಗಿದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
– ಬೆರಿ ಹಣ್ಣುಗಳು ಕಲಿಕೆ ಮತ್ತು ಕೌಶಲಗಳನ್ನು ಉತ್ತೇಜಿಸುತ್ತದೆ.
– ಮೀನು ಮೆದುಳನ್ನು ಚುರುಕುಗೊಳಿಸುವ ಆಹಾರವಾಗಿದ್ದು, ಮೂಡ್ ಬೂಸ್ಟರ್ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಮೀನು ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಪರಿಪೂರ್ಣ ಆಹಾರವಾಗಿದೆ.
– ಮೊಟ್ಟೆಗಳು ಸ್ಮರಣೆ ಮತ್ತು ಕಲಿಕೆಗೆ ಸಹಕಾರಿಯಾದ ಆಹಾರವಾಗಿದೆ.
– ಅವಕಾಡೊಗಳು ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತವೆ.
– ಡಾರ್ಕ್ ಚಾಕೊಲೇಟ್ ಮೆಮೊರಿ, ಗಮನದ ಅವಧಿ, ಪ್ರತಿಕ್ರಿಯೆಯ ಸಮಯ ಮತ್ತು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ.
– ಅರಿಶಿನ ಆಲ್ಝೈಮರ್ನ ವಿರೋಧಿಯಾಗಿದ್ದು, ಇದು ಮೆದುಳಿನ ಕೋಶಗಳನ್ನು ಸರಿಪಡಿಸುತ್ತದೆ.
ಇದನ್ನೂ ಓದಿ: Custard Apple: ಚಳಿಗಾಲದ ಹಣ್ಣು ಸೀತಾಫಲ ತಿನ್ನುವುದರಿಂದ ಏನು ಉಪಯೋಗ?
ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಉತ್ತಮ ಪೋಷಣೆಯ ಅಗತ್ಯವಿದೆ. ಒಮೆಗಾ 3 ಕೊಬ್ಬಿನಾಮ್ಲಗಳು, ಸತು, ಸೆಲೆನಿಯಮ್, ಕೋಲೀನ್ ಮತ್ತು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಮೆದುಳನ್ನು ಹಲವಾರು ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗೇ, ಮೆಮೊರಿ, ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುತ್ತದೆ. ಪರೀಕ್ಷೆಯ ಸಮಯದಲ್ಲಿ ನಿಮ್ಮ ಮೆದುಳಿನ ಪೋಷಣೆಯನ್ನು ಹೆಚ್ಚಿಸಲು ಅಥವಾ ನಿಮ್ಮ ಕೆಲಸದಲ್ಲಿ ಚುರುಕಾಗಿರಲು ನೀವು ಬಯಸಿದರೆ ನಿಮ್ಮ ಆಹಾರದ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ. ಮೆದುಳನ್ನು ಉತ್ತೇಜಿಸುವ ಆಹಾರಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ತಿನ್ನುವುದು ನಿಮ್ಮ ಮೆದುಳಿನ ಆರೋಗ್ಯವನ್ನು ಹೆಚ್ಚಿಸಲು, ಅರಿವಿನ ಕೌಶಲ್ಯ ಮತ್ತು ಜ್ಞಾಪಕ ಶಕ್ತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಾಗಿ, ನಿಮ್ಮ ಆಹಾರವು ಮೆದುಳಿನ ಆರೋಗ್ಯವನ್ನು ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ