Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಹಸುಗೂಸಿನ ಎಳೆ ಚರ್ಮದ ಆರೈಕೆ ಮಾಡುವುದು ಹೇಗೆ?

Baby Skin Care: ರಾಸಾಯನಿಕಗಳು, ಸುಗಂಧ ದ್ರವ್ಯಗಳು, ಬಣ್ಣಗಳು, ಮಾರ್ಜಕಗಳು ಮತ್ತು ಮಗುವಿಗೆ ಬಳಸುವ ಉತ್ಪನ್ನಗಳಲ್ಲಿ ನವಜಾತ ಶಿಶುವಿನ ಚರ್ಮದ ಕಿರಿಕಿರಿ, ಶುಷ್ಕತೆ, ದದ್ದುಗಳನ್ನು ಉಂಟುಮಾಡುವ ಅಂಶಗಳಿರಬಹುದು. ಈ ಚರ್ಮದ ಸಮಸ್ಯೆಗಳಿಂದ ನಿಮ್ಮ ಮಗುವನ್ನು ರಕ್ಷಿಸಲು ನೀವು ಎಚ್ಚರ ವಹಿಸಬೇಕು.

ನಿಮ್ಮ ಹಸುಗೂಸಿನ ಎಳೆ ಚರ್ಮದ ಆರೈಕೆ ಮಾಡುವುದು ಹೇಗೆ?
ಹಸುಗೂಸಿನ ಎಳೆ ಚರ್ಮImage Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 14, 2023 | 3:54 PM

ನಿಮ್ಮ ಮನೆಯಲ್ಲಿ ನವಜಾತ ಶಿಶುವಿದ್ದರೆ ಅದರ ಕಾಳಜಿ ವಹಿಸುವುದು ಬಹಳ ಅಗತ್ಯ. ಅದರಲ್ಲೂ ಚಳಿಗಾಲದಲ್ಲಿ ಮಗುವಿನ ತ್ವಚೆಯ ಬಗ್ಗೆ ಹೆಚ್ಚಿನ ಎಚ್ಚರ ಅಗತ್ಯ. ನಿಮ್ಮ ಮಗುವನ್ನು ಬೆಚ್ಚಗಿಡುವುದು ಮತ್ತು ಪೋಷಣೆ ಮಾಡುವುದಕ್ಕೆ ನೀವು ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಏಕೆಂದರೆ, ನವಜಾತ ಶಿಶುವಿನ ಚರ್ಮವು ಸೂಕ್ಷ್ಮವಾಗಿರುತ್ತದೆ. ಮಗುವಿನ ರೋಗನಿರೋಧಕ ಶಕ್ತಿಯೂ ಕಡಿಮೆ ಇರುತ್ತದೆ.

ನವಜಾತ ಶಿಶುವಿಗೆ ದದ್ದುಗಳು ಉಂಟಾಗುವುದು ಸಾಮಾನ್ಯ. ರಾಸಾಯನಿಕಗಳು, ಸುಗಂಧ ದ್ರವ್ಯಗಳು, ಬಣ್ಣಗಳು, ಮಾರ್ಜಕಗಳು ಮತ್ತು ಮಗುವಿಗೆ ಬಳಸುವ ಉತ್ಪನ್ನಗಳಲ್ಲಿ ನವಜಾತ ಶಿಶುವಿನ ಚರ್ಮದ ಕಿರಿಕಿರಿ, ಶುಷ್ಕತೆ, ದದ್ದುಗಳನ್ನು ಉಂಟುಮಾಡುವ ಅಂಶಗಳಿರಬಹುದು. ಈ ಚರ್ಮದ ಸಮಸ್ಯೆಗಳಿಂದ ನಿಮ್ಮ ಮಗುವನ್ನು ರಕ್ಷಿಸಲು ನೀವು ಎಚ್ಚರ ವಹಿಸಬೇಕು.

ನವಜಾತ ಶಿಶುವು ಸುಕ್ಕುಗಟ್ಟಿದ ಚರ್ಮದೊಂದಿಗೆ ಜನಿಸುತ್ತದೆ. ಅವುಗಳ ದೇಹದ ಮೇಲೆ ವರ್ನಿಕ್ಸ್ ಎಂಬ ರಕ್ಷಣಾತ್ಮಕ ಹೊದಿಕೆ ಇರುತ್ತದೆ. ಇದು ನೈಸರ್ಗಿಕವಾಗಿ ಮೊದಲ ವಾರದಲ್ಲಿ ಸಿಪ್ಪೆಯ ರೂಪದಲ್ಲಿ ಮೇಲೇಳುತ್ತದೆ. ಅದನ್ನು ಉಜ್ಜುವುದು, ಲೋಷನ್ ಅಥವಾ ಕ್ರೀಮ್‌ಗಳನ್ನು ಹಚ್ಚುವ ಅಗತ್ಯವಿಲ್ಲ. ಇದು ಮಗುವಿನ ಚರ್ಮಕ್ಕೆ ಅಗತ್ಯವಾದ ಮೇಣದ ರೂಪದ ಅಂಶವಾಗಿದೆ.

ಇದನ್ನೂ ಓದಿ: ನಿಮ್ಮ ಮಗುವಿನ ಹೊಟ್ಟೆ ತುಂಬಿದೆಯೇ ಎಂದು ತಿಳಿಯುವುದು ಹೇಗೆ?

ಹಾಗೇ, ನಿಮ್ಮ ಮಗುವಿನ ಚರ್ಮದ ಕಾಳಜಿ ವಹಿಸಲು ನವಜಾತ ಶಿಶುವಿಗೆ ದಿನವೂ ಸ್ನಾನ ಮಾಡಿಸುವ ಅಗತ್ಯವಿಲ್ಲ. ಆರಂಭದ 4 ತಿಂಗಳು ವಾರಕ್ಕೆ 3 ಬಾರಿ ಸ್ನಾನ ಮಾಡಿಸಿದರೂ ಸಾಕು. ಉಳಿದ ದಿನಗಳಲ್ಲಿ ಸ್ಪಂಜ್​ನಿಂದ ಮಗುವಿನ ಮೈ ಒರೆಸಬಹುದು. ದಿನವೂ ಸ್ನಾನ ಮಾಡಿಸುವುದರಿಂದ ಮಗುವಿನ ಚರ್ಮವನ್ನು ರಕ್ಷಿಸುವ ನೈಸರ್ಗಿಕ ತೈಲಗಳನ್ನು ತೆಗೆದುಹಾಕುತ್ತದೆ. ಅದು ಮಗುವಿನ ಚರ್ಮವನ್ನು ದುರ್ಬಲವಾಗಿ ಮತ್ತು ಒಣಗುವಂತೆ ಮಾಡಬಹುದು.

ಮಗುವಿಗೆ ಡೈಪರ್​ ಹಾಕುವುದಾದರೆ ಅವುಗಳ ಮೈ ಹೆಚ್ಚೇನೂ ಗಲೀಜಾಗುವುದಿಲ್ಲ. ಡೈಪರ್ ಬದಲಾಯಿಸಿದಾಗ ಒದ್ದೆ ಬಟ್ಟೆಯಿಂದ ಅಥವಾ ವೆಟ್ ಟಿಶ್ಯೂದಿಂದ ಮೈಯನ್ನು ಒರೆಸಿಬಿಡಿ. ಆರಂಭಿಕ ತಿಂಗಳುಗಳಲ್ಲಿ ಮಗುವಿಗೆ ಪರಿಮಳಯುಕ್ತ ಲೋಷನ್, ಸಾಬೂನು ಮುಂತಾದ ಉತ್ಪನ್ನಗಳನ್ನು ಬಳಸಬೇಡಿ. ಇದು ನಿಮ್ಮ ಮಗುವಿನ ಸೂಕ್ಷ್ಮ ಚರ್ಮವನ್ನು ಕೆರಳಿಸಬಹುದು.

ಇದನ್ನೂ ಓದಿ: ಎದೆಹಾಲು ಕುಡಿಸುವವರು ಪುದೀನಾ ಸೇವಿಸುವುದು ಸುರಕ್ಷಿತವೇ?

ಮಗುವಿಗೆ ಯಾವುದೇ ಬಟ್ಟೆಗಳನ್ನು ಹಾಕುವ ಮೊದಲು ಅದನ್ನು ತೊಳೆಯಿರಿ. ಸುಗಂಧ ಮತ್ತು ಬಣ್ಣ ಮುಕ್ತವಾಗಿರುವ ಬೇಬಿ ಲಾಂಡ್ರಿ ಡಿಟರ್ಜೆಂಟ್‌ಗಳನ್ನು ಮಾತ್ರ ಬಳಸಿ. ಮಗುವಿನ ಬಟ್ಟೆ, ಹಾಸಿಗೆ ಮತ್ತು ಕಂಬಳಿಗಳನ್ನು ಪ್ರತ್ಯೇಕವಾಗಿ ತೊಳೆಯಿರಿ. ಅದನ್ನು ನಿಮ್ಮ ಬಟ್ಟೆಗಳೊಂದಿಗೆ ವಾಷಿಂಗ್ ಮಷಿನ್​ಗೆ ಹಾಕಬೇಡಿ. ಮಗುವಿಗೆ ಮೃದುವಾದ ಕಾಟನ್ ಬಟ್ಟೆಗಳನ್ನು ಮಾತ್ರ ಹಾಕಿ.

ಮಗುವಿನಲ್ಲಿ ಡೈಪರ್ ರ್ಯಾಶಸ್ ಸಾಮಾನ್ಯ. ಹೀಗಾಗಿ, ಆಗಾಗ ಡೈಪರ್​ಗಳನ್ನು ಬದಲಾಯಿಸುತ್ತಾ ಇರಿ. ಒದ್ದೆಯಾದ ಬಟ್ಟೆ ಹಾಕುವುದರಿಂದ, ಒದ್ದೆಯಾದ ಡೈಪರ್​ಗಳನ್ನು ಹಾಗೇ ಹಾಕಿರುವುದರಿಂದ ಮಗುವಿನ ಚರ್ಮದಲ್ಲಿ ಅಲರ್ಜಿ ಉಂಟಾಗಬಹುದು. ಆದಷ್ಟೂ ಬಟ್ಟೆಯ ಡೈಪರ್​ಗಳನ್ನು ಬಳಸಿ. ಮಗುವಿನ ಮೈಯಲ್ಲಿ ನೀರಿನ ಅಂಶವನ್ನು ಬಿಡಬೇಡಿ. ಕ್ಲೀನಾಗಿ ಒರೆಸಿ, ಚರ್ಮವನ್ನು ಡ್ರೈ ಆಗಿಡಿ. ಇದರಿಂದ ಚರ್ಮದ ಕಿರಿಕಿರಿ ಕಡಿಮೆಯಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ