ಚಳಿಗಾಲದಲ್ಲಿ ಮಗುವಿನ ಕೋಮಲ ತ್ವಚೆಯ ಕಾಳಜಿ ಮಾಡುವುದು ಹೇಗೆ?

ಮಗುವಿನ ಚರ್ಮವು ನಮಗಿಂತ ಹೆಚ್ಚು ಸೂಕ್ಷ್ಮವಾಗಿರುವುದರಿಂದ ಹವಾಮಾನ ಬದಲಾವಣೆಗಳಿಗೆ ಬೇಗ ಪ್ರತಿಕ್ರಿಯಿಸುತ್ತದೆ. ತಂಪಾದ ಗಾಳಿ ಮತ್ತು ಕಡಿಮೆ ಆರ್ದ್ರತೆಯ ಮಟ್ಟಗಳು ಅವರ ಮೃದುವಾದ ಚರ್ಮವನ್ನು ಒಣಗಿಸಬಹುದು. ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ಮಗುವಿನ ಚರ್ಮವನ್ನು ರಕ್ಷಿಸಲು ಸಲಹೆಗಳು ಇಲ್ಲಿವೆ.

ಚಳಿಗಾಲದಲ್ಲಿ ಮಗುವಿನ ಕೋಮಲ ತ್ವಚೆಯ ಕಾಳಜಿ ಮಾಡುವುದು ಹೇಗೆ?
ಮಗುವಿನ ತ್ವಚೆ
Follow us
ಸುಷ್ಮಾ ಚಕ್ರೆ
|

Updated on: Nov 11, 2023 | 6:54 PM

ಮಗುವಿನ ತ್ವಚೆ ಬಹಳ ಮೃದುವಾಗಿ, ಸೂಕ್ಷ್ಮವಾಗಿರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಮಗುವಿನ ಚರ್ಮ ಒಣಗಿದಂತಾಗುವುದು ಸಾಮಾನ್ಯ. ಶುಷ್ಕವಾದ ಚರ್ಮ ತುರಿಸಲಾರಂಭಿಸುತ್ತದೆ, ಕಿರಿಕಿರಿಯನ್ನು ಉಂಟುಮಾಡುತ್ತದೆ. ಆದ್ದರಿಂದ ಮಗುವಿನ ಚರ್ಮ ಮತ್ತು ಆರೋಗ್ಯದ ಬಗ್ಗೆ ಚಳಿಗಾಲದಲ್ಲಿ ವಿಶೇಷವಾದ ಗಮನ ನೀಡಬೇಕು. ಮಗುವಿನ ಚರ್ಮವು ನಮಗಿಂತ ಹೆಚ್ಚು ಸೂಕ್ಷ್ಮವಾಗಿರುವುದರಿಂದ ಹವಾಮಾನ ಬದಲಾವಣೆಗಳಿಗೆ ಬೇಗ ಪ್ರತಿಕ್ರಿಯಿಸುತ್ತದೆ. ತಂಪಾದ ಗಾಳಿ ಮತ್ತು ಕಡಿಮೆ ಆರ್ದ್ರತೆಯ ಮಟ್ಟಗಳು ಅವರ ಮೃದುವಾದ ಚರ್ಮವನ್ನು ಒಣಗಿಸಬಹುದು. ಆದ್ದರಿಂದ ಪೋಷಕರಾಗಿ ಚಳಿಗಾಲದಲ್ಲಿ ಅವರ ತ್ವಚೆಯ ಅಗತ್ಯತೆಗಳ ಬಗ್ಗೆ ನೀವು ಹೆಚ್ಚಿನ ಗಮನ ಹರಿಸಬೇಕು.

ಚಳಿಗಾಲದಲ್ಲಿ ನಿಮ್ಮ ಮಗುವಿನ ಚರ್ಮವನ್ನು ರಕ್ಷಿಸಲು ಸಲಹೆಗಳು ಇಲ್ಲಿವೆ:

ಸ್ನಾನದ ಸಮಯವನ್ನು ಕಡಿಮೆ ಮಾಡಿ:

ಸ್ನಾನದ ಕಾರಣದಿಂದ ಮಗುವಿನ ಚರ್ಮವು ಒಣಗುವುದನ್ನು ತಪ್ಪಿಸಲು ಸ್ನಾನದ ಅವಧಿಯನ್ನು ಕಡಿಮೆ ಮಾಡುವುದು ಉತ್ತಮ. ವಿಶೇಷವಾಗಿ ಮಲಗುವ ಮುನ್ನ ಸ್ನಾನ ಮಾಡಿಸಬೇಡಿ. ಹಾಗೇ, ಅತಿಯಾದ ಬಿಸಿನೀರಿನ ಸ್ನಾನವನ್ನು ಮಾಡಿಸಬೇಡಿ. ತೇವಾಂಶ ಪೂರ್ತಿಯಾಗಿ ಕಡಿಮೆಯಾಗದಂತೆ ತಡೆಯಲು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ.

ಇದನ್ನೂ ಓದಿ: ಚಳಿಗಾಲದಲ್ಲಿ ಒಣ ಚರ್ಮವನ್ನು ಕಾಪಾಡಿಕೊಳ್ಳಲು ಈ ರೀತಿ ಮಾಡಿ

ಜೆಂಟಲ್ ಕ್ಲೆನ್ಸರ್‌ಗಳನ್ನು ಆರಿಸಿ:

ನೀವು ಉತ್ತಮ ಬ್ರ್ಯಾಂಡ್​ನ ಬಾಡಿ ವಾಶ್ ಅಥವಾ ಸೋಪ್ ಅನ್ನೇ ಮಗುವಿನ ಸ್ನಾನಕ್ಕೆ ಬಳಸಿ. ಅದು ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ನಿಮ್ಮ ಮಗುವಿನ ಚರ್ಮವನ್ನು ಸಾಕಷ್ಟು ಹೈಡ್ರೀಕರಿಸುತ್ತದೆ. ಇದಕ್ಕೆ ಸಾವಯವ ಉತ್ಪನ್ನಗಳು ಪರಿಪೂರ್ಣ ಆಯ್ಕೆಯಾಗಿದೆ. ಏಕೆಂದರೆ ಅವುಗಳನ್ನು ಸಸ್ಯದ ಎಣ್ಣೆಗಳು ಮತ್ತು ಬೆಣ್ಣೆಗಳಿಂದ ತಯಾರಿಸಲಾಗುತ್ತದೆ.

ಚೆನ್ನಾಗಿ ತೇವಗೊಳಿಸಿ:

ಶುಷ್ಕತೆಯನ್ನು ತಡೆಗಟ್ಟಲು ಮತ್ತು ಶೀತ ವಾತಾವರಣದಿಂದ ಮಗುವಿನ ಸೂಕ್ಷ್ಮ ಚರ್ಮವನ್ನು ರಕ್ಷಿಸಲು ಸ್ನಾನಕ್ಕೂ ಮೊದಲು ಮತ್ತು ಮಲಗುವಾಗ ಪ್ರತಿದಿನ ಎಣ್ಣೆಯಿಂದ ಮಸಾಜ್ ಮಾಡಿ. ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ತೇವಾಂಶವನ್ನು ತುಂಬಲು ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Skin Care: ತ್ವಚೆಯನ್ನು ಸ್ವಚ್ಛಗೊಳಿಸುವುದು ಹೇಗೆ?; ಈ 7 ತಪ್ಪುಗಳನ್ನೆಂದೂ ಮಾಡಬೇಡಿ

ಕಾಟನ್ ಉಡುಪುಗಳನ್ನು ಹಾಕಿ:

ತಣ್ಣನೆಯ ಗಾಳಿ ತಾಗದಂತೆ ಕಾಪಾಡಲು ನಿಮ್ಮ ಮಗುವಿಗೆ ಕಾಟನ್​ನ ಪೂರ್ಣ ತೋಳಿನ ಬಟ್ಟೆಯನ್ನು ಹಾಕಿರಿ. ಮಗುವಿಗೆ ಕಿರಿಕಿರಿಯಾಗದಂತೆ ತಡೆಯಲು ಮೆತ್ತನೆಯ ಮತ್ತು ಉತ್ತಮ ಹತ್ತಿಯ ಬಟ್ಟೆಯನ್ನು ಹಾಕಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್