Skin Care: ತ್ವಚೆಯನ್ನು ಸ್ವಚ್ಛಗೊಳಿಸುವುದು ಹೇಗೆ?; ಈ 7 ತಪ್ಪುಗಳನ್ನೆಂದೂ ಮಾಡಬೇಡಿ

Beauty Tips: ನಿಮ್ಮ ಮುಖವನ್ನು ನೀರು, ಉತ್ತಮ ಫೇಸ್​ವಾಶ್ ಅಥವಾ ಸೂಕ್ತವಾದ ಕ್ಲೆನ್ಸರ್‌ನಿಂದ ಸರಿಯಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ. ನಿಮ್ಮ ಮುಖದ ಆರೋಗ್ಯ ಚೆನ್ನಾಗಿರಬೇಕೆಂದರೆ ನಿಮ್ಮ ಮುಖವನ್ನು ಬೆಳಿಗ್ಗೆ ಮತ್ತು ರಾತ್ರಿ ಎರಡೂ ಹೊತ್ತು ಸ್ವಚ್ಛಗೊಳಿಸಿ.

Skin Care: ತ್ವಚೆಯನ್ನು ಸ್ವಚ್ಛಗೊಳಿಸುವುದು ಹೇಗೆ?; ಈ 7 ತಪ್ಪುಗಳನ್ನೆಂದೂ ಮಾಡಬೇಡಿ
ಮುಖImage Credit source: iStock
Follow us
|

Updated on: Oct 23, 2023 | 4:15 PM

ಮುಖ ಸ್ವಚ್ಛವಾಗಿ, ಆರೋಗ್ಯಯುತವಾಗಿರಬೇಕೆಂದರೆ ನೀವು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ದಿನವೂ ನೀವು ಚರ್ಮದ ಬಗ್ಗೆ ಯಾವ ರೀತಿಯ ಕಾಳಜಿ ತೋರುತ್ತೀರಿ ಎಂಬುದು ಮುಖ್ಯವಾಗುತ್ತದೆ. ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳುವಲ್ಲಿ ಈ ದಿನಚರಿಯು ಪ್ರಮುಖ ಪಾತ್ರ ವಹಿಸುತ್ತದೆ. ಇದು ಮುಚ್ಚಿಹೋಗಿರುವ ಚರ್ಮದ ರಂಧ್ರಗಳು, ಬಿರುಕುಗಳು ಮತ್ತು ಮಂದ ಮೈಬಣ್ಣಕ್ಕೆ ಕಾರಣವಾಗುವ ಎಲ್ಲಾ ಕೊಳಕು, ಎಣ್ಣೆ ಮತ್ತು ಕಲ್ಮಶಗಳಿಂದ ನಿಮ್ಮ ಚರ್ಮವನ್ನು ತೊಡೆದುಹಾಕುತ್ತದೆ.

ಆದ್ದರಿಂದ ನಿಮ್ಮ ಮುಖವನ್ನು ನೀರು, ಉತ್ತಮ ಫೇಸ್​ವಾಶ್ ಅಥವಾ ಸೂಕ್ತವಾದ ಕ್ಲೆನ್ಸರ್‌ನಿಂದ ಸರಿಯಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ. ನಿಮ್ಮ ಮುಖದ ಆರೋಗ್ಯ ಚೆನ್ನಾಗಿರಬೇಕೆಂದರೆ ನಿಮ್ಮ ಮುಖವನ್ನು ಬೆಳಿಗ್ಗೆ ಮತ್ತು ರಾತ್ರಿ ಎರಡೂ ಹೊತ್ತು ಸ್ವಚ್ಛಗೊಳಿಸಿ. ಹೊಸ ಉತ್ಪನ್ನಗಳನ್ನು ಪ್ರಯತ್ನಿಸುವ ಮೊದಲು ಯಾವಾಗಲೂ ನಿಮ್ಮ ದೇಹದ ಬೇರೆ ಭಾಗದ ಚರ್ಮದ ಮೇಲೆ ಪ್ಯಾಚ್ ಪರೀಕ್ಷೆಯನ್ನು ಮಾಡಿ. ಇದು ಕಿರಿಕಿರಿ ಅಥವಾ ಅಲರ್ಜಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ನಿಮ್ಮ ಮುಖವನ್ನು ಸ್ವಚ್ಛಗೊಳಿಸುವಾಗ ಈ 7 ತಪ್ಪುಗಳನ್ನು ಎಂದಿಗೂ ಮಾಡಬೇಡಿ:

ಕಠಿಣವಾದ ಕ್ಲೆನ್ಸರ್‌ಗಳನ್ನು ಬಳಸಬೇಡಿ:

ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಯಾವಾಗಲೂ ಸೌಮ್ಯವಾದ ಸೋಪ್ ಮತ್ತು ಫೇಸ್ ವಾಶ್ ಬಳಸಿ. ರಾಸಾಯನಿಕವಿರುವ ಸೋಪು ಮತ್ತು ಫೇಸ್​ವಾಶ್ ನಿಮ್ಮ ಮುಖದಲ್ಲಿನ ಅಗತ್ಯವಾದ ನೈಸರ್ಗಿಕ ತೈಲಗಳನ್ನು ತೆಗೆದುಹಾಕಬಹುದು. ಇದು ಚರ್ಮದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಇದು ಶುಷ್ಕತೆ, ಕಿರಿಕಿರಿ ಮತ್ತು ಉರಿಯೂತಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಹಾರ್ಮೋನುಗಳ ಬದಲಾವಣೆಯಿಂದ ತ್ವಚೆಯ ಕಾಂತಿ ಕಡಿಮೆಯಾಗುತ್ತಾ?

ಅತಿಯಾಗಿ ಚರ್ಮವನ್ನು ಸ್ವಚ್ಛಗೊಳಿಸಬೇಡಿ:

ಅತಿಯಾಗಿ ಮುಖ ತೊಳೆಯುವುದು ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ. ನಿಮ್ಮ ಮುಖವನ್ನು ಅತಿಯಾಗಿ ತೊಳೆಯುವುದು, ವಿಶೇಷವಾಗಿ ಕಠಿಣವಾದ ಕ್ಲೆನ್ಸರ್ಗಳನ್ನು ಹಚ್ಚಿ ತೊಳೆಯುವುದರಿಂದ ಚರ್ಮ ಹಾಳಾಗುತ್ತದೆ. ಇದು ಅದರ ನೈಸರ್ಗಿಕ ಪಿಹೆಚ್​ ಮಟ್ಟವನ್ನು ಅಡ್ಡಿಪಡಿಸುತ್ತದೆ.

ನಿಮ್ಮ ಚರ್ಮದ ಪ್ರಕಾರವನ್ನು ಗಮನಿಸಿ:

ನಿಮ್ಮ ಚರ್ಮದ ಪ್ರಕಾರವನ್ನು ನಿರ್ಲಕ್ಷಿಸುವುದು ಹಾನಿಗೆ ಕಾರಣವಾಗಬಹುದು. ನಿಮ್ಮದು ಒಣ ಚರ್ಮವೋ, ಆಯ್ಲಿ ಚರ್ಮವೋ ಅಥವಾ ನಾರ್ಮಲ್ ಚರ್ಮವೋ ಎಂಬುದನ್ನು ತಿಳಿದುಕೊಂಡು ನಂತರ ಅದಕ್ಕೆ ಸರಿಯಾಗಿ ಹೊಂದುವ ಫೇಸ್​ವಾಶ್, ಮೇಕಪ್ ಉತ್ಪನ್ನಗಳನ್ನು ಬಳಸಿ.

ಸ್ವಚ್ಛವಾದ ಟವೆಲ್ ಬಳಸಿ:

ನಿಮ್ಮ ಮುಖವನ್ನು ಸ್ವಚ್ಛಗೊಳಿಸಿದ ನಂತರ ಒಣಗಿಸುವುದು ಮುಖ್ಯ. ಹಾಗೆ ಮಾಡಲು ಯಾವಾಗಲೂ ಕ್ಲೀನ್ ಆಗಿರುವ ಟವೆಲ್ ಅನ್ನು ಬಳಸಲು ಮರೆಯದಿರಿ. ಗಲೀಜಾದ ಟವೆಲ್‌ಗಳನ್ನು ಬಳಸುವುದರಿಂದ ನಿಮ್ಮ ಚರ್ಮಕ್ಕೆ ಬ್ಯಾಕ್ಟೀರಿಯಾ ಮತ್ತು ಕೊಳಕು ಅಂಟಿಕೊಳ್ಳುತ್ತದೆ. ಇದು ಸೋಂಕುಗಳು, ಮೊಡವೆಗಳು ಅಥವಾ ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು.

ಸನ್​ಸ್ಕ್ರೀನ್ ಲೋಷನ್ ಹಚ್ಚಲು ಮರೆಯಬೇಡಿ:

ಬಿಸಿಲಿನಲ್ಲಿ ಮಾತ್ರವಲ್ಲದೆ ಮೋಡ ಕವಿದ ದಿನಗಳಲ್ಲಿಯೂ ಸಹ ಯುವಿ ಕಿರಣಗಳು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು. ಮುಖ ತೊಳೆದ ನಂತರ ಸನ್‌ಸ್ಕ್ರೀನ್ ಅನ್ನು ಹಚ್ಚುವುದನ್ನು ಮರೆಯಬೇಡಿ. ಇದು ಸನ್‌ಬರ್ನ್, ಅಕಾಲಿಕ ವಯಸ್ಸಾದ ಮತ್ತು ಚರ್ಮದ ಕ್ಯಾನ್ಸರ್ ಅಪಾಯವನ್ನು ಉಂಟುಮಾಡುವ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.

ಇದನ್ನೂ ಓದಿ: ಕಾಂತಿಯುತ ಚರ್ಮ ನಿಮ್ಮದಾಗಲು ದಿನಕ್ಕೆ ಎಷ್ಟು ನೀರು ಕುಡಿಯಬೇಕು?

ಬಿಸಿ ನೀರು ಬಳಸಬೇಡಿ:

ಬಿಸಿನೀರು ಚರ್ಮದ ನೈಸರ್ಗಿಕ ತಡೆಗೋಡೆಯನ್ನು ದುರ್ಬಲಗೊಳಿಸುತ್ತದೆ. ಇದು ಹೆಚ್ಚಿನ ಸಂವೇದನೆ, ಶುಷ್ಕತೆ ಮತ್ತು ಕೆಂಪು ಕಲೆಗೆ ಕಾರಣವಾಗುತ್ತದೆ. ಇದು ಚರ್ಮದ ನೈಸರ್ಗಿಕ ತೈಲಗಳನ್ನು ತೆಗೆದುಹಾಕುತ್ತದೆ. ಇದರಿಂದ ಚರ್ಮ ಬಿರುಕು ಬಿಟ್ಟಂತೆ ಕಾಣುತ್ತದೆ. ತಣ್ಣೀರನ್ನು ಬಳಸುವುದರಿಂದ ಮೊಡವೆಗಳನ್ನು ತಡೆಗಟ್ಟುವುದು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗಾಗಿ, ಮುಖವನ್ನು ಯಾವಾಗಲೂ ತಣ್ಣೀರಿನಲ್ಲೇ ತೊಳೆದುಕೊಳ್ಳಿ.

ಮೇಕಪ್ ತೆಗೆಯದೆ ಮಲಗಬೇಡಿ:

ಕೆಲವರು ಮಲಗುವಾಗ ಮೇಕಪ್ ಅನ್ನು ಸರಿಯಾಗಿ ತೆಗೆಯುವುದಿಲ್ಲ. ಮಲಗುವ ಮೊದಲು ಮೇಕ್ಅಪ್ ಅನ್ನು ತೆಗೆದುಕೊಳ್ಳದಿದ್ದರೆ ಅದು ಚರ್ಮದ ರಂಧ್ರಗಳನ್ನು ಮುಚ್ಚಬಹುದು, ಮೊಡವೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ಸಮಸ್ಯೆಗಳನ್ನು ತಪ್ಪಿಸಲು ಮಲಗುವ ಮುನ್ನ ನಿಮ್ಮ ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಮರೆಯಬೇಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ