Soaked walnuts vs soaked almonds: ನೆನೆಸಿದ ವಾಲ್ನಟ್ ಮತ್ತು ಬಾದಾಮಿಯಲ್ಲಿ ಯಾವುದು ನಿಮಗೆ ಆರೋಗ್ಯಕರ?
ಬಾದಾಮಿ ಮತ್ತು ವಾಲ್ನಟ್ ಎರಡೂ ಅಗತ್ಯ ಪೋಷಕಾಂಶಗಳ ಶಕ್ತಿ ಕೇಂದ್ರಗಳಾಗಿವೆ ಮತ್ತು ನೆನೆಸಿಟ್ಟು ತಿನ್ನುವುದರಿಂದ ತಮ್ಮದೇ ಆದ ವಿಶಿಷ್ಟ ಗುಣಗಳನ್ನು ನೀಡುತ್ತವೆ. ನಿಮಗೆ ಯಾವುದು ಉತ್ತಮ ಎಂದು ಕಂಡುಕೊಳ್ಳಲು, ಹೆಲ್ತ್ ಶಾಟ್ಸ್ ಅಕಾರ್ಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಆಹಾರ ತಜ್ಞೆ ಬರ್ಖಾ ಅಹುಜಾ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಆರೋಗ್ಯಕ್ಕಿಂತ ಮುಖ್ಯವಾದದ್ದು ಯಾವುದು ಇಲ್ಲ. ಅದನ್ನು ಕಾಪಾಡಿಕೊಳ್ಳಲು ನಾವು ಒಂದಿಲ್ಲೊಂದು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ. ಅಂತಹ ಪೌಷ್ಟಿಕಾಂಶ ಭರಿತ ಆಹಾರಗಳಲ್ಲಿ ವಾಲ್ನಟ್ ಮತ್ತು ಬಾದಾಮಿಯೂ ಸೇರಿವೆ. ಈ ಎರಡೂ ಕೂಡ ಉನ್ನತ ದರ್ಜೆಯ ಆಹಾರಗಳಾಗಿವೆ. ನೀವು ಫಿಟ್ನೆಸ್ ಪ್ರಿಯರಾಗಿರಲಿ ಅಥವಾ ಉತ್ತಮ ಆರೋಗ್ಯ ಆಯ್ಕೆಗಳನ್ನು ಮಾಡಲು ಪ್ರಯತ್ನಿಸುತ್ತಿರುವವರಾಗಿರಲಿ, ಈ ಜನಪ್ರಿಯ ಬೀಜ ಅಥವಾ ಡ್ರೈ ಫ್ರೂಟ್ಸ್ ಬಗ್ಗೆ ನೀವು ಕೇಳಿರಬೇಕು. ಆದರೆ ಈ ಎರಡು ಸೂಪರ್ ಫುಡ್ ಗಳಲ್ಲಿ ಯಾವುದು ಸರ್ವೋಚ್ಚವಾಗಿರುತ್ತದೆ ಅಂದರೆ ಇವೆರಡರಲ್ಲಿ ಯಾವುದು ಅತ್ಯುತ್ತಮ ಎಂದು ನಿಮಗೆ ತಿಳಿದಿದೆಯಾ? ನೆನೆಸಿದ ಬಾದಾಮಿಯೋ ಅಥವಾ ನೆನೆಸಿದ ವಾಲ್ನಟ್? ಬಾದಾಮಿ ಮತ್ತು ವಾಲ್ನಟ್ ಎರಡೂ ಅಗತ್ಯ ಪೋಷಕಾಂಶಗಳ ಶಕ್ತಿ ಕೇಂದ್ರಗಳಾಗಿವೆ ಮತ್ತು ನೆನೆಸಿಟ್ಟು ತಿನ್ನುವುದರಿಂದ ತಮ್ಮದೇ ಆದ ವಿಶಿಷ್ಟ ಗುಣಗಳನ್ನು ನೀಡುತ್ತವೆ. ನಿಮಗೆ ಯಾವುದು ಉತ್ತಮ ಎಂದು ಕಂಡುಕೊಳ್ಳಲು, ಹೆಲ್ತ್ ಶಾಟ್ಸ್ ಅಕಾರ್ಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಆಹಾರ ತಜ್ಞೆ ಬರ್ಖಾ ಅಹುಜಾ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ನೆನೆಸಿದ ಬಾದಾಮಿಯ ಆರೋಗ್ಯ ಪ್ರಯೋಜನಗಳೇನು?
1. ಜೀರ್ಣಕ್ರಿಯೆಗೆ ಒಳ್ಳೆಯದು:
ನೆನೆಸಿದ ಬಾದಾಮಿ ಜೀರ್ಣಿ ಕ್ರಿಯೆಗೆ ಉತ್ತಮ. ಈ ಪ್ರಕ್ರಿಯೆಯು ಫೈಟಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ, ನೆನೆಸಿದ ಬಾದಾಮಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಸೌಮ್ಯವಾಗಿ ಪ್ರತಿಕ್ರಿಯಿಸಬಹುದು, ಆದರೆ ಹೊಟ್ಟೆಗೆ ಸಂಬಂಧಿಸಿದಂತೆ ಸೂಕ್ಷ್ಮ ಸಮಸ್ಯೆಗಳನ್ನು ಹೊಂದಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ.
2. ಪೋಷಕಾಂಶಗಳಿಂದ ಸಮೃದ್ಧವಾಗಿದೆ:
ನೆನೆಸಿದ ಬಾದಾಮಿ ಕಿಣ್ವಗಳನ್ನು ಸಕ್ರಿಯಗೊಳಿಸುವ ಗುಣಲಕ್ಷಣಗಳನ್ನು ಹೊಂದಿರುತ್ತದೆ ಮತ್ತು ಜೀವಸತ್ವಗಳು ಮತ್ತು ಖನಿಜಗಳಂತಹ ಪೋಷಕಾಂಶಗಳ ಜೈವಿಕ ಲಭ್ಯತೆಯನ್ನು ಹೆಚ್ಚಿಸುತ್ತದೆ.
3. ಜಗಿಯಲು ಸುಲಭ:
ನೆನೆಸಿದ ಬಾದಾಮಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಉತ್ತಮ ಕಾರಣವೆಂದರೆ ಅವು ಮೃದುವಾಗಿದ್ದು, ನೆನೆಸಿದ ಬಾದಾಮಿ ಹೆಚ್ಚು ರುಚಿಕರವಾಗಿರುತ್ತದೆ ವಿಶೇಷವಾಗಿ ಹಲ್ಲಿನ ಸಮಸ್ಯೆ ಇರುವವರಿಗೆ ಇದು ತುಂಬಾ ಉತ್ತಮ ಎಂದು ತಜ್ಞರು ಹೇಳುತ್ತಾರೆ.
ನೆನೆಸಿದ ವಾಲ್ನಟ್ನ ಆರೋಗ್ಯ ಪ್ರಯೋಜನಗಳು ಯಾವುವು?
ಕಚ್ಚಾ ವಾಲ್ನಟ್ಗಳನ್ನು ನೀರಿನಲ್ಲಿ ನೆನೆಸುತ್ತವೆ. ವಾಲ್ನಟ್ಗಳು ಬಾದಾಮಿಯಷ್ಟು ಫೈಟಿಕ್ ಆಮ್ಲವನ್ನು ಹೊಂದಿಲ್ಲವಾದರೂ, ನೆನೆಸುವುದು ಇನ್ನೂ ಕೆಲವು ಪ್ರಯೋಜನಗಳನ್ನು ನೀಡುತ್ತದೆ. ನೆನೆಸಿದ ವಾಲ್ನಟ್ನ ಪ್ರಯೋಜನಗಳು ಇಲ್ಲಿವೆ:
1. ಕಹಿಯನ್ನು ಕಡಿಮೆ ಮಾಡುತ್ತದೆ:
ವಾಲ್ನಟ್ಗಳ ಕಹಿ ರುಚಿ ನಿಮಗೆ ಇಷ್ಟವಿಲ್ಲವೇ? ನೈಸರ್ಗಿಕ ಕಹಿಯನ್ನು ಕಡಿಮೆ ಮಾಡಲು ನೀವು ಅವುಗಳನ್ನು ರಾತ್ರಿಯಿಡೀ ನೆನೆಸಿಡಿ. ಇದರಿಂದ ಕಹಿಯಂಶ ಅಷ್ಟಾಗಿ ನಿಮ್ಮ ಅರಿವಿಗೆ ಬರುವುದಿಲ್ಲ.
2. ಜೀರ್ಣಕ್ರಿಯೆಗೆ ಒಳ್ಳೆಯದು:
ನೆನೆಸಿದ ಬಾದಾಮಿಯಂತೆಯೇ, ನೆನೆಸಿದ ವಾಲ್ನಟ್ಗಳು ಸಹ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು. ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟುಮಾಡುವ ಸಂಯುಕ್ತಗಳನ್ನು ತಡೆಯುತ್ತದೆ ಎಂದು ಅಹುಜಾ ಹೇಳುತ್ತಾರೆ.
3. ನಿಮ್ಮನ್ನು ಹೈಡ್ರೇಟ್ ಆಗಿರಿಸುತ್ತದೆ:
ನೆನೆಸುವಾಗ ವಾಲ್ನಟ್ಗಳು ಸಾಕಷ್ಟು ನೀರನ್ನು ಹೀರಿಕೊಳ್ಳುತ್ತವೆ, ಇದು ವಾಲ್ನಟ್ಗಳು ಸ್ವಲ್ಪ ದಪ್ಪವಾಗಿಸುತ್ತದೆ ಮತ್ತು ಸೇವಿಸಲು ಹೆಚ್ಚು ಹೈಡ್ರೇಟ್ ಮಾಡುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಮುಖಕ್ಕೆ ಟೊಮ್ಯಾಟೋ ಹಣ್ಣು ಹಚ್ಚಿಕೊಂಡರೆ ಏನಾಗುತ್ತದೆ?
ನೆನೆಸಿದ ಬಾದಾಮಿ ಮತ್ತು ನೆನೆಸಿದ ವಾಲ್ನಟ್: ಯಾವುದು ಆರೋಗ್ಯಕರ?
ನೆನೆಸಿದ ಬಾದಾಮಿ ಮತ್ತು ನೆನೆಸಿದ ವಾಲ್ನಟ್ಗಳ ನಡುವಿನ ಆಯ್ಕೆಯು ನಿಮ್ಮ ನಿರ್ದಿಷ್ಟ ಆಹಾರದ ಅಗತ್ಯಗಳು ಮತ್ತು ಆದ್ಯತೆಗಳನ್ನು ಅವಲಂಬಿಸಿರುತ್ತದೆ:
1. ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ:
ನೀವು ಜೀರ್ಣಕಾರಿ ಸಮಸ್ಯೆಗಳನ್ನು ಅಥವಾ ಹೊಟ್ಟೆಗೆ ಸಂಬಂಧಿಸಿದಂತೆ ಕಿರಿಕಿರಿ ಹೊಂದಿರುವವರಿಗೆ ನೆನೆಸಿದ ಬಾದಾಮಿ ಮತ್ತು ನೆನೆಸಿದ ವಾಲ್ನಟ್ ಎರಡೂ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿಯಾಗಿದೆ.
2. ಪೋಷಕಾಂಶದ ಪ್ರಯೋಜನಗಳು:
ನೆನೆಸಿದ ಬಾದಾಮಿ ಮತ್ತು ನೆನೆಸಿದ ವಾಲ್ನಟ್ ಎರಡೂ ಪೌಷ್ಠಿಕಾಂಶದ ಪ್ರಯೋಜನಗಳನ್ನು ನೀಡುತ್ತವೆ, ಆದರೆ ಬಾದಾಮಿ ವಿಟಮಿನ್ ಇ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ, ಆದರೆ ವಾಲ್ನಟ್ಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಹೆಚ್ಚಾಗಿರುತ್ತವೆ. ನಿಮ್ಮ ನಿರ್ದಿಷ್ಟ ಪೋಷಕಾಂಶಗಳ ಅವಶ್ಯಕತೆಗಳನ್ನು ಪರಿಗಣಿಸಿ ಇದನ್ನು ಬಳಸಬಹುದು.
3. ಪಾಕವಿಧಾನಗಳು:
ಇವೆರಡರ ಆಯ್ಕೆಯು ನೀವು ಅವುಗಳನ್ನು ಬಳಸಲು ಯೋಜಿಸಿರುವ ಪಾಕವಿಧಾನಗಳನ್ನು ಅವಲಂಬಿಸಿರುತ್ತದೆ. ನೆನೆಸಿದ ಬಾದಾಮಿ ಸ್ಮೂಥಿಗಳು ಮತ್ತು ಬೇಕಿಂಗ್ಗೆ ಉತ್ತಮವಾಗಿದೆ, ಆದರೆ ನೆನೆಸಿದ ವಾಲ್ನಟ್ಗಳನ್ನು ಸಲಾಡ್ಗಳಲ್ಲಿ ಅಥವಾ ವಿವಿಧ ಭಕ್ಷ್ಯಗಳಿಗೆ ಸೇರಿಸಬಹುದು ಎಂದು ಆಹಾರ ತಜ್ಞರು ಹೇಳುತ್ತಾರೆ.
ಅಂತಿಮವಾಗಿ, ನೆನೆಸಿದ ಬಾದಾಮಿ ಮತ್ತು ನೆನೆಸಿದ ವಾಲ್ನಟ್ಗಳ ನಡುವಿನ ಆಯ್ಕೆಯು ವೈಯಕ್ತಿಕ ರುಚಿ ಮತ್ತು ಆಹಾರದ ಆಯ್ಕೆಗಳಿಗೆ ಬದ್ಧವಾಗಿರುತ್ತದೆ. ನಿಮ್ಮ ಆಹಾರದಲ್ಲಿ ಎರಡನ್ನೂ ಸೇರಿಸುವ ಮೂಲಕ ನೀವು ಇವುಗಳ ಪ್ರಯೋಜನಗಳನ್ನು ಆನಂದಿಸಬಹುದು. ಇವೆರಡೂ ಸಮತೋಲಿತ ಮತ್ತು ಆರೋಗ್ಯಕರ ಆಹಾರದ ಭಾಗವಾಗಬಹುದಾದ ಪೌಷ್ಟಿಕ ಆಯ್ಕೆಗಳಾಗಿವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: