ಮಜ್ಜಿಗೆ ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?; ಕುತೂಹಲಕರ ಅಂಶಗಳು ಇಲ್ಲಿವೆ

Buttermilk Benefits: ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದ್ರೆ ನಿಜವಾಗಿಯೂ ಆಶ್ಚರ್ಯ ಪಡುತ್ತೀರಾ. ಹಾಗಿರುವಾಗ ಮಜ್ಜಿಗೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬ ಮಾಹಿತಿ ಇಲ್ಲಿದೆ ತಿಳಿಯೋಣ.

ಮಜ್ಜಿಗೆ ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?; ಕುತೂಹಲಕರ ಅಂಶಗಳು ಇಲ್ಲಿವೆ
ಮಜ್ಜಿಗೆ
Edited By:

Updated on: Nov 25, 2021 | 12:05 PM

ಸಾಮಾನ್ಯವಾಗಿ ಮಜ್ಜಿಗೆಯಿಂದ ತಯಾರಿಸಿದ ಅಡುಗೆ ಎಲ್ಲರಿಗೂ ಹೆಚ್ಚು ಇಷ್ಟವಾಗುತ್ತದೆ. ಹಸಿದಾಗಲೂ ಮೊದಲು ನೆನಪಾಗುವುದು ಮಜ್ಜಿಗೆ. ಹೊಲದಲ್ಲಿ ದುಡಿದು ದಣಿದು ಮನೆಗೆ ಬಂದಾಗ ತಂಪಾದ ಮಜ್ಜಿಗೆ (Butter Milk) ಕುಡಿದು ವಿಶ್ರಾಂತಿ ಪಡೆದರೆ ದೇಹದ ದಣಿವೆಲ್ಲಾ ಮಾಯವಾಗುತ್ತೆ! ಇನ್ನು ಕೆಲವರು ಮಸಾಲಾ ಮಜ್ಜಿಗೆ ಮಾಡಿಯೂ ಸವಿಯುತ್ತಾರೆ. ಈ ಮಜ್ಜಿಗೆ ರುಚಿಯೂ ಹೌದು ಜೊತೆಗೆ ಆರೋಗ್ಯ ಪ್ರಯೋಜನಗಳನ್ನೂ (Health Tips) ನೀಡುತ್ತದೆ. ಹಾಗಿರುವಾಗ ಮಜ್ಜಿಗೆ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ? ಕುತೂಹಲಕರ ಸಂಗತಿಗಳು ಈ ಕೆಳಗಿನಂತಿದೆ ತಿಳಿಯೋಣ.

ಬೆಣ್ಣೆ ತೆಗೆದ ಮಜ್ಜಿಗೆಯಲ್ಲಿ ಆರೋಗ್ಯಕರ ಕಾರ್ಬೋಹೈಡ್ರೇಟ್​ ಮತ್ತು ಲ್ಯಾಕ್ಟೋಸ್ ಇರುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಯಮಿತವಾದ ಆಹಾರದೊಂದಿಗೆ ಮಜ್ಜಿಗೆ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ಮೂಳೆಗಳನ್ನು ಬಲಪಡಿಸುತ್ತದೆ. ಇದಾಗ್ಯೂ ತೂಕ ಇಳಿಸಿಕೊಳ್ಳಲು ಮಜ್ಜಿಗೆ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ.

ಮಜ್ಜಿಗೆ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಈ ಆರೋಗ್ಯಕರ ಬ್ಯಾಕ್ಟೀರಿಯಾಗಳು ಸಹಾಯ ಮಾಡುತ್ತವೆ. ಆದ್ದರಿಂದ ಇದು ಅಜೀರ್ಣ ಮತ್ತು ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ.

ಉತ್ತಮ ಬ್ಯಾಕ್ಟೀರಿಯಾವು ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯನ್ನು ತಡೆಯುತ್ತದೆ. ಜೊತೆಗೆ ಮಜ್ಜಿಗೆಯಲ್ಲಿ ವಿಟಮಿನ್ ಡಿ ಅಂಶವಿದ್ದು, ಇದು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಮಜ್ಜಿಗೆ ಸೇವನೆಯು ಮಹಿಳೆಯರಿಗೆ ಒಳ್ಳೆಯದು. ಬ್ರಿಟಿಷ್ ಮೆಡಿಕಲ್ ಜರ್ನಲ್​ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮಜ್ಜಿಗೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ತಿಳಿದು ಬಂದಿದೆ. ಮಜ್ಜಿಗೆ ಫ್ಯಾಟ್ ಬರ್ನರ್ ಆಗಿ ಕೆಲಸ ಮಾಡುವುದರಿಂದ ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ.

ಇದನ್ನೂ ಓದಿ:

Eye Health: ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆಯೇ? ಕಣ್ಣುಗಳ ಆರೋಗ್ಯ ಸುರಕ್ಷತೆಗೆ ಇಲ್ಲಿವೆ ಸಲಹೆಗಳು

Child Health: ಮಕ್ಕಳಲ್ಲಿ ತಲೆನೋವಿನ ಸಮಸ್ಯೆ ನಿರ್ಲಕ್ಷ್ಯಿಸಬೇಡಿ; ಮಾನಸಿಕ ಅಸ್ವಸ್ಥತೆಯ ಲಕ್ಷಣವೂ ಆಗಿರಬಹುದು ಎಚ್ಚರ!

Published On - 12:04 pm, Thu, 25 November 21