AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ಉಪ್ಪಿನ ರಹಸ್ಯ! ಕಡಿಮೆ ಉಪ್ಪು ತಿಂದರೆ ತೂಕ ಇಳಿಸಿಕೊಳ್ಳಬಹುದಂತೆ, ನಿಜವೇ?

ಉಪ್ಪು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿದರೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಮತ್ತು ಅದಕ್ಕೆ ವ್ಯತಿರಿಕ್ತವಾಗಿ ಹೆಚ್ಚಿನ ಉಪ್ಪು ಸೇವನೆ ಮಾಡಿದರೆ ಅದು ದೇಹ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ನಂಬಿಕೆ ವ್ಯಾಪಕವಾಗಿದೆ. ಇದು ಎಷ್ಟು ಸತ್ಯ, ಎಷ್ಟು ಮಿಥ್ಯ? ಉಪ್ಪಿನ ಕುರಿತಾದ ತಪ್ಪು ಕಲ್ಪನೆ, ಥಿಯರಿಗಳ ಬಗ್ಗೆ ವಾಸ್ತವ ವರದಿ ಇಲ್ಲಿದೆ ...

ಏನಿದು ಉಪ್ಪಿನ ರಹಸ್ಯ! ಕಡಿಮೆ ಉಪ್ಪು ತಿಂದರೆ ತೂಕ ಇಳಿಸಿಕೊಳ್ಳಬಹುದಂತೆ, ನಿಜವೇ?
ಕಡಿಮೆ ಉಪ್ಪು ತಿಂದರೆ ತೂಕ ಇಳಿಸಿಕೊಳ್ಳಬಹುದಂತೆ! ನಿಜವೇ?
TV9 Web
| Updated By: ಸಾಧು ಶ್ರೀನಾಥ್​|

Updated on: Jun 24, 2022 | 6:06 AM

Share

Does salt increase weight: ಉಪ್ಪಿಗಿಂತ ರುಚಿ ಬೇರೆ ಇಲ್ಲ, ಉಪ್ಪು ರಹಿತ ಆಹಾರ ಸಪ್ಪೆ ಸಪ್ಪೆ ಅನ್ನುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಆರೋಗ್ಯದ ವಿಷಯದಲ್ಲಿ ಸಮ ಪ್ರಮಾಣದ ಉಪ್ಪು ಪ್ರಧಾನ ಪಾತ್ರ ವಹಿಸುತ್ತದೆ. ಆದಾಗ್ಯೂ, ಕಡಿಮೆ ಉಪ್ಪು ಸೇವನೆಯು ತೂಕ ನಷ್ಟಕ್ಕೆ ಕಾರಣವಾಗಬಹುದು ಮತ್ತು ಹೆಚ್ಚಿನ ಉಪ್ಪು ಸೇವನೆಯು ಜೀವಕ್ಕೆ ಹಾನಿಕಾರಕವಾಗಿದೆ ಎಂಬ ವ್ಯಾಪಕ ನಂಬಿಕೆ ಇದೆ. ಇದು ಎಷ್ಟರಮಟ್ಟಿಗೆ ನಿಜ, ನಿಜವಾದ ಉಪ್ಪು ಇಲ್ಲದೆ ಆಹಾರವನ್ನು ಸೇವಿಸಿದರೆ ಹೇಗಿರುತ್ತದೆ? ಇಂತಹ ವಿಷಯಗಳ ಬಗ್ಗೆ ಖ್ಯಾತ ಪೌಷ್ಟಿಕ ಆಹಾರ ತಜ್ಞೆ ಕವಿತಾ ದೇವಗನ್ ಅವರ ಅಭಿಪ್ರಾಯವೇನು ಎಂಬುದನ್ನು ಇಲ್ಲಿ ನೀಡಲಾಗಿದೆ.

ಮಿತಿಮೀರಿ ಉಪ್ಪು ಸೇವನೆಯ ದುಷ್ಪರಿಣಾಮಗಳು

ಆಹಾರದಲ್ಲಿ ಉಪ್ಪು ಅಧಿಕವಾದರೆ ಅಧಿಕ ರಕ್ತದೊತ್ತಡ, ಫ್ಲ್ಯೂಯಿಡ್​​​ಗಳ ಓವರ್​ ಲೋಡ್​, ಹೃದಯ ರಕ್ತನಾಳದ ಅಸ್ವಸ್ಥತೆ ಮತ್ತು ಮೂಳೆಗಳ ಆಸ್ಟಿಯೊಪೊರೋಸಿಸ್‌ (ಅಸ್ಥಿರಂಧ್ರತೆ) ಅಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಉಪ್ಪನ್ನು ಕನಿಷ್ಠವಾಗಿರಿಸುವುದು ಅತಿ ಮುಖ್ಯ. ಉಪ್ಪಿನಲ್ಲಿರುವ ಪೋಷಕಾಂಶಗಳು ನಿಗದಿತ ಪ್ರಮಾಣದಲ್ಲಿ ಸೆವಿಸಿದರೆ ದೇಹದ ಆರೋಗ್ಯಕ್ಕೆ ಅತ್ಯವಶ್ಯ. ಒತ್ತಡ ನಿರ್ವಹಣೆ, ನರಗಳ ಕಾರ್ಯಕ್ಷಮತೆ, ಸ್ನಾಯುಗಳ ಬಲಕ್ಕೆ ಉಪ್ಪು ಅತ್ಯಗತ್ಯ. ದೇಹದಲ್ಲಿನ ವಿವಿಧ ದ್ರವಗಳನ್ನು ಸಮತೋಲನಗೊಳಿಸಲು ಉಪ್ಪು ಸಹ ಸಹಾಯ ಮಾಡುತ್ತದೆ.

ಉಪ್ಪು ರಹಿತ ಆಹಾರ ಸೇವಿಸಿದರೆ..?

ದೇಹದಲ್ಲಿ ಉಪ್ಪಿನ ಪ್ರಮಾಣ ಕಡಿಮೆಯಾಗುವುದರಿಂದ ಬೆವರುವುದು, ವಾಂತಿ, ಅತಿಸಾರ, ಆಯಾಸ, ಕಡಿಮೆ ರಕ್ತದೊತ್ತಡ, ಸ್ನಾಯು ಸೆಳೆತ ಮತ್ತು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಉಪ್ಪನ್ನು ಸೂಕ್ತ ಪ್ರಮಾಣದಲ್ಲಿ ತೆಗೆದುಕೊಳ್ಳುವುದನ್ನು ಮರೆಯಬೇಡಿ. ಆದಾಗ್ಯೂ, ಅಧಿಕ ರಕ್ತದೊತ್ತಡದ ಸಂದರ್ಭದಲ್ಲಿ ಈ ತತ್ವವು ಅನ್ವಯಿಸುವುದಿಲ್ಲ. ಹಾಗಾಗಿ ಅವರು ಸೋಡಿಯಂ ಕಡಿಮೆ ಇರುವ ಉಪ್ಪನ್ನು ಬಳಸಬಹುದು. ಅಯೋಡಿಕರಿಸಿದ ಉಪ್ಪಿನಲ್ಲಿ ಶೇಕಡಾ 15 ರಿಂದ 30 ರಷ್ಟು ಕಡಿಮೆ ಸೋಡಿಯಂ ಇರುತ್ತದೆ.

ಸೋಡಿಯಂ ಕೊರತೆಯು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣ

ವಾಸ್ತವವಾಗಿ ಬೇಯಿಸಬಹುದಾದ ಪ್ರತಿಯೊಂದು ಆಹಾರವು ಸ್ವಲ್ಪ ಉಪ್ಪು (ಸೋಡಿಯಂ ಕ್ಲೋರೈಡ್) ಅನ್ನು ಹೊಂದಿರಬೇಕು. ಏಕೆಂದರೆ ಇದು ನಮ್ಮ ಮಿದುಳಿನ ಜೀವಕೋಶಗಳು ಕೆಲಸ ಮಾಡುವ ವಿಧಾನವನ್ನು ನಿರ್ವಹಿಸುತ್ತದೆ. ದೇಹದಲ್ಲಿ ನೀರಿನ ಸಮತೋಲನವನ್ನು ನಿಯಂತ್ರಿಸುತ್ತದೆ. ಸ್ನಾಯು ಮತ್ತು ನರಗಳ ಕಾರ್ಯವನ್ನು ಉತ್ತೇಜಿಸುತ್ತದೆ. WHO ಪ್ರಕಾರ… ಅಯೋಡಿನ್ ಹೊಂದಿರುವ ಉಪ್ಪು ಗಂಭೀರ ಮಾನಸಿಕ ಮತ್ತು ಬೆಳವಣಿಗೆಯ ಅಸ್ವಸ್ಥತೆಗಳನ್ನು (Intellectual and Developmental Disabilities) ತಂದೊಡ್ಡುತ್ತದೆ.

ಕಡಿಮೆ ಉಪ್ಪು ತಿಂದರೆ ತೂಕ ಇಳಿಸಿಕೊಳ್ಳಬಹುದು.. ನಿಜವೇ?

ಹೆಚ್ಚು ಉಪ್ಪು ಸೇವಿಸಿದರೆ… ದೇಹದಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಹೆಚ್ಚಿಸುತ್ತದೆ. ಆದರೆ, ನೀವು ಹೆಚ್ಚಾಗಿ ಕಡಿಮೆ ಉಪ್ಪು ಆಹಾರವನ್ನು ಸೇವಿಸಿದರೆ, ದೇಹದಲ್ಲಿ ನೀರಿನ ಶೇಕಡಾವಾರು ಪ್ರಮಾಣವು ತ್ವರಿತವಾಗಿ ಕಡಿಮೆಯಾಗುತ್ತದೆ. ಆದರೆ ಕೊಬ್ಬು ಹಾಗೆಯೇ ಇದ್ದುಬಿಡುತ್ತದೆ ಎನ್ನುತ್ತಾರೆ ಮುಂಬೈನ ಅಪೋಲೋ ಆಸ್ಪತ್ರೆ ಕ್ಲಿನಿಕಲ್ ನ್ಯೂಟ್ರಿಷನ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ವರ್ಷಾ ಗೋರ್.

ಉಪ್ಪಿನಿಂದ ತೂಕ ಕಳೆದುಕೊಳ್ಳುವುದು ಸಾಧ್ಯವಿಲ್ಲ

ದೇಹದ ತೂಕವನ್ನು ಕಡಿಮೆ ಮಾಡಲು ಉಪ್ಪು ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ಉಪ್ಪು ಅನ್ನುವ ಪದಾರ್ಥ ರಾಸಾಯನಿಕವಾಗಿ ಸೋಡಿಯಂ ಕ್ಲೋರೈಡ್ (NaCl). ಇದು ನಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಹೈಪೋನಾಟ್ರೀಮಿಯಾ (ಕಡಿಮೆ ರಕ್ತದೊತ್ತಡ) ತಡೆಗಟ್ಟಲು ಸೋಡಿಯಂ ಮಟ್ಟಗಳು 130 ಮತ್ತು 140 mEq / L ನಡುವೆ ಇರಬೇಕು.

ಆದರೆ ಈ ಪ್ರಮಾಣವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅಯೋಡಿಕರಿಸಿದ ಉಪ್ಪಿನ ಸೇವನೆಯು ಸಮತೋಲಿತವಾಗಿರುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡುವುದಕ್ಕಿಂತ ಸಂಸ್ಕರಿತ ಆಹಾರ ಅಂದರೆ ಬೇಕರಿ ಪದಾರ್ಥಗಳು, ಜಂಕ್ ಫುಡ್ ನಿಂದ ದೂರವಿರಬೇಕು.

To read in Telugu click the link 

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?