AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

0-3 ವರ್ಷದೊಳಗಿನ ಶೇ.40ರಷ್ಟು ಮಕ್ಕಳು ದೀರ್ಘಕಾಲದ ಕೋವಿಡ್​ಗೆ ತುತ್ತಾಗಿದ್ದರು: ಲ್ಯಾನ್ಸೆಟ್ ವರದಿ

0-3 ವರ್ಷದೊಳಗಿನ ಶೇ.40ರಷ್ಟು ಮಕ್ಕಳು ದೀರ್ಘಕಾಲದ ಕೋವಿಡ್​ನಿಂದ ಬಳಲಿದ್ದಾರೆ ಎಂದು ಲ್ಯಾನ್ಸೆಟ್ ವರದಿ ಹೇಳಿದೆ. ಈ ಮಕ್ಕಳು ಕನಿಷ್ಠ 2 ತಿಂಗಳುಗಳ ಕಾಲ ಕೋವಿಡ್ ಲಕ್ಷಣಗಳನ್ನು ಹೊಂದಿದ್ದರು ಎನ್ನಲಾಗಿದೆ. ಈ ಮಕ್ಕಳು ಮೂಡ್​ ಸ್ವಿಂಗ್ಸ್, ತುರಿಕೆ, ಹೊಟ್ಟೆ ನೋವಿನ ರೀತಿಯ ಲಕ್ಷಣಗಳು ಕಂಡುಬಂದಿತ್ತು.

0-3 ವರ್ಷದೊಳಗಿನ ಶೇ.40ರಷ್ಟು ಮಕ್ಕಳು ದೀರ್ಘಕಾಲದ ಕೋವಿಡ್​ಗೆ ತುತ್ತಾಗಿದ್ದರು: ಲ್ಯಾನ್ಸೆಟ್ ವರದಿ
Children
TV9 Web
| Edited By: |

Updated on: Jun 24, 2022 | 8:30 AM

Share

0-3 ವರ್ಷದೊಳಗಿನ ಶೇ.40ರಷ್ಟು ಮಕ್ಕಳು ದೀರ್ಘಕಾಲದ ಕೋವಿಡ್​ನಿಂದ ಬಳಲಿದ್ದಾರೆ ಎಂದು ಲ್ಯಾನ್ಸೆಟ್ ವರದಿ ಹೇಳಿದೆ. ಈ ಮಕ್ಕಳು ಕನಿಷ್ಠ 2 ತಿಂಗಳುಗಳ ಕಾಲ ಕೋವಿಡ್ ಲಕ್ಷಣಗಳನ್ನು ಹೊಂದಿದ್ದರು ಎನ್ನಲಾಗಿದೆ. ಈ ಮಕ್ಕಳು ಮೂಡ್​ ಸ್ವಿಂಗ್ಸ್, ತುರಿಕೆ, ಹೊಟ್ಟೆ ನೋವಿನ ರೀತಿಯ ಲಕ್ಷಣಗಳು ಕಂಡುಬಂದಿತ್ತು.

ಡೆನ್​ಮಾರ್ಕ್​ನ ಕೋಪೆನ್​ಹ್ಯಾಗನ್ ಯೂನಿವರ್ಸಿಟಿ ಆಸ್ಪತ್ರೆಯ ಸಂಶೋಧಕರ ಪ್ರಕಾರ, 0-14 ವರ್ಷದ ಕೊರೊನಾ ಸೋಂಕಿಗೆ ಒಳಗಾಗಿರುವ ಒಟ್ಟು 11,000 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. 2020ರ ಜನವರಿಯಿಂದ 2021ರ ಜುಲೈವರೆಗೆ ಸಮೀಕ್ಷೆ ನಡೆಸಲಾಗಿತ್ತು.

4-14 ವರ್ಷದ ಮಕ್ಕಳಲ್ಲಿ ಮೂಡ್ ಸ್ವಿಂಗ್ಸ್​, ತುರಿಕೆ, ಹೊಟ್ಟೆ ಉಬ್ಬುವುದು, ಏಕಾಗ್ರತೆ ಕೊರತೆ, ಮರೆವು ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಈ ಮಕ್ಕಳಲ್ಲಿ ಕನಿಷ್ಠ 2 ತಿಂಗಳುಗಳ ಕಾಲ ಕೊರೊನಾ ಸೋಂಕಿನ ಲಕ್ಷಣಗಳಿದ್ದವು ಎಂದು ಹೇಳಲಾಗಿದೆ.

ಕೊರೊನಾ ವೈರಸ್‌(Corona Virus)ನ ಲಕ್ಷಣಗಳು ಈಗ 10 ಅಥವಾ 14 ದಿನಗಳ ಬದಲು ಕೇವಲ 2 ದಿನಗಳಲ್ಲಿ ಮಾತ್ರ ಗೋಚರಿಸುತ್ತವೆ ಎಂದು ಈ ಸಂಶೋಧನೆಯೊಂದು ಹೇಳಿದೆ. DHSC ಮತ್ತು ರಾಯಲ್ ಫ್ರೀ ಲಂಡನ್ NHS ಫೌಂಡೇಶನ್ ಟ್ರಸ್ಟ್‌ ನ ಸಹಯೋಗದೊಂದಿಗೆ ಲಂಡನ್‌ನ ಇಂಪೀರಿಯಲ್ ಕಾಲೇಜ್ ಈ ಅಧ್ಯಯನವನ್ನು ನಡೆಸಿದೆ.

ಆರೋಗ್ಯವಂತ ಜನರಿಗೆ ಕೊರೊನಾ ಸೋಂಕು ಈ ಅಧ್ಯಯನದಲ್ಲಿ ಆರೋಗ್ಯವಂತ ಜನರೇ ಕೊರೊನಾ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ. ಈ ಎಲ್ಲಾ ಜನರನ್ನು ವೀಕ್ಷಣೆಯಲ್ಲಿಟ್ಟು ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿತ್ತು.

ಸೋಂಕಿಗೆ ಒಳಗಾದ ನಂತರ ದೇಹದಲ್ಲಿ ವೈರಸ್ ಬೆಳವಣಿಗೆ ಮತ್ತು ಅದರ ರೋಗಲಕ್ಷಣಗಳನ್ನು ನಿಕಟವಾಗಿ ಪತ್ತೆಹಚ್ಚಲಾಗಿದೆ. ಈ ಅಧ್ಯಯನವನ್ನು ಇಲ್ಲಿಯವರೆಗಿನ ಅಧ್ಯಯನಕ್ಕಿಂತಲೂ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಹೇಳಲಾಗಿದೆ.

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ