ಕೋವಿಡ್ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ ! ಇಲ್ಲಿದೆ ಅಧ್ಯಯನದ ವರದಿ

ಕೋವಿಡ್ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ ! ಇಲ್ಲಿದೆ ಅಧ್ಯಯನದ ವರದಿ
ಸಾಂದರ್ಭಿಕ ಚಿತ್ರ

ದತ್ತಾಂಶದ ಪ್ರಕಾರ  ಸುಮಾರು 1.3 ಮಿಲಿಯನ್ ರೋಗಿಗಳ ಬಗ್ಗೆ ಸಂಶೋಧನೆಯನ್ನು ನಡೆಸಲಾಗಿದೆ.  ಜಾನ್ಸನ್ ಮತ್ತು ಜಾನ್ಸನ್ ಮುಖ್ಯ ವೈದ್ಯಕೀಯ ಅಧಿಕಾರಿಗಳ ತಂಡ ಈ ಸಂಶೋಧನೆಯನ್ನು ನಡೆಸಿದೆ.

TV9kannada Web Team

| Edited By: ಅಕ್ಷಯ್​ ಕುಮಾರ್​​

Jun 21, 2022 | 7:25 PM

ಪುರುಷರಿಗಿಂತ ಮಹಿಳೆಯರು ಹೆಚ್ಚು ಕೊರೊನಾದಿಂದ ಬಳಲುತ್ತಿದ್ದರೆ. ಇದರೆ ಜೊತೆಗೆ ಅವರು ಗಣನೀಯವಾಗಿ ವಿಭಿನ್ನ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ ಎಂದು ಅಧ್ಯಯನ  ಹೇಳುತ್ತದೆ.  ಲೈಂಗಿಕ-ವಿಂಗಡಣೆಯ ಸಂಶೋಧನೆಯೂ ನಿರ್ಣಾಯಕ ಅಗತ್ಯವನ್ನು ಕೂಡ ಇದನ್ನು  ಹೇಳುತ್ತದೆ. ಕೋವಿಡ್ ಒಂದು ಸೋಂಕು ಆಗಿದ್ದು, ಇದರಲ್ಲಿ ಕೋವಿಡ್ -19 ರ ಆರಂಭಿಕ ಸೋಂಕಿನ ನಂತರ ನಾಲ್ಕು ವಾರಗಳಿಗಿಂತ ಹೆಚ್ಚು ಕಾಲ ತೊಡಕುಗಳು ಇರುತ್ತವೆ, ಕೆಲವೊಮ್ಮೆ ಹಲವು ತಿಂಗಳುಗಳವರೆಗೆ ಇರುತ್ತದೆ.

ದತ್ತಾಂಶದ ಪ್ರಕಾರ  ಸುಮಾರು 1.3 ಮಿಲಿಯನ್ ರೋಗಿಗಳ ಬಗ್ಗೆ ಸಂಶೋಧನೆಯನ್ನು ನಡೆಸಲಾಗಿದೆ.  ಜಾನ್ಸನ್ ಮತ್ತು ಜಾನ್ಸನ್ ಮುಖ್ಯ ವೈದ್ಯಕೀಯ ಅಧಿಕಾರಿಗಳ ತಂಡ ಈ ಸಂಶೋಧನೆಯನ್ನು ನಡೆಸಿದೆ.  ದೀರ್ಘ ಕೋವಿಡ್ ಹೊಂದಿರುವ ಮಹಿಳೆಯರು ಕಿವಿ, ಮೂಗು ಮತ್ತು ಗಂಟಲಿನ ಸಮಸ್ಯೆಗಳು ಸೇರಿದಂತೆ ವಿವಿಧ ರೋಗಲಕ್ಷಣಗಳು ಕಾಣಿಸಿಕೊಂಡಿದೆ. ಮನಸ್ಥಿತಿ ಅಸ್ವಸ್ಥತೆಗಳು, ನರವೈಜ್ಞಾನಿಕ, ಚರ್ಮ, ಜಠರಗರುಳಿನ ಮತ್ತು ಸಂಧಿವಾತ ಅಸ್ವಸ್ಥತೆಗಳು ಜೊತೆಗೆ ಸುಸ್ತು ಈ ರೋಗ ಲಕ್ಷಣಗಳು ಇವರಲ್ಲಿ ಕಂಡು ಬಂದಿದೆ.  ಪುರುಷ ರೋಗಿಗಳಲ್ಲಿ  ಮಧುಮೇಹ ಮತ್ತು ಮೂತ್ರಪಿಂಡದ ಅಸ್ವಸ್ಥತೆಗಳಂತಹ ಲಕ್ಷಣಗಳು ಕಂಡು ಬರುತ್ತದೆ. ಮಹಿಳೆಯರಲ್ಲಿ ದೀರ್ಘ ಕೋವಿಡ್ ಲಕ್ಷಣಗಳು ಕಂಡು ಬಂದಿದೆ, ಇದು ಮತ್ತಷ್ಟು ಬೆಳವಣಿಗೆಯಾಗುವ ಸಾಧ್ಯತೆ ಇದೆ. ಇದು ಪುರುಷರಿಗಿಂತ ಶೇಕಡಾ 22 ರಷ್ಟು ಹೆಚ್ಚು ಎಂದು ಸಂಶೋಧಕರು ಜರ್ನಲ್ ಕರೆಂಟ್ ಮೆಡಿಕಲ್ ರಿಸರ್ಚ್ ಅಂಡ್ ಒಪಿನಿಯನ್‌ನಲ್ಲಿ ಪ್ರಕಟಿಸಿದ ಅಧ್ಯಯನದಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ನಿಮ್ಮ ಕೂದಲಿನ ರಕ್ಷಣೆಗೆ ಈ ಎಣ್ಣೆಗಳನ್ನು ಬಳಸಿ

ವೈದ್ಯರು ಹೇಳುವಂತೆ ಕೊರೊನಾ ಎಂಬುದು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಇತ್ತೀಚೆಗೆ ವೈದ್ಯ ಲೋಕ ಹೇಳಿರುವಂತೆ, ಕೋವಿಡ್ ಕಡಿಮೆಯಾಗಿಲ್ಲ ಅದು ಹೆಚ್ಚಾಗಿ ಬೆಳೆದಿದೆ. ಈ ಕೊರೊನಾ ಪರಿಣಾಮ ಮಹಿಳೆಯರ ಮೇಲೆ ಹೆಚ್ಚು ಪರಿಣಾಮವನ್ನು ಉಂಟು ಮಾಡುವುದು. ಇದನ್ನು ಎರಡು ಭಾಗಗಳಲ್ಲಿ ವೈದ್ಯರು ವಿಂಗಡಣೆ ಮಾಡಿದ್ದಾರೆ. ಅದು ಪುರುಷ ಮತ್ತು ಮಹಿಳೆ. ಹೆಣ್ಣು ಮತ್ತು ಪುರುಷರ ನಡುವಿನ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯಚಟುವಟಿಕೆಯಲ್ಲಿನ ವ್ಯತ್ಯಾಸಗಳು ದೀರ್ಘ ಕೋವಿಡ್ ಸೋಂಕುಗಳು ಲೈಂಗಿಕ ವ್ಯತ್ಯಾಸಗಳನ್ನು ಉಂಟು ಮಾಡಬಹುದು. ಮಹಿಳೆಯರಲ್ಲಿ ಹೆಚ್ಚು ವೇಗವಾಗಿ ಮತ್ತು ದೃಢವಾದ ಸಹಜವಾದ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಹೆಚ್ಚಿಸುತ್ತವೆ, ಇದು ಆರಂಭಿಕ ಸೋಂಕು ಮತ್ತು ತೀವ್ರತೆಯಿಂದ ಅವರನ್ನು ರಕ್ಷಿಸುತ್ತದೆ.  ದೀರ್ಘಕಾಲದ ಸ್ವಯಂ ನಿರೋಧಕ-ಸಂಬಂಧಿತ ಕಾಯಿಲೆಗಳಿಗೆ ಹೆಣ್ಣುಮಕ್ಕಳನ್ನು ಹೆಚ್ಚು ದುರ್ಬಲಗೊಳಿಸುತ್ತದೆ.  ಅಧ್ಯಯನಕ್ಕಾಗಿ, ತಂಡವು 640,634 ಒಟ್ಟು ವರದಿಗಳನ್ನು ಹಾಗೂ 1,393,355 ಅನನ್ಯ ವ್ಯಕ್ತಿಗಳನ್ನು ಪರಿಶೀಲಿಸಿದೆ.

ಶುಶ್ರೂಷೆ ಮತ್ತು ಶಿಕ್ಷಣದಂತಹ ಕೆಲವು ವೃತ್ತಿಗಳಲ್ಲಿ ಮಹಿಳೆಯರು ವೈರಸ್‌ ನಿಂದ  ಹೆಚ್ಚಿನ ಅಪಾಯವನ್ನು ಹೊಂದಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.  ಇದರ ಜೊತೆಗೆ ಅವರ ಆರೈಕೆ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡಿರುಬಹುದು ಮತ್ತು ಹಳ್ಳಿ ಪ್ರದೇಶದ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡಿದೆ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada