Summer Solstice 2022: ‘ಸಮ್ಮರ್ ಸೋಲ್ಟಿಸ್’ ಇಂದು ಅಯನ ಸಂಕ್ರಾಂತಿ
Solstice : ಪ್ರಖರವಾಗಿ ಹೊಮ್ಮುವ ಸೂರ್ಯ ಭೂಮಿಯನ್ನು ಪ್ರೀತಿಸುವ ವಿಧಾನವೆಂದು, ಅದಕ್ಕಾಗಿಯೇ ಅವನು ಅವಳಿಂದ ದೂರವಿರಲು ಇಷ್ಟಪಡುವುದಿಲ್ಲ ಎನ್ನುವ ನಂಬಿಕೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
Summer Solstice 2022: ‘ಅಯನ ಸಂಕ್ರಾಂತಿ’ಯು ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ. ‘ಸೋಲ್ಟಿಸ್’ ಲ್ಯಾಟಿನ್ನ ‘ಸೋಲ್’ ಎಂಬ ಪದದಿಂದ ಹುಟ್ಟಿದೆ. ಇದು ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ, ಉತ್ತರ ಗೋಳಾರ್ಧದಲ್ಲಿ (ಜೂನ್ 20-22 ರ ನಡುವೆ) ಮತ್ತು ಒಮ್ಮೆ ದಕ್ಷಿಣ ಗೋಳಾರ್ಧದಲ್ಲಿ (ಡಿಸೆಂಬರ್ 20-23 ರ ನಡುವೆ). ಬೇಸಿಗೆಯ ಅಯನ ಸಂಕ್ರಾಂತಿಯ ಸಮಯದಲ್ಲಿ ಹಗಲು ದೀರ್ಘವಾಗಿದ್ದರೆ, ಚಳಿಗಾಲದ ಅಯನ ಸಂಕ್ರಾಂತಿಯ ಹಗಲಿನ ಅವಧಿ ಕಡಿಮೆ ಇರುತ್ತದೆ. ಬೇಸಿಗೆಯ ಅಯನ ಸಂಕ್ರಾಂತಿಯಲ್ಲಿ ಆಕಾಶದಾದ್ಯಂತ ಸೂರ್ಯನ ಮಾರ್ಗವು ವಕ್ರವಾಗಿದೆ ಚಲಿಸುತ್ತಿರುತ್ತದೆ. ಹಾಗಾಗಿ ಮನೆಯೊಳಗೆ ತೂರಿಬಂದ ಬೆಳಕಿನ ಪ್ರಖರತೆ ಹೆಚ್ಚಿರುತ್ತದೆ. ಬೇಸಿಗೆಯ ಅಯನ ಸಂಕ್ರಾಂತಿಯನ್ನು ಮಿಡ್ಸಮ್ಮರ್ ಅಥವಾ ಬೇಸಿಗೆಯ ಮೊದಲ ದಿನ ಎಂದು ಪಾಶ್ಚಿಮಾತ್ಯ ದೇಶಗಳಲ್ಲಿ ಕರೆಯಲಾಗುತ್ತದೆ.
ಕೆಲವು ಕ್ರಿಶ್ಚಿಯನ್ ಚರ್ಚುಗಳು ಜಾನ್ ಬ್ಯಾಪ್ಟಿಸ್ಟ್ ಜನ್ಮದಿನದ ಸ್ಮರಣಾರ್ಥ ಸೇಂಟ್ ಜಾನ್ಸ್ ಡೇ ಎಂದು ಕರೆಯುತ್ತವೆ. ಪೇಗನ್ ಜಾನಪದದ ಪ್ರಕಾರ, ಜನರು ಬೇಸಿಗೆಯ ಅಯನ ಸಂಕ್ರಾಂತಿಯಂದು ಕಾಣಿಸಿಕೊಳ್ಳುವ ದುಷ್ಟಶಕ್ತಿಗಳನ್ನು ದೂರವಿಡಲು ಸೇಂಟ್ ಜಾನ್ಸ್ ವರ್ಟ್ ಎಂದು ಕರೆಯಲ್ಪಡುವ ‘ಚೇಸ್ ಡೆವಿಲ್’ ನಂತಹ ಗಿಡಮೂಲಿಕೆಗಳು ಮತ್ತು ಹೂವುಗಳ ಮಾಲೆಯನ್ನು ಶ್ರೀರಕ್ಷೆ ಎಂಬಂತೆ ಧರಿಸುತ್ತಾರೆ.
ಇದನ್ನೂ ಓದಿ : Health Tips: ನಿದ್ರಾಹೀನತೆಗೆ ಧ್ಯಾನ ಮತ್ತು ಯೋಗಾಸನ ಪರಿಣಾಮಕಾರಿ; ಯಾವ ಆಸನಗಳು ಬೆಸ್ಟ್? ಇಲ್ಲಿವೆ ನೋಡಿ
ಸೌರಮಂಡಲದಿಂದ ಹೊಮ್ಮುವ ಈ ಪ್ರಖರ ಉಷ್ಣವನ್ನು ಭೂಮಿ, ಸಮುದ್ರವು ಶಕ್ತರೂಪದಲ್ಲಿ ಹೀರಿಟ್ಟು ಸಂಗ್ರಹಿಸಿಕೊಳ್ಳುತ್ತವೆ. ಸೂರ್ಯ ಭೂಮಿಯನ್ನು ಪ್ರೀತಿಸುವ ವಿಧಾನವೆಂದು, ಅದಕ್ಕಾಗಿಯೇ ಅವನು ಅವಳಿಂದ ದೂರವಿರಲು ಇಷ್ಟಪಡುವುದಿಲ್ಲ ಎನ್ನುವ ನಂಬಿಕೆ. ಇದನ್ನು ದೀಪಗಳನ್ನು ಬೆಳಗಿಸುವುದರ ಮೂಲಕ ಜನರು ಪೂಜಿಸಿ ಸಂಭ್ರಮಿಸುತ್ತಾರೆ. ಹಾಗೆಯೇ ಕೆಟ್ಟ ಶಕ್ತಿಗಳನ್ನು ಓಡಿಸಲು ಒಳ್ಳೆಯ ಶಕ್ತಿಯನ್ನು ಆಹ್ವಾನಿಸಿಕೊಳ್ಳಲು ಈ ಸಮಯ ಸೂಕ್ತ ಎಂಬ ನಂಬಿಕೆ ಇನ್ನೂ ಕೆಲವರದು.
ಇದನ್ನೂ ಓದಿ : Health and Beauty : ಈ ಕಾಫಿ ಅಂದ್ರೆ ಬರೀ ಕುಡಿಯೋದಕ್ಕಷ್ಟೇ ಅಲ್ಲ
ಇನ್ನೂ ಇದೇ ಸಂದರ್ಭವನ್ನು ಪಾಶ್ಚಿಮಾತ್ಯರು ಕಡಲತೀರದಲ್ಲಿ ಕಳೆಯಲು ಇಷ್ಟಪಡುತ್ತಾರೆ. ಸಮುದ್ರದ ಅಲೆಗಳಲ್ಲಿ ಮೀಯುವುದು, ಸ್ನೇಹಿತರೊಂದಿಗೆ ಖುಷಿಯಿಂದ ಕಾಲ ಕಳೆಯುವುದು, ಫೈರ್ಕ್ಯಾಂಪ್, ಸಾಹಸಕ್ರೀಡೆಗಳ ಮೂಲಕ ಪರಸ್ಪರ ಹರ್ಷಚಿತ್ತರಾಗುವುದು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಂಭ್ರಮಿಸುತ್ತಾರೆ.