ಜೀವ ಜಲ: ನಿರ್ಜಲೀಕರಣದ ಬಗ್ಗೆ ಎಚ್ಚರಿಸುವ ಪ್ರಮುಖ ಚಿಹ್ನೆಗಳನ್ನು ತಿಳಿದುಕೊಂಡು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ!

Dehydration: ಮಾನವನ ದೇಹದಲ್ಲಿ ಶೇ. 70ರಷ್ಟು ನೀರು ತುಂಬಿರುತ್ತದೆ. ಇದು ನಾವು ಬಾಲ್ಯದಿಂದಲೂ ಕಲಿತಿರುವ ವಿಷಯ. ಆದರೂ ಆಹಾರ ಸೇವಿಸದೆ ಕೆಲವು ದಿನ ಇರಬಹುದು. ಆದರೆ, ಕುಡಿಯುವ ನೀರಿಲ್ಲದೆ ಹೆಚ್ಚು ಬದುಕಲು ಸಾಧ್ಯವಿಲ್ಲ! ಅಲ್ಲವಾ?

ಜೀವ ಜಲ: ನಿರ್ಜಲೀಕರಣದ ಬಗ್ಗೆ ಎಚ್ಚರಿಸುವ ಪ್ರಮುಖ ಚಿಹ್ನೆಗಳನ್ನು ತಿಳಿದುಕೊಂಡು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ!
ನಿರ್ಜಲೀಕರಣದ ಬಗ್ಗೆ ಎಚ್ಚರಿಸುವ ಪ್ರಮುಖ ಚಿಹ್ನೆಗಳನ್ನು ತಿಳಿದುಕೊಂಡು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 22, 2022 | 6:06 AM

ಮಾನವನ ದೇಹದಲ್ಲಿ ಶೇ. 70ರಷ್ಟು ನೀರು ತುಂಬಿರುತ್ತದೆ. ಇದನ್ನು ನಾವು ಬಾಲ್ಯದಲ್ಲಿಯೇ ಕಲಿತಿರುವ ವಿಷಯ. ಆಹಾರ ಸೇವಿಸದೆ ನಾವು ಕೆಲ ದಿನ ಇರಬಹುದು. ಆದರೆ, ಜೀವ ಜಲವಾದ ನೀರಿಲ್ಲದೆ (drinking water) ಬದುಕುವುದು ಅತ್ಯಂತ ಕಷ್ಟದ ಸಂಗತಿಯಾಗಿದೆ. ಪ್ರತಿದಿನ ಕನಿಷ್ಠ 2 – 4 ಲೀಟರ್ ನೀರು ಕುಡಿಯುವುದರಿಂದ ಈ ನಿರ್ಜಲೀಕರಣವನ್ನು (Dehydration) ತಪ್ಪಿಸಬಹುದು (benefits of drinking water sufficiently).

ಆದರೆ, ದುರದೃಷ್ಟವಶಾತ್, ನಮ್ಮಲ್ಲಿ ಕೆಲವರು ಪ್ರತಿದಿನ ಸಾಕಷ್ಟು ನೀರು ಕುಡಿಯುವುದಿಲ್ಲ. ಹಾಗಾಗಿ ಅವರು ಆಗಾಗ್ಗೆ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಅವರಲ್ಲಿ ಕೆಲವರು ರೋಗಲಕ್ಷಣಗಳನ್ನು ಹೊಂದುತ್ತಾರೆ. ನಿರ್ಜಲೀಕರಣವನ್ನು ತಪ್ಪಿಸಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ. ನೀವೂ ಕಂಡುಕೊಳ್ಳಿ.

ಲಾಲಾರಸವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ನಿರ್ಜಲೀಕರಣದಿಂದಾಗಿ ದೇಹವು ಅಹತ್ಯವಿರುವಷ್ಟು ಲಾಲಾರಸ ಉತ್ಪತ್ತಿ ಮಾಡುವುದನ್ನು ತಡೆಯುತ್ತದೆ. ಇದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಇದರಿಂದ ಬಾಯಿ ದುರ್ವಾಸನೆ ಬರಬಹುದು. ಈ ಕಾರಣದಿಂದಲೇ ಜನರು ಸಾಮಾನ್ಯವಾಗಿ ಬೆಳಗ್ಗೆ ದುರ್ವಾಸನೆಯೊಂದಿಗೆ ಏಳುವುದು. ರಾತ್ರಿಯ ಸಮಯದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯಿಂದ ಬಾಯಿಯ ದುರ್ವಾಸನೆ ಉಂಟಾಗುತ್ತದೆ.

ನಿರ್ಜಲೀಕರಣಗೊಂಡ ಜನರಲ್ಲಿ, ವಿಶೇಷವಾಗಿ ಬಾಯಿಯ ಒಳಭಾಗವು ಮರುಭೂಮಿಯಂತೆ ಒಣಗಿದಾಗ, ನಿಮ್ಮ ನಾಲಿಗೆಯು ನಿಮ್ಮ ಕೆನ್ನೆಯ ಸುತ್ತಲೂ ಮರಳು ಸುತ್ತುವಂತೆ ಭಾಸವಾಗುತ್ತದೆ, ಅಂದರೆ ನೀವು ತೀವ್ರ ನಿರ್ಜಲೀಕರಣವನ್ನು ಅನುಭವಿಸುತ್ತಿದ್ದೀರಿ ಎಂದರ್ಥ. ನಿರ್ಜಲೀಕರಣವು ನಿಮ್ಮ ಮೆದುಳಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ತೀವ್ರ ಆಯಾಸವನ್ನು ಪ್ರಚೋದಿಸುತ್ತದೆ ಮತ್ತು ನಿದ್ರೆಯ ಬಯಕೆಯನ್ನು ಹೆಚ್ಚಿಸುತ್ತದೆ.

ಅವರ ಚರ್ಮ ಮತ್ತು ಕಣ್ಣುಗಳು ಒಣಗುತ್ತವೆ. ಆಲಸ್ಯ ಬೇಸರ ಆಗುತ್ತದೆ. ಜೊತೆಗೆ.. ಅವರಲ್ಲಿ ಮೂತ್ರದ ಸಮಸ್ಯೆಗಳು ಉದ್ಭವಿಸುತ್ತವೆ. ತಲೆತಿರುಗುವಿಕೆ ಬರುತ್ತದೆ. ಸ್ನಾಯುಗಳಲ್ಲಿ ನೋವಿರುವಂತೆ ಭಾಸವಾಗುತ್ತವೆ. ತಲೆನೋವು ಹೆಚ್ಚಾಗಿ ಬರುತ್ತದೆ. ಕೆಲವರು ವೇಗದ ಹೃದಯ ಬಡಿತದಂತಹ ಲಕ್ಷಣ ತೋರುತ್ತಾರೆ. ಬೇಸಿಗೆಯಲ್ಲಿ ಮಾತ್ರ ದೇಹವು ನಿರ್ಜಲೀಕರಣದಿಂದ ಬಳಲುವುದಿಲ್ಲ. ಎಲ್ಲಾ ಅವಧಿಗಳಲ್ಲಿ ದೇಹದಲ್ಲಿ ನೀರಿನ ಶೇಕಡಾವಾರು ಪ್ರಮಾಣ ಕಡಿಮೆಯಾದಾಗ ನಿರ್ಜಲೀಕರಣದ ಸಮಸ್ಯೆ ಉಂಟಾಗುತ್ತದೆ.

ನಿಮ್ಮ ದೇಹದಲ್ಲಿನ ಎಲೆಕ್ಟ್ರೋಲೈಟ್ ಮಟ್ಟಗಳು ಅಸಮತೋಲನಕ್ಕೆ ಕಾರಣವಾಗುವುದರಿಂದ ಸ್ನಾಯು ಸೆಳೆತಗಳು ಸಾಮಾನ್ಯವಾಗಿ ಸಂಭವಿಸುತ್ತವೆ. ಇದು ನಿರ್ಜಲೀಕರಣದ ಮತ್ತೊಂದು ಲಕ್ಷಣವಾಗಿದೆ. ನೀವು ಗಾಢ ಹಳದಿ ಮೂತ್ರ ವಿಸರ್ಜಿಸಿದಾಗ ನೀವು ತುಂಬಾ ಉರಿಯೂತವನ್ನು ಅನುಭವಿಸಿದರೆ, ನೀವು ಬೇಗನೆ ನೀರನ್ನು ಕುಡಿಯಬೇಕು. ಏಕೆಂದರೆ ಇದು ತೀವ್ರ ನಿರ್ಜಲೀಕರಣದ ಸಂಕೇತವಾಗಿದ್ದು, ಅದನ್ನು ತಕ್ಷಣ ಮೆಟ್ಟಿನಿಲ್ಲಬೇಕಾಗುತ್ತದೆ.

To read in Telugu click the link here

ಮಗುವಿಗೆ ಕಾಯಿಲೆ: ಮಹಿಳೆಯ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಏನು ಮಾಡಿದರು ಗೊತ್ತಾ?

ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್